ಲೇಟ್ ಆಗಿ ಊಟ ಮಾಡುತ್ತೀರಾ? – ಈ ತಪ್ಪು ಮಾಡಿದ್ರೆ ಆರೋಗ್ಯಕ್ಕೆ ಕುತ್ತು!

ಇತ್ತೀಚೆಗೆ ಕೆಲವರು ರಾತ್ರಿ ವೇಳೆ ತುಂಬಾ ಲೇಟ್ ಆಗಿ ಊಟ ಮಾಡ್ತಾರೆ. ಇನ್ನೂ ಕೆಲವರು ಫಾಸ್ಟ್ ಫುಡ್ ತಿನ್ನುತ್ತಾರೆ. ರಾತ್ರಿ ಊಟ ಮಾಡುವುದೇ ಇಲ್ಲ. ಹೀಗೆ ಮಾಡಿದ್ರೆ ನಿಮ್ಮ ಆರೋಗ್ಯ ಹಾಳಾಗುತ್ತೆ. ರಾತ್ರಿ ಲೇಟ್ ಆಗಿ ಊಟ ಮಾಡಿದ್ರೆ ಹೃದಯದ ಆರೋಗ್ಯಕ್ಕೆ ಅಪಾಯಕಾರಿ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಮೊಸರನ್ನು ಫ್ರಿಡ್ಜ್‌ನಲ್ಲಿ ಇಡುತ್ತೀರಾ? – ಈ ತಪ್ಪು ಮಾಡಿದ್ರೆ ನಿಮ್ಮ ಆರೋಗ್ಯಕ್ಕೆ ಕುತ್ತು!
ರಾತ್ರಿ 9 ಗಂಟೆಯ ನಂತರ ಊಟ ಮಾಡುವ ಜನರಿಗೆ ಪಾರ್ಶ್ವವಾಯು ಮತ್ತು ಹೃದಯ ಕಾಯಿಲೆಗಳು ಬರುವ ಅಪಾಯವು ಶೇಕಡಾ 28 ರಷ್ಟು ಹೆಚ್ಚಾಗಿದೆ ಎಂದು ನೇಚರ್ ಕಮ್ಯುನಿಕೇಷನ್ಸ್ ನಲ್ಲಿ ಪ್ರಕಟವಾದ ಅಧ್ಯಯನ ವರದಿಯಿಂದ ಗೊತ್ತಾಗಿದೆ.. ಹೀಗಾಗಿ ರಾತ್ರಿ 7 ರಿಂದ 8 ಗಂಟೆಯ ಒಳಗೆ ಊಟ ಮಾಡುವುದು ಒಳ್ಳೆಯದು ಎಂದು ತಜ್ಞರು ಎಚ್ಚರಿಸಿದ್ದಾರೆ.
ನಮ್ಮ ದೇಹವು ‘ಸರ್ಕಾಡಿಯನ್ ರಿದಮ್’ ಎಂಬ ನೈಸರ್ಗಿಕ ಜೈವಿಕ ಗಡಿಯಾರದ ಮೇಲೆ ಕಾರ್ಯನಿರ್ವಹಿಸುತ್ತದೆ. ಇದು ಜೀರ್ಣಕ್ರಿಯೆ, ಚಯಾಪಚಯ ಮತ್ತು ಹೃದಯದ ಕಾರ್ಯವನ್ನು ನಿಯಂತ್ರಿಸುತ್ತದೆ. ಬೇಗನೆ ತಿನ್ನುವುದರಿಂದ ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ. ಈ ಕಾರಣದಿಂದಾಗಿ, ದೇಹವು ಪೋಷಕಾಂಶಗಳನ್ನು ಸರಿಯಾಗಿ ಹೀರಿಕೊಳ್ಳುತ್ತದೆ. ರಾತ್ರಿ 9 ಗಂಟೆಯ ನಂತರ ತಿನ್ನುವುದರಿಂದ ಈ ಲಯ ಅಡ್ಡಿಯಾಗುತ್ತದೆ ಮತ್ತು ಮಹಿಳೆಯರಲ್ಲಿ ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ.
ಬೇಗ ಊಟ ಮಾಡುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಹಾಗೇ ನಿದ್ರೆಯನ್ನು ಉತ್ತೇಜಿಸುತ್ತದೆ. ಅಂದರೆ ಬೇಗ ಊಟ ಮಾಡುವುದರಿಂದ ದೇಹವು ಆಹಾರವನ್ನು ಜೀರ್ಣಿಸಿಕೊಳ್ಳಲು ಸಾಕಷ್ಟು ಸಮಯ ನೀಡುತ್ತದೆ. ಇದ್ರಿಂದಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸಿಕೊಳ್ಳೋದಿಲ್ಲ. ಇನ್ನು ರಾತ್ರಿಯಲ್ಲಿ ನಿರ್ದಿಷ್ಟ ಸಮಯದಲ್ಲಿ ಊಟ ಮಾಡಿದ್ರೆ ತೂಕ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಹೀಗಾಗಿ ರಾತ್ರಿ 7 ಗಂಟೆಯ ಒಳಗೆ ಊಟ ಮಾಡಿ. ನಿಮ್ಮ ಆರೋಗ್ಯವನ್ನು ನೀವು ಕಾಪಾಡಿಕೊಳ್ಳಿ.

ನೋಡಿರಿ

