ಪಲಾಶ್ ಮುಚ್ಚಲ್ಗೆ ಕಾನೂನು ಸಂಕಷ್ಟ! – ನಿರ್ಮಾಪಕರಿಗೆ 40 ಲಕ್ಷ ರೂ. ವಂಚನೆ ಮಾಡಿದ್ರಾ?

ಇತ್ತೀಚೆಗೆ ಆರ್ಸಿಬಿ ನಾಯಕಿ ಸ್ಮೃತಿ ಮಂದಾನ ಮದುವೆ ಮುರಿದುಬಿದ್ದಿತ್ತು. ಈ ಬೆನ್ನಲ್ಲೇ ಪಲಾಶ್ ಮುಚ್ಚಲ್ ಮೇಲೆ ಸಾಕಷ್ಟು ಆರೋಪಗಳು ಕೇಳಿಬಂದಿತ್ತು. ಇದೀಗ ಪಲಾಶ್ ಮತ್ತೆ ಸುದ್ದಿಯಲ್ಲಿದ್ದಾರೆ. ಪಲಾಶ್ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಸಾಲು ಸಾಲು ರಜೆ ಎಫೆಕ್ಟ್! – ಮತ್ತೆ ಸುಲಿಗೆಗೆ ಇಳಿದ್ರಾ ಖಾಸಗಿ ಬಸ್ ಮಾಲಿಕರು?
ಪಲಾಶ್ ಮುಚ್ಚಲ್ ಅವರು ನಟ ನಟ ಮತ್ತು ನಿರ್ಮಾಪಕ ವಿಜ್ಞಾನ್ ಮಾನೆ ಎಂಬುವವರಿಗೆ ಮೋಸ ಮಾಡಿರುವ ಆರೋಪ ಕೇಳಿಬಂದಿದೆ. ಮಹಾರಾಷ್ಟ್ರದ ನಿರ್ಮಾಪಕರೊಬ್ಬರು ಪಲಾಶ್ ₹40 ಲಕ್ಷ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದೀಗ ಪೊಲೀಸ್ ಠಾಣೆಯಲ್ಲಿ ಪಲಾಶ್ ವಿರುದ್ಧ ಎಫ್ಐಆರ್ ದೂರು ದಾಖಲಿಸಿದ್ದಾರೆ.
ಅಷ್ಟಕ್ಕೂ ಆಗಿದ್ದೇನು?
ಚಲನಚಿತ್ರ ನಿರ್ಮಾಣದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿಸಿದ್ದರಿಂದ, ಪಲಾಶ್ ತಮ್ಮ ಮುಂಬರುವ ಯೋಜನೆಯಾದ ನಜಾರಿಯಾದಲ್ಲಿ ನಿರ್ಮಾಪಕರಾಗಿ ಹೂಡಿಕೆ ಮಾಡಬಹುದೆಂದು ಹೇಳಿದರು ಎಂದು ದೂರುದಾರರು ಹೇಳಿದ್ದಾರೆ. ಚಿತ್ರ ಒಟಿಟಿ ಪ್ಲಾಟ್ಫಾರ್ಮ್ಗಳಲ್ಲಿ ಬಿಡುಗಡೆಯಾದ ನಂತರ, ₹25 ಲಕ್ಷ ಹೂಡಿಕೆಯಲ್ಲಿ ₹12 ಲಕ್ಷ ಲಾಭ ಗಳಿಸಬಹುದು ಎಂದು ಪಲಾಶ್ ಅವರಿಗೆ ಹೇಳಿದ್ದರು. ಚಿತ್ರದಲ್ಲಿ ಒಂದು ಪಾತ್ರವನ್ನು ಸಹ ನೀಡುವುದಾಗಿ ಹೇಳಿದ್ದರು. ಆ ನಂತರ ಇಬ್ಬರೂ ಎರಡು ಬಾರಿ ಭೇಟಿಯಾದರು ಮತ್ತು ಮಾರ್ಚ್ 2025 ರ ಹೊತ್ತಿಗೆ ಪಲಾಶ್ಗೆ ಒಟ್ಟು ₹40 ಲಕ್ಷ ನೀಡಿದ್ದೆ. ಆದರೆ, ಪ್ರಾಜೆಕ್ಟ್ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ವಿಜ್ಞಾನ್ ತನ್ನ ಹಣವನ್ನು ಹಿಂತಿರುಗಿಸುವಂತೆ ಹೇಳಿದ್ದಾರೆ, ಆದರೆ ಆಗ ಪಲಾಶ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ವಿಜ್ಞಾನ್ ಇದೀಗ ಪೊಲೀಸರ ಮೊರೆ ಹೋಗಿದ್ದಾರೆ.

ನೋಡಿರಿ

