ಉರಿ ದಾಳಿ, ಪುಲ್ವಾಮಾ ದಾಳಿ ಬಿಜೆಪಿ ಸರ್ಕಾರದ ಪ್ಲಾನ್ – ನ್ಯಾಷನಲ್ ಕಾನ್ಫರೆನ್ಸ್ ಶೇಖ್ ಮುಸ್ತಫಾ ಕಮಾಲ್ ಗಂಭೀರ ಆರೋಪ

ಉರಿ ದಾಳಿ, ಪುಲ್ವಾಮಾ ದಾಳಿ ಬಿಜೆಪಿ ಸರ್ಕಾರದ ಪ್ಲಾನ್ – ನ್ಯಾಷನಲ್ ಕಾನ್ಫರೆನ್ಸ್ ಶೇಖ್ ಮುಸ್ತಫಾ ಕಮಾಲ್ ಗಂಭೀರ ಆರೋಪ

ಶ್ರೀನಗರ: ಉರಿ ದಾಳಿ ಮತ್ತು ಪುಲ್ವಾಮಾ ದಾಳಿ ಎರಡನ್ನೂ ಕೇಂದ್ರ ಸರ್ಕಾರವೇ ಆಯೋಜಿಸಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಶೇಖ್ ಮುಸ್ತಫಾ ಕಮಾಲ್ ಸೋಮವಾರ ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ದೆಹಲಿ ಚಳಿಗಾಲದ ಅಧಿವೇಶನ  – ಆಮ್ಲಜನಕ ಸಿಲಿಂಡರ್ ನೊಂದಿಗೆ ಸದನಕ್ಕೆ ಆಗಮಿಸಿದ ಬಿಜೆಪಿ ಶಾಸಕರು

2016ರ ಉರಿ ಮತ್ತು 2019ರ ಪುಲ್ವಾಮಾ ದಾಳಿಯ ಕುರಿತು ಮಾತನಾಡಿದ ಶೇಖ್ ಮುಸ್ತಫಾ ಕಮಾಲ್, “ಈ ದಾಳಿಗಳನ್ನು ಬಿಜೆಪಿ ಸರ್ಕಾರದಿಂದ ಯೋಜಿಸಲಾಗಿದೆ ಎಂಬುದು ಬಹುತೇಕ ಸ್ಪಷ್ಟವಾಗಿದೆ. ಈ ದಾಳಿಯಲ್ಲಿ ಹುತಾತ್ಮರಾದ ಯಾವುದೇ ಸೈನಿಕರ ಶವಗಳು ಅಥವಾ ಚಿತ್ರಗಳು ಪತ್ತೆಯಾಗಿಲ್ಲ. ಈ ವೇಳೆ ಸಾವನ್ನಪ್ಪಿದವರೆಲ್ಲರೂ ಪರಿಶಿಷ್ಟ ಜಾತಿ (ಎಸ್‌ಸಿ) ಸಮುದಾಯಕ್ಕೆ ಸೇರಿದವರು ಎಂದು ಅವರು ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರವೇ ಈ ದಾಳಿಗಳನ್ನು ನಡೆಸಿದೆ ಎಂಬುದು ಈಗ ಖಚಿತವಾಗಿದೆ. ಈ ದಾಳಿಯಲ್ಲಿ ಹುತಾತ್ಮರಾದವರ ದೇಹ, ಫೋಟೋಗಳನ್ನು ನೋಡಿಲ್ಲ. ಆ ದಾಳಿಯಲ್ಲಿ 30 ರಿಂದ 40 ಮಂದಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಮಾತನಾಡಿದ ಶೇಖ್ ಮುಸ್ತಫಾ ಕಮಾಲ್ ಆರೋಪಿಸಿದ್ದಾರೆ.

suddiyaana