ರಾಯರ ಭಕ್ತರಿಗೆ ಗುಡ್‌ನ್ಯೂಸ್!‌ – ಬೆಂಗಳೂರಿನಿಂದ ಮಂತ್ರಾಲಯಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್‌ ವಿಶೇಷ ರೈಲು!

ರಾಯರ ಭಕ್ತರಿಗೆ ಗುಡ್‌ನ್ಯೂಸ್!‌ – ಬೆಂಗಳೂರಿನಿಂದ ಮಂತ್ರಾಲಯಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್‌ ವಿಶೇಷ ರೈಲು!

ಭಕ್ತರ ಕಲ್ಪವೃಕ್ಷ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಯ ಮಠಕ್ಕೆ ರಾಜ್ಯ, ಅಂತಾರಾಜ್ಯ, ದೇಶ-ವಿದೇಶಗಳಿಂದಲೂ ಸಾಕಷ್ಟು ಭಕ್ತರು ಆಗಮಿಸಿ ರಾಘವೇಂದ್ರ ಸ್ವಾಮಿಯ ದರ್ಶನ ಪಡೆಯುತ್ತಾರೆ. ಇದೀಗ ರಾಘವೇಂದ್ರ ಸ್ವಾಮಿ ಭಕ್ತರಿಗೆ ಮಹತ್ವದ ಸುದ್ದಿಯಿದೆ. ಬೆಂಗಳೂರಿನಿಂದ ಮಂತ್ರಾಲಯಕ್ಕೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಮೂಲಕ ಹೋಗಬಹುದು.

ಇದನ್ನೂ ಓದಿ:  BMTC ಬಸ್‌ನಲ್ಲಿ 6 ರೂ. ಬದಲು 60 ಸಾವಿರ ಪಾವತಿಸಿದ ಪ್ರಯಾಣಿಕ! – ಮುಂದೇನಾಯ್ತು ಗೊತ್ತಾ?

ಬೆಂಗಳೂರಿನಿಂದ ಮಂತ್ರಾಲಯದ ರಾಯರ ದರ್ಶನಕ್ಕೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನರು ಹೋಗುತ್ತಾರೆ. ಅಂತವರಿಗಾಗಿ ರೈಲ್ವೇ ಇಲಾಖೆ ಬೆಂಗಳೂರಿನಿಂದ ಮಂತ್ರಾಲಯಕ್ಕೆ ಭಾರತ್‌ ಎಕ್ಸ್‌ಪ್ರೆಸ್‌ ಯನ್ನು ಬಿಡುತ್ತಿದೆ. ಬೆಂಗಳೂರಿನ SMVT ಯಿಂದ ಮಂತ್ರಾಲಯ ರಸ್ತೆಗೆ (MALM) ವಂದೇ ಭಾರತ್ ಎಕ್ಸ್‌ಪ್ರೆಸ್ (ರೈಲು 22232) ಸಂಚರಿಸುತ್ತದೆ. ಬೆಂಗಳೂರಿನಿಂದ (SMVT) ಮಧ್ಯಾಹ್ನ 2:40ರ ಸುಮಾರಿಗೆ ಹೊರಟು ಸಂಜೆ 7:50ರ ಹೊತ್ತಿಗೆ ಮಂತ್ರಾಲಯ (MALM) ತಲುಪುತ್ತದೆ.

ಇನ್ನು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಮಾತ್ರವಲ್ಲದೇ ಬೆಂಗಳೂರು ಮತ್ತು ಮಂತ್ರಾಲಯ ಸಂಪರ್ಕಿಸುವ ವಂದೇ ಭಾರತ್ ರೈಲು SMVT ಬೆಂಗಳೂರು – ಕಲಬುರಗಿ ಜಂಕ್ಷನ್ ವಂದೇ ಭಾರತ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 22232) ರೈಲು ವಾರದಲ್ಲಿ 6 ದಿನಗಳ ಕಾಲ ಇರಲಿದ್ದು, ಗುರುವಾರ ಮಾತ್ರ ಈ ರೈಲು ಇರುವುದಿಲ್ಲ. ವಂದೇ ಭಾರತ್‌ ಎಕ್ಸ್‌ಪ್ರೆಸ್‌ SMVT ಬೆಂಗಳೂರಿನಿಂದ (SMVB) ಹೊರಟು ಸುಮಾರು 5 ಗಂಟೆ 8 ನಿಮಿಷಗಳ ನಂತರ ಮಂತ್ರಾಲಯ (MALM) ತಲುಪುತ್ತದೆ. ಈ ರೈಲು ಎರಡು ಕ್ಲಾಸ್‌ಗಳನ್ನು ಹೊಂದಿದೆ. ಎಸಿ ಚೇರ್ ಕಾರ್ (CC) ಮತ್ತು ಎಕ್ಸಿಕ್ಯುಟಿವ್ ಕ್ಲಾಸ್ (EC) ಇದೆ. ಟಿಕೆಟ್ ಬೆಲೆಗಳು ಬದಲಾಗುತ್ತವೆ ಮತ್ತು ಸಾಮಾನ್ಯವಾಗಿ ಆಹಾರ ಸೇವೆಯನ್ನು ಒಳಗೊಂಡಿರುತ್ತವೆ. ಅದರಂತೆ ಟಿಕೆಟ್‌ ಬೆಲೆಗಳು ಈ ಕೆಳಗಿನಂತಿವೆ.

ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ದರ ಎಷ್ಟು?

ಎಸಿ ಚೇರ್ ಕಾರ್ (CC): ಬೆಲೆಗಳು ಅಂದಾಜು ₹1,175 ರಿಂದ ₹1,300 (ಆಹಾರ ಸಹಿತ).

ಎಕ್ಸಿಕ್ಯುಟಿವ್ ಕ್ಲಾಸ್ (EC): ಬೆಲೆಗಳು ಅಂದಾಜು ₹2,300 ರಿಂದ ₹2,500 (ಆಹಾರ ಸಹಿತ).

Shwetha M