ಡೆತ್ ಓವರ್ ಸ್ಪೆಷಲಿಸ್ಟ್ ರಿಂಕು – ಬೆಂಚ್ ಕಾಯಿಸಿದ್ದ BCCIಗೆ ಶೇಮ್
T-20WC ಫಿನಿಶರ್ ಸ್ಲಾಟ್ ಫಿಕ್ಸ್?

ಡೆತ್ ಓವರ್ ಸ್ಪೆಷಲಿಸ್ಟ್ ರಿಂಕು – ಬೆಂಚ್ ಕಾಯಿಸಿದ್ದ BCCIಗೆ ಶೇಮ್T-20WC ಫಿನಿಶರ್ ಸ್ಲಾಟ್ ಫಿಕ್ಸ್?

ನ್ಯೂಜಿಲೆಂಡ್ ವಿರುದ್ಧ ಭಾರತ ಫಸ್ಟ್ ಟಿ-20ಐ ಮ್ಯಾಚ್ ಗೆಲ್ಲೋಕೆ ಮುಖ್ಯ ಕಾರಣನೇ ಅಭಿಷೇಕ್ ಶರ್ಮಾ ಮತ್ತು ರಿಂಕು ಸಿಂಗ್ ಅವ್ರ ಸ್ಫೋಟಕ ಬ್ಯಾಟಿಂಗ್.. ಇಬ್ರೂ ಕೂಡ 200ಪ್ಲಸ್ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿ  ಬಿಗ್ ಟಾರ್ಗೆಟ್ ಸೆಟ್ ಮಾಡಿದ್ರು.. ಸೋ ಭಾರತ ಈಸಿಯಾಗಿ ಸ್ಕೋರ್​ನ ಡಿಫೆನ್ಸ್ ಮಾಡಿಕೊಳ್ತು. ಮ್ಯಾಚ್ ಆದ್ಮೇಲೆ ಅಭಿಷೇಕ್ ಬ್ಯಾಟಿಂಗ್​ಗಿಂತ ರಿಂಕು ಬಗ್ಗೆ ಜಾಸ್ತಿ ಚರ್ಚೆಯಾಗ್ತಿದೆ. ಯಾಕಂದ್ರೆ ಅಭಿಷೇಕ್ ಟಿ-20ಐ ಟೀಮ್​ನ ಪರ್ಮನೆಂಟ್ ಓಪನರ್.. ಆದ್ರೆ ರಿಂಕು ಸಿಚುಯೇಷನ್ ಹಂಗಿಲ್ಲ. ಆಡಿದ್ದಕ್ಕಿಂತ ಜಾಸ್ತಿ ಬೆಂಚ್ ಕಾಯಿಸಿದ್ದೇ ಜಾಸ್ತಿ. ಈಗ ನಾಗ್ಪುರದ ಪರ್ಫಾಮೆನ್ಸ್ ನೋಡಿದ್ಮೇಲೆ ರಿಂಕು ಬಗ್ಗೆ ಒಂದಷ್ಟು ಮಾಜಿ ಪ್ಲೇಯರ್ಸ್ ಧ್ವನಿ ಎತ್ತಿದ್ದಾರೆ. ಡೆತ್ ಓವರ್ ಸ್ಪೆಷಲಿಸ್ಟ್ ಬ್ಯಾಟರ್​ನ ಬೆಂಚ್ ಕಾಯಿಸ್ತಿರೋದಕ್ಕೆ ಬಿಸಿಸಿಐನ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ : NZ ವಿರುದ್ಧ ಸೋಲಿನ ಸರಣಿ ನಿಲ್ಲುತ್ತಾ? – T-20Iನಲ್ಲಾದ್ರೂ ಗೆಲ್ಲುತ್ತಾ ಭಾರತ?

ನ್ಯೂಜಿಲೆಂಡ್ ವಿರುದ್ಧದ ಮೊದಲನೇ ಟಿ-20ಐ ಮ್ಯಾಚಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ರಿಂಕು ಸಿಂಗ್ ನಿಜಕ್ಕೂ ಕೂಡ ಪವರ್​ಹಿಟ್ಟರ್​ರಂತೆ ಪರ್ಫಾಮ್ ಮಾಡಿದ್ರು. ಕೇವಲ 20 ಎಸೆತಗಳಲ್ಲಿ 44 ರನ್ ಗಳಿಸಿ ಬಿಗ್ ಟಾರ್ಗೆಟ್ ಸೆಟ್ ಮಾಡಿದ್ರು. 20ನೇ ಓವರ್​ನಲ್ಲಿ 2 ಸಿಕ್ಸ್, 2 ಫೋರ್ ಮೂಲಕ 20 ರನ್ ಬಾರಿಸಿದ್ರು. 2023 ರಲ್ಲಿ ಟಿ20ಐಗೆ ಪಾದಾರ್ಪಣೆ ಮಾಡಿದ ರಿಂಕು ಭಾರತ ಪರ ಕೇವಲ 36 ಪಂದ್ಯಗಳನ್ನು ಆಡಿದ್ದಾರೆ. ಆದ್ರೆ ಈ ಪಂದ್ಯಗಳಲ್ಲೇ ರಿಂಕು ಸಿಂಗ್ ಬೆಸ್ಟ್ ಫಿನಿಶರ್ ಅನ್ನೋದನ್ನ ಪ್ರೂವ್ ಮಾಡಿದ್ದಾರೆ. ತಮಗೆ ಅವಕಾಶ ಸಿಕ್ಕಾಗ್ಲೆಲ್ಲಾ ಇಂಪ್ಯಾಕ್ಟ್ ಮಾಡಿದ್ದಾರೆ.

19 ಮತ್ತು 20ನೇ ಓವರ್ ನಲ್ಲಿ ರಿಂಕು ಗ್ರೇಟ್ ರೆಕಾರ್ಡ್ಸ್!

ಭಾರತದ ಪರ ರಿಂಕು ಸಿಂಗ್ 19 ಮತ್ತು 20ನೇ ಓವರ್ ನಲ್ಲಿ ನಿಜಕ್ಕೂ ಅದ್ಭುತವಾಗಿ ಬ್ಯಾಟ್ ಬೀಸಿದ್ದಾರೆ. ಡೆತ್ ಓವರ್​ಗಳಲ್ಲಿ ಬಹುಶಃ ರಿಂಕುಗಿಂತ ಭಾರತಕ್ಕೆ ಬೆಟರ್ ಫಿನಿಶರ್ ಸಿಗಲ್ಲ. ಭಾರತದ ಪರ ಆಡಿರುವ 36 ಟಿ20ಐ ಪಂದ್ಯಗಳಲ್ಲಿ  19 ಮತ್ತು 20ನೇ ಓವರ್‌ಗಳಲ್ಲಿ 74 ಎಸೆತಗಳಲ್ಲಿ 213 ರನ್ ಗಳಿಸಿದ್ದಾರೆ. ಅಂದ್ರೆ ಕೊನೇ ಎರಡು ಓವರ್ ಗಳಲ್ಲಿ 287.83 ರ ಹಾಸಮ್ ಸ್ಟ್ರೈಕ್ ರೇಟ್‌ನೊಂದಿಗೆ ಬ್ಯಾಟ್ ಬೀಸಿದ್ದಾರೆ. ಌಂಡ್ 22 ಸಿಕ್ಸರ್‌ಗಳು ಬಂದಿವೆ. ಫಿನಿಶರ್ ಆಗಿ ಅವರ ಅಗ್ರೆಸ್ಸಿವ್ ಬ್ಯಾಟಿಂಗ್ ನೋಡಿದ್ರೆ ಅವ್ರ ವೃತ್ತಿಜೀವನದ ರನ್‌ಗಳಲ್ಲಿ ಶೇಕಡಾ 35 ಕ್ಕಿಂತ ಹೆಚ್ಚು ರನ್ಸ್ ಇನ್ನಿಂಗ್ಸ್‌ನ ಕೊನೆಯ ಎರಡು ಓವರ್‌ಗಳಲ್ಲಿ ಬಂದಿವೆ ಅಂದ್ರೆ ಅವ್ರ ಪವರ್ ಜನರೇಟ್ ಯಾವ ಲೆವೆಲ್​ನಲ್ಲಿದೆ ಅನ್ನೋದು ಗೊತ್ತಾಗುತ್ತೆ. ಇನ್ನು 20ನೇ ಓವರ್ ಅಂತಾ ಬಂದಾಗ 302.63ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿದ್ದಾರೆ. ಭಾರತದ ಪರ 20ನೇ ಓವರ್​ನಲ್ಲಿ ಅತೀ ಹೆಚ್ಚು ಸ್ಟ್ರೈಕ್ ರೇಟ್ ಅಂತಾ ಬಂದಾಗ ಸೂರ್ಯಕುಮಾರ್ ಯಾದವ್ (321.42) ಇದು ಫಸ್ಟ್ ಪ್ಲೇಸ್​ನಲ್ಲಿದ್ದಾರೆ. ಌಂಡ್ 302ಪ್ಲಸ್ ಸ್ಟ್ರೈಕ್​ ರೇಟ್​ನಲ್ಲಿ ರಿಂಕು ಸೆಕೆಂಡ್ ಪ್ಲೇಸಲ್ಲಿದ್ದಾರೆ. ಹಾಗೆ ನೋಡಿದ್ರೆ  ಸೂರ್ಯಕುಮಾರ್ 20 ನೇ ಓವರ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಅಲ್ರೆಡಿ ಸೆಟ್ ಆಗಿರ್ತಾರೆ. ಆದ್ರೆ ರಿಂಕು ಲಾಸ್ಟ್ ಮೂಮೆಂಟ್​ನಲ್ಲಿ ಬಂದ್ರೂ ಅದ್ಭುತವಾದ ಸ್ಟ್ರೈಕ್​ನಲ್ಲಿ ಬ್ಯಾಟ್ ಬೀಸಿದ್ದಾರೆ. ಹೀಗಾಗಿಯೇ ರಿಂಕುಗೆ ಪ್ಲೇಯಿಂಗ್ 11ನಲ್ಲಿ ಚಾನ್ಸ್ ಕೊಡಿ ಅಂತಾ ಮಾಜಿ ಕ್ರಿಕೆಟರ್ಸ್ ಕೂಡ ಧ್ವನಿ ಎತ್ತಿದ್ದಾರೆ.

ರಿಂಕು ಸ್ಥಾನಕ್ಕಾಗಿ ಮಾಜಿ ಆಟಗಾರರ ಬ್ಯಾಟಿಂಗ್!

ರಿಂಕು ಬಗ್ಗೆ ಬ್ಯಾಟ್ ಬೀಸಿರೋ ರವಿಚಂದ್ರನ್ ಅಶ್ವಿನ್, ಭಾರತದ ಪರ ಟಿ-20ಐಗಳಲ್ಲಿ ಫಿನಿಶರ್ ಆಗಿ ರಿಂಕುಗಿಂತ ಯಾರು ಉತ್ತಮವಾಗಿ ಬ್ಯಾಟ್ ಬೀಸಬಹುದು.. ಪೇಸ್ ಬೌಲರ್​​ಗಳ ಎದುರು ರಿಂಕು ನಂಬರ್ಸ್ ತುಂಬಾ ಚೆನ್ನಾಗೇ ಇದೆ. ಹೀಗಾಗಿ ಅವ್ರಿಗೆ ಮತ್ತೆ ತಂಡದಲ್ಲಿ ಚಾನ್ಸ್ ಸಿಕ್ಕಿದೆ ಅಂತಾ ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ಹೇಳಿದ್ದಾರೆ. ಹಾಗೇ ನ್ಯೂಜಿಲೆಂಡ್ ತಂಡದ ಮಾಜಿ ಆಟಗಾರ ಸೈಮನ್ ಡೌಲ್ ಭಾರತೀಯ ಆಯ್ಕೆ ಸಮಿತಿಯನ್ನ ಟೀಕಿಸಿದ್ದಾರೆ. T20I ಕ್ರಿಕೆಟ್‌ನಲ್ಲಿ ರಿಂಕುಗೆ ಸಾಕಷ್ಟು ಅವಕಾಶ ನೀಡದಿರುವ ನಿರ್ಧಾರವನ್ನ ಟೀಕಿಸಿದ್ದಾರೆ. ಹಾಗೇ ಇನ್ಮುಂದಿನ ಪಂದ್ಯಗಳಲ್ಲಾದ್ರೂ ಪರ್ಮನೆಂಟ್ ಚಾನ್ಸ್ ಕೊಡ್ಬೋದು ಎಂದಿದ್ದಾರೆ. ಇನ್ನು ಭಾರತದ ಮಾಜಿ ಆಟಗಾರ ಆಕಾಶ್ ಚೋಪ್ರಾ ಕೂಡ ರಿಂಕು ಸಿಂಗ್ ಬ್ಯಾಟಿಂಗ್ ಪೊಸಿಷನ್ ಚೇಂಜ್ ಮಾಡ್ಬೋದು. ನಂಬರ್ 7ಕ್ಕಿಂತ ಮೊದಲೇ ಬ್ಯಾಟಿಂಗ್ ಮಾಡಿಸ್ಬೋದು ಎಂದಿದ್ದಾರೆ.

ಭಾರತದ ಪರ ಟಿ-20ಐ ತಂಡದ ಪರ ದಿ ಬೆಸ್ಟ್ ಫಿನಿಶರ್ ಎನಿಸಿಕೊಳ್ತಿದ್ರೂ ಇತ್ತಿಚಿನ ತಿಂಗಳುಗಳಲ್ಲಿ ರಿಂಕುಗೆ ಪ್ಲೇಯಿಂಗ್ 11ನಲ್ಲಿ ಚಾನ್ಸ್ ಸಿಕ್ಕಿದ್ದೇ ಕಮ್ಮಿ. ಅದ್ರಲ್ಲೂ ಶುಭ್​ಮನ್ ಗಿಲ್ ಇದ್ದಾಗ ಬೆಂಚ್ ಕಾದಿದ್ದೇ ಆಗಿತ್ತು. ಈಗ ಗಿಲ್ ಹೊರ ಬಿದ್ಮೇಲೆ ಸಂಜು ಓಪನರ್ ಆಗಿದ್ದಾರೆ. ಸೋ ರಿಂಕು ಮಿಡಲ್ ಆರ್ಡರ್​ನಲ್ಲಿ ಚಾನ್ಸ್ ಸಿಕ್ಕಿದೆ. ಹಾರ್ದಿಕ್ ಪಾಂಡ್ಯ ಜೊತೆಗೆ ರಿಂಕು ಕೆಳ ಕ್ರಮಾಂಕದಲ್ಲಿ ಫಿನಿಷರ್ ಆಗಿ ಶೈನ್ ಆಗ್ತಿದ್ದಾರೆ. ಸೋ ಮುಂದಿನ ಪಂದ್ಯಗಳಲ್ಲೂ ಚಾನ್ಸ್ ಸಿಕ್ರೆ ಭಾರತಕ್ಕೆ ಮಿಡಲ್ ಆರ್ಡರ್ ನಲ್ಲಿ ಒಬ್ಬ ಪವರ್ ಹಿಟ್ಟರ್ ಬ್ಯಾಟರ್ ಸಿಕ್ಕಂತಾಗುತ್ತೆ..

Shantha Kumari