ಭಾರತಕ್ಕೆ ಮಿಸ್ ಫೀಲ್ಡ್ ಚಾಲೆಂಜ್ – ಕ್ಯಾಚ್ ಬಿಟ್ರೆ ಮ್ಯಾಚ್ ಗೆಲ್ಲೋಕಾಗುತ್ತಾ?
ವಿಶ್ವಕಪ್ ಹೊತ್ತಲ್ಲಿ ಸೀರಿಯಸ್ ನೆಸ್ ಇಲ್ವಾ?

ನ್ಯೂಜಿಲೆಂಡ್ ವಿರುದ್ಧ ಮೊದಲ ಟಿ-20ಐ ಮ್ಯಾಚ್ ಗೆದ್ದಿರೋ ಭಾರತ ಶುಕ್ರವಾರ 2ನೇ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಫಸ್ಟ್ ಮ್ಯಾಚಲ್ಲಿ ಭರ್ಜರಿಯಾಗಿ ಗೆದ್ದಿದ್ದೀವೆ ಸೋ ಸೆಕೆಂಡ್ ಮ್ಯಾಚಲ್ಲೂ ಗೆಲುವು ನಮ್ದೇ ಅಂತಾ ಅಷ್ಟು ಈಸಿಯಾಗಿ ಈ ಪಂದ್ಯವನ್ನ ತಗೊಳ್ಳೋಕೆ ಸಾಧ್ಯ ಇಲ್ಲ. ಯಾಕಂದ್ರೆ ತಂಡದಲ್ಲಿ ಒಂದಷ್ಟು ಚಾಲೆಂಜಸ್. ಮೊದಲು ಅವುಗಳನ್ನ ಸರಿಪಡಿಸಿಕೊಳ್ಬೇಕು.
ಇದನ್ನೂ ಓದಿ : T-20 ವಿಶ್ವಕಪ್ ಆಡಲ್ವಾ ಪಾಕ್? – ಬಾಂಗ್ಲಾ ಬೆನ್ನಿಗೆ ನಿಂತು ಬ್ಲ್ಯಾಕ್ ಮೇಲ್
ನಾಗ್ಪುರದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಮತ್ತು ರಿಂಕು ಸಿಂಗ್ ಅವ್ರ ಭರ್ಜರಿ ಬ್ಯಾಟಿಂಗ್ನಿಂದಾಗಿ ಭಾರತ 48 ರನ್ಗಳ ಅಂತರದಲ್ಲಿ ಪಂದ್ಯವನ್ನ ಗೆದ್ದುಕೊಳ್ತು. ಬ್ಯಾಟಿಂಗ್ ಹಾಗೇ ಬೌಲಿಂಗ್ ಚೆನ್ನಾಗೇ ಇತ್ತು. ಸೋ ಹೀಗೇ ಪರ್ಫಾಮ್ ಮಾಡಿದ್ರೆ ಮುಂದಿನ ಮ್ಯಾಚಲ್ಲೂ ಗೆಲ್ತಾರೆ. ವೀ ಆರ್ ಸ್ಟ್ರಾಂಗ್ ಅಂತಾ ಅನ್ನಿಸ್ಬೋದು. ಹಾಗಂತ ಓವರ್ ಕಾನ್ಫಿಡೆನ್ಸ್ ಇಟ್ಕೊಂಡ್ರೆ ದೊಡ್ಡ ಹೊಡೆತವೇ ಬೀಳುತ್ತೆ. ಅದ್ರಲ್ಲೂ ಫೀಲ್ಡಿಂಗ್ ನಲ್ಲಿ ನಿಜಕ್ಕೂ ತುಂಬಾನೇ ಕಳಪೆಯಾಗಿದೆ.
ಬೌಂಡರಿ ತಪ್ಪಿಸುವಲ್ಲಿ ಫೇಲ್.. 3 ಕ್ಯಾಚ್ ಬಿಟ್ಟ ಪ್ಲೇಯರ್ಸ್!
ಮೊದಲ ಮ್ಯಾಚಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಚೆನ್ನಾಗಿದ್ರೂ ಕೂಡ ಫೀಲ್ಡಿಂಗ್ ಅಂತಾ ಬಂದಾಗ ಸಾಕಷ್ಟು ಮಿಸ್ಟೇಕ್ಸ್ ಮಾಡಿದ್ರು. ಅದ್ರಲ್ಲೂ ಪ್ರಮುಖ 3 ಕ್ಯಾಚ್ಗಳನ್ನ ಕೈಬಿಟ್ರು. ಇಶಾನ್ ಕಿಶನ್, ರಿಂಕು ಸಿಂಗ್ ಹಾಗೇ ಅಕ್ಷರ್ ಪಟೇಲ್ ಕ್ಯಾಚ್ ಕೈಚೆಲ್ಲಿದ್ರು. ಇನ್ನು ಸಂಜು ಸ್ಯಾಮ್ಸನ್ ಕೂಡ ಒಂದು ರನ್ಔಟ್ನಲ್ಲಿ ಮಿಸ್ ಮಾಡಿದ್ರು. ಇನ್ನು ಫೀಲ್ಡಿಂಗ್ನಲ್ಲಿ ಕೊನೇ ಓವರ್ಗಳಲ್ಲಂತೂ ಮ್ಯಾಚ್ ಗೆಲ್ತೀವಿ ಅಂತಾ ಗೊತ್ತಾದ್ಮೇಲೆ ಬೌಂಡರಿಗೆ ಹೋಗ್ತಿದ್ದ ಬಾಲ್ಗಳನ್ನ ತಡೆಯೋದ್ರಲ್ಲೂ ಕ್ವಿಕ್ ಆಗಿರಲಿಲ್ಲ. ಆಲ್ರೆಡಿ ಗೆದ್ದಿದ್ದೇವೆ ಹೊಡೆಯಲಿ ಅನ್ನೋ ಥರ ಫೀಲ್ಡಿಂಗ್ ಮಾಡ್ತಿದ್ದು ಕಂಡು ಬಂದಿದೆ. ಹಾಗಂತ ಭಾರತದ ಕಳಪೆ ಫೀಲ್ಡಿಂಗ್ ಈ ಪಂದ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. 2025 ರ ಏಷ್ಯಾಕಪ್ ನಂತರ ಬರೋಬ್ಬರಿ 26 ಕ್ಯಾಚ್‌ಗಳನ್ನು ಕೈಬಿಟ್ಟಿದೆ. ಒಂದು ಕಾಲದಲ್ಲಿ ವಿಶ್ವ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಫೀಲ್ಡಿಂಗ್ ಟೀಂ ಎನಿಸಿಕೊಂಡಿದ್ದ ಭಾರತಕ್ಕೆ ಇದು ಆತಂಕಕಾರಿ ವಿಚಾರವೂ ಹೌದು.
ಬ್ಯಾಟಿಂಗ್ ನಲ್ಲಿ ಬೇಕಿದೆ ಉಳಿದೆಲ್ಲಾ ಆಟಗಾರರ ಸಪೋರ್ಟ್!
ಭಾರತ ಮೊದಲ ಮ್ಯಾಚಲ್ಲಿ ಬಿಗ್ ಸ್ಕೋರ್ ಕಲೆ ಹಾಕಿದೆ ಸೋ ಬ್ಯಾಟಿಂಗ್ ಏನ್ ವೀಕ್ ಇಲ್ಲ ಅನ್ನಿಸ್ಬೋದು. ಆದ್ರೆ ಅಭಿಷೇಕ್ ಶರ್ಮಾ ಮತ್ತು ರಿಂಕು ಸಿಂಗ್ ಇಬ್ಬರೇ ಅರ್ಧಕ್ಕಿಂತ ಜಾಸ್ತಿ ರನ್ಸ್ ಸ್ಕೋರ್ ಮಾಡಿದ್ದಾರೆ. ಅವ್ರಿಬ್ಬರಿಂದಲೇ ರನ್ ರೇಟ್ ಜಾಸ್ತಿ ಆಗಿದ್ದು. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್, ಇಶಾನ್ ಕಿಶನ್ ಬ್ಯಾಟ್ನಿಂದಲೂ ಬೆಟರ್ ಪರ್ಫಾಮೆನ್ಸ್ ಬರ್ಬೇಕು. ಇನ್ನು ನಾಯಕ ಸೂರ್ಯಕುಮಾರ್ ಯಾದವ್ 22 ಎಸೆತಗಳಲ್ಲಿ 32 ರನ್ ಗಳಿಸಿರೋದ್ರಿಂದ ಸ್ವಲ್ಪ ಕಾನ್ಫಿಡೆನ್ಸ್ ಬಂದಿರ್ಬೋದು. ಬಟ್ ನೆಕ್ಸ್ಟ್ ಮ್ಯಾಚಲ್ಲಿ ಇದು ಮತ್ತಷ್ಟು ಇಂಪ್ರೂವ್ ಆಗ್ಬೇಕು. ಪ್ರತೀ ಪಂದ್ಯದಲ್ಲೂ ಅಭಿಷೇಕ್ ಶರ್ಮಾ ಮೇಲೆಯೇ ಡಿಪೆಂಡ್ ಆಗೋದು ಕೂಡ ಸಾಧ್ಯ ಇಲ್ಲ. ಒಂದೊಂದು ಪಂದ್ಯದಲ್ಲಿ ಒಬ್ಬೊಬ್ರು ಇನಿಶಿಯೇಟ್ ತಗೊಂಡು ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡ್ಬೇಕು. ಈ ವಿಚಾರದಲ್ಲಿ ಪ್ರಸ್ತುತ ಡಬ್ಲ್ಯೂಪಿಎಲ್ನಲ್ಲಿ ಆರ್ಸಿಬಿಯ ಆಟಗಾರ್ತಿಯರ ಪರ್ಫಾಮೆನ್ಸ್ ಬೆಸ್ಟ್ ಎಕ್ಸಾಂಪಲ್ ಅನ್ಸುತ್ತೆ. ಈ ಆವೃತ್ತಿಯಲ್ಲಿ 5ಕ್ಕೆ ಐದೂ ಪಂದ್ಯ ಗೆದ್ದಿದ್ದಾರೆ. ಬಟ್ ಯಾರೋ ಒಬ್ರಿಂದ ಗೆದ್ದಿಲ್ಲ. ಒಂದೊಂದು ಪಂದ್ಯದಲ್ಲಿ ಒಬ್ಬೊಬ್ರು ಅದ್ಭುತವಾಗಿ ಪರ್ಫಾಮ್ ಮಾಡಿ ಗೆಲ್ಲಿಸಿಕೊಟ್ಟಿದ್ದಾರೆ. ಅದೇ ರೀತಿ ಪ್ರತಿಯೊಬ್ಬರೂ ಕೂಡ ತಂಡಕ್ಕಾಗಿ ವೈಯಕ್ತಿಕ ಪ್ರದರ್ಶನ ಚೆನ್ನಾಗಿರಬೇಕು.
ಹೇಳಿ ಕೇಳಿ ಟಿ-20 ವಿಶ್ವಕಪ್ ಗೆ ಉಳಿದಿರೋದೇ ಇನ್ನೆರಡು ವಾರ. ಸೋ ಇಂಥಾ ಟೈಮಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಕಡೆ ಮಾತ್ರ ಫೋಕಸ್ ಮಾಡಿದ್ರೆ ಸಾಕಾಗಲ್ಲ. ಫೀಲ್ಡಿಂಗ್ ಮೋಸ್ಟ್ ಇಂಪಾರ್ಟೆಂಟ್ ಆಗುತ್ತೆ. ಕ್ಯಾಚ್ ಬಿಟ್ರೋ ಮ್ಯಾಚ್ ಬಿಟ್ರೋ ಅನ್ನೋ ಮಟ್ಟಿಗೆ ಎಫೆಕ್ಟ್ ಆಗುತ್ತೆ. ಗೆಲ್ತೀವಿ ಅನ್ನೋದು ಕನ್ಫರ್ಮ್ ಆದ್ಮೇಲೂ ಲಾಸ್ಟ್ ಬಾಲ್ವರೆಗೂ ಆನ್ ಫೀಲ್ಡ್ನಲ್ಲಿ ದಿ ಬೆಸ್ಟ್ ಕೊಟ್ಟಾಗ್ಲಷ್ಟೇ ಗೆಲ್ಲೋಕೆ ಸಾಧ್ಯವಾಗೋದು.

ನೋಡಿರಿ

