ಹಾಲು ಕುಡಿದ್ರೆ ಈ ಸಮಸ್ಯೆ ಬರುತ್ತೆ? – ಯಾರೆಲ್ಲಾ ಹಾಲು ಕುಡಿಯಬಾರದು?

ಹಾಲು ಕುಡಿಯೋದು ಆರೋಗ್ಯಕ್ಕೆ ಒಳ್ಳೆಯದು. ಹಾಲು ಕುಡಿಯೋದ್ರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ, ಮೂಳೆಗಳು ಗಟ್ಟಿಯಾಗುತ್ತದೆ ಅಗತ್ಯ ಪೋಷಕಾಂಶಗಳಿವೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಆದ್ರೆ ಹಾಲು ಎಲ್ಲರಿಗೂ ಒಳ್ಳೆಯದಲ್ಲ. ಹಾಲು ಕುಡಿಯೋದ್ರಿಂದ ಕೆಲವರ ಆರೋಗ್ಯ ಹಾಳಾಗುತ್ತೆ.
ಇದನ್ನೂ ಓದಿ: ಮೊಸರನ್ನು ಫ್ರಿಡ್ಜ್‌ನಲ್ಲಿ ಇಡುತ್ತೀರಾ? – ಈ ತಪ್ಪು ಮಾಡಿದ್ರೆ ನಿಮ್ಮ ಆರೋಗ್ಯಕ್ಕೆ ಕುತ್ತು!
ತಜ್ಞರ ಪ್ರಕಾರ ಹಾಲು ಎಲ್ಲರ ದೇಹಕ್ಕೂ ಸರಿಹೊಂದುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಲ್ಯಾಕ್ಟೋಸ್ ಅಸಹಿಷ್ಣುತೆ. ಈ ಸ್ಥಿತಿಯಿರುವ ಜನರಲ್ಲಿ ಲ್ಯಾಕ್ಟೇಸ್ ಕಿಣ್ವ ಕಡಿಮೆ ಮಟ್ಟದಲ್ಲಿರುವುದರಿಂದ ಹಾಲನ್ನು ಜೀರ್ಣಿಸಿಕೊಳ್ಳಲು ತೊಂದರೆಯಾಗುತ್ತದೆ. ಇದು ಗ್ಯಾಸ್ಟ್ರಿಕ್, ಹೊಟ್ಟೆ ನೋವು ಮತ್ತು ಅತಿಸಾರದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಕೆಲವರಿಗೆ ಹಾಲಿನ ಅಲರ್ಜಿ ಅಥವಾ ಲೋಳೆ ಅಥವಾ ಕಫದ ಸಮಸ್ಯೆ ಕೂಡ ಕಂಡುಬರುತ್ತದೆ. ಇದು ಶೀತ ಸಂಬಂಧಿತ ಅಥವಾ ಉಸಿರಾಟದ ಸಮಸ್ಯೆಗಳನ್ನು ಇನ್ನೂ ಹೆಚ್ಚಿಸುತ್ತೆ. ಜೊತೆಗೆ ಜೀರ್ಣಕ್ರಿಯೆ ಸಮಸ್ಯೆ ಇರುವವರಿಗೂ ಇದು ಒಳ್ಳೆಯದಲ್ಲ. ಕೆಲವರಲ್ಲಿ, ಹಾಲು ಸೇವನೆಯಿಂದ ಚರ್ಮ ಸಂಬಂಧಿತ ಸಮಸ್ಯೆಗಳು ಉಂಟಾಗಬಹುದು. ಅದರಲ್ಲಿಯೂ ಎಣ್ಣೆಯುಕ್ತ ಚರ್ಮ ಇರುವವರಿಗೆ, ಮೊಡವೆಗಳಿಂದ ಬಳಲುತ್ತಿರುವವರಿಗೆ ಒಳ್ಳೆಯದಲ್ಲ.
ಹಾಲು ಕುಡಿಯುವುದರಿಂದಾಗುವ ಸಮಸ್ಯೆಗಳನ್ನು ತಡೆಯಲು ಮೊಸರು, ಮಜ್ಜಿಗೆ ಅಥವಾ ಲ್ಯಾಕ್ಟೋಸ್ ಮುಕ್ತ ಹಾಲನ್ನು ಸೇವಿಸಬಹುದು, ಇವು ಜೀರ್ಣಿಸಿಕೊಳ್ಳಲು ಸುಲಭ. ಚರ್ಮ ಅಥವಾ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿದ್ದಲ್ಲಿ, ವೈದ್ಯರು ಅಥವಾ ಪೌಷ್ಟಿಕತಜ್ಞರನ್ನು ಸಂಪರ್ಕಿಸುವುದು ಉತ್ತಮ.

ನೋಡಿರಿ

