ನಾನ್ವೆಜ್ ಪ್ರಿಯರೇ ಜೇಬು ಗಟ್ಟಿಯಾಗಿದೆಯಾ? – ಚಿಕನ್, ಮಟನ್ ರೇಟ್ ಕೇಳಿದ್ರೆ ಶಾಕ್ ಆಗ್ತೀರಾ?

ನಾನ್ವೆಜ್ ಪ್ರಿಯರೇ ಜೇಬು ಗಟ್ಟಿಯಾಗಿದೆಯಾ? – ಚಿಕನ್, ಮಟನ್ ರೇಟ್ ಕೇಳಿದ್ರೆ ಶಾಕ್ ಆಗ್ತೀರಾ?

ಬೆಂಗಳೂರಿನಲ್ಲಿ ನಾನ್‌ವೆಜ್ ಪ್ರಿಯರಿಗೆ ಶಾಕಿಂಗ್ ನ್ಯೂಸ್. ಮಾಂಸಪ್ರಿಯರಿಗೆ ಊಟಕ್ಕೆ ನಾನ್‌ವೆಜ್ ಬೇಕು ಅಂದರೆ, ಜೇಬು ಗಟ್ಟಿಯಾಗಿರಲೇಬೇಕು. ಚಿಕನ್ ದರ ಕೆಜಿಗೆ 300ರಿಂದ 340 ರೂಪಾಯಿಗೇರಿದೆ. ಜೊತೆಗೆ ಮಟನ್ ದರವೂ ಜಾಸ್ತಿಯಾಗಿದೆ.

ಇದನ್ನೂ ಓದಿ:ಟ್ರಾಫಿಕ್‌ನಲ್ಲಿ ಬೆಂಗಳೂರೇ ವಿಶ್ವಕ್ಕೆ .ನಂ. 2 – 10 ಕಿ.ಮೀ. ಸಂಚಾರಕ್ಕೆ ಬೇಕು 40 ನಿಮಿಷ!

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮಾಂಸಹಾರಿಗಳಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ರಾಜ್ಯದಲ್ಲಿ ಚಿಕನ್ ದರ 300 ರಿಂದ 340 ರೂಪಾಯಿಗೆ ಏರಿಕೆಯಾಗಿದೆ. ಜೊತೆಗೆ ಮೇಕೆ ಹಾಗೂ ಕುರಿ ಮಾಂಸದ ಬೆಲೆಯೂ ದುಬಾರಿಯಾಗಿದೆ. ಪೂರೈಕೆ ಕೊರತೆ, ಉತ್ಪಾದನೆ ಪ್ರಮಾಣ ಕುಸಿತದಿಂದ ಕರ್ನಾಟಕದಲ್ಲಿ ಕೋಳಿ ಮಾಂಸದ ಬೆಲೆ ಭಾರಿ ಏರಿಕೆಯಾಗಿದೆ. ರಾಜ್ಯದಲ್ಲಿ 200 ರೂಪಾಯಿ ಇದ್ದ ಕೋಳಿ ಮಾಂಸ ಇದೀಗ ದಿಢೀರ್ ಪ್ರತಿ ಕೆಜಿಗೆ 300 ರಿಂದ 340 ರೂಪಾಯಿಗೆ ಏರಿಕೆಯಾಗಿದೆ. ಚಿಕನ್ ಪ್ರತಿ ಕೆಜಿಗೆ ಗರಿಷ್ಠ 340 ರೂಪಾಯಿಗೆ ಏರಿಕೆಯಾಗಿದೆ. ಇತ್ತ ಕುರಿ, ಮೇಕೆ ಮಾಂಸದ ದರ ಬೆಂಗಳೂರಿನಲ್ಲಿ ಪ್ರತಿ ಕೆಜಿಗೆ 800 ರಿಂದ 900 ರೂಪಾಯಿಗೆ ಏರಿಕೆಯಾಗಿದೆ.

ಹೋಟೆಲ್ , ರೆಸ್ಟೋರೆಂಟ್‌ಗಳಲ್ಲೂ ಈ ಬೆಲೆ ಏರಿಕೆಯ ಬಿಸಿ ತಟ್ಟಿದೆ. ನಾನ್ ವೆಜ್ ಐಟಮ್ಸ್ ಗೆ ರೇಟ್ ಜಾಸ್ತಿಯಾಗಿದೆ. ನಾನ್ ವೆಜ್ ಮೆನುವಿನಲ್ಲಿ ದರ ಏರಿಕೆಯಾಗಿದೆ. ಬೆಲೆ ಏರಿಕೆಯಿಂದ ಸದ್ಯ ಶೇಕಡಾ 10 ರಷ್ಟು ವ್ಯಾಪಾರದಲ್ಲಿ ಕುಸಿತವಾಗಿದೆ ಎಂಬ ವರದಿಯಿದೆ. ಬೆಲೆ ಎಷ್ಟೇ ಆಗಿರಲಿ, ಊಟದ ತಟ್ಟೆಯಲ್ಲಿ ಒಂದು ತುಂಡು ಇಲ್ಲದಿದ್ದರೆ ಊಟ ಸೇರಲ್ಲ ಅನ್ನೋರು ನಿಮ್ಮ ಜೇಬು ಗಟ್ಟಿಯಾಗಿದೆಯಾ ಅಂತಾ ಪರೀಕ್ಷಿಸಿಕೊಳ್ಳಿ.

Sulekha