ದೇಶಾದ್ಯಂತ ಗಣರಾಜ್ಯೋತ್ಸವ ಸಂಭ್ರಮ – ದೆಹಲಿಯಲ್ಲಿ ಹೈಅಲರ್ಟ್..‌ ಅಪರಾಧಿಗಳ ಸುಳಿವು ಪತ್ತೆಗೆ ಪೊಲೀಸರಿಗೆ AI ಸ್ಮಾರ್ಟ್‌ ಕನ್ನಡಕ!

ದೇಶಾದ್ಯಂತ ಗಣರಾಜ್ಯೋತ್ಸವ ಸಂಭ್ರಮ – ದೆಹಲಿಯಲ್ಲಿ ಹೈಅಲರ್ಟ್..‌ ಅಪರಾಧಿಗಳ ಸುಳಿವು ಪತ್ತೆಗೆ ಪೊಲೀಸರಿಗೆ AI ಸ್ಮಾರ್ಟ್‌ ಕನ್ನಡಕ!

ದೇಶಾದ್ಯಂತ ಗಣರಾಜ್ಯೋತ್ಸವದ ಸಿದ್ದತೆಗಳು ಪ್ರಾರಂಭವಾಗಿದೆ. ಗಣರಾಜ್ಯೋತ್ಸವ ಅಂಗವಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಭದ್ರತಾ ವ್ಯವಸ್ಥೆ ಹೆಚ್ಚಿಸಲಾಗುತ್ತಿದೆ. ಇದೀಗ ಅಪರಾಧಿಗಳ ಸುಳಿವು ಪತ್ತೆಗಾಗಿ ಪೊಲೀಸರಿಗೆ AI ಸ್ಮಾರ್ಟ್‌ ಕನ್ನಡಕ ಮೊರೆ ಹೋಗಿದ್ದಾರೆ.

ಇದನ್ನೂ ಓದಿ: ಸ್ಲೀಪರ್ ಬಸ್‌ಗಳಲ್ಲಿ ಹೊಸ ರೂಲ್ಸ್! – ಇನ್ಮುಂದೆ ರಾಜ್ಯದಲ್ಲಿ ಈ ನಿಯಮ ಪಾಲನೆ ಕಡ್ಡಾಯ!

ದೇಶದೆಲ್ಲೆಡೆ 77ನೇ ಗಣರಾಜೋತ್ಸವ ದಿನಾಚರಣೆ ಸಿದ್ಧತೆ ನಡೆದಲಾಗಿದೆ. ಕರ್ತವ್ಯ ಪಥದಲ್ಲಿ ನಡೆಯಲಿರುವ ಪರೇಡ್‌ಗೂ ಮುನ್ನ ದೆಹಲಿ ಪೊಲೀಸರು ಹೈಅಲರ್ಟ್‌ ಆಗಿದ್ದಾರೆ. ಭಯೋತ್ಪಾದನೆಯ ಆತಂಕವಿರುವ ಹಿನ್ನೆಲೆಯಲ್ಲಿ ಪೊಲೀಸರು ದೆಹಲಿಯ ಬಸ್, ರೈಲು, ವಿಮಾನ ನಿಲ್ದಾಣಗಳ ಸುತ್ತಮುತ್ತ ಹಾಗೂ ಮಾರುಕಟ್ಟೆ ಪ್ರದೇಶಗಳಲ್ಲಿ ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪೋಸ್ಟರ್ ಗಳನ್ನು ಹಾಕಿದ್ದಾರೆ. ಅಷ್ಟೇ ಅಲ್ಲ ಇದೀಗ ಅಪರಾಧಿಗಳನ್ನ ಪತ್ತೆ ಹಚ್ಚಲು ಪೊಲೀಸರಿಗೆ ಸರ್ಕಾರ AI ಸ್ಮಾರ್ಟ್‌ ಕನ್ನಡಕಗಳನ್ನ ನೀಡಿದೆ.

ಗಣರಾಜ್ಯ ಆಚರಣೆ ವೇಳೆ ಅಧಿಕ ಸಂಖ್ಯೆಯಲ್ಲಿ ಜನ ಸೇರಿರುತ್ತಾರೆ. ಈ ವೇಳೆ ಅಪರಾಧ ಕೃತ್ಯಗಳು ನಡೆಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಎಐ ವ್ಯವಸ್ಥೆಯನ್ನ ನಿಯೋಜಿಸಲಾಗಿದೆ. ಅದಕ್ಕಾಗಿ ಪೊಲೀಸರಿಗೆ ಎಐ ಸ್ಮಾರ್ಟ್‌ ಕನ್ನಡಕಗಳನ್ನ ನೀಡಲಾಗಿದೆ. ಅಂದು ಸುಮಾರು 10,000 ಪೊಲೀಸ್ ಸಿಬ್ಬಂದಿಯನ್ನ ನಿಯೋಜಿಸಲಾಗುತ್ತದೆ. ಏರ್ ಸರ್ವೇಲೆನ್ಸ್‌ಗಾಗಿ ಆಂಟಿ-ಡ್ರೋನ್ ಯೂನಿಟ್‌ಗಳು ಮತ್ತು ಎತ್ತರದ ಕಟ್ಟಡಗಳ ಮೇಲೆ ಸ್ನೈಪರ್ ತಂಡಗಳನ್ನ ನಿಯೋಜಿಸಲಾಗಿದೆ. ಅಲ್ಲದೇ ಸಾವಿರಾರು ಹೈ-ರೆಸಲ್ಯೂಷನ್ ಸಿಸಿಟಿವಿ ಕ್ಯಾಮೆರಾಗಳನ್ನು ಅಡ್ವಾನ್ಸ್ಡ್‌ ಫೇಶಿಯಲ್ ರೆಕಗ್ನಿಷನ್ ವ್ಯವಸ್ಥೆ ಜೊತೆಗೆ ಸಂಪರ್ಕಿಸಲಾಗಿದೆ.

ಹೋಟೆಲ್‌ಗಳು, ಗೆಸ್ಟ್ ಹೌಸ್‌ಗಳು, ಬಾಡಿಗೆದಾರರು ಮತ್ತು ಗೃಹ ಸಹಾಯಕರ ಸಮಗ್ರ ಪರಿಶೀಲನೆ ನಡೆಯುತ್ತಿದೆ. ಪಾದಚಾರಿಗಳಿಗೆ ಕನಿಷ್ಠ 3 ಹಂತದ ತಪಾಸಣೆ (ಡೋರ್ ಫ್ರೇಮ್ ಮೆಟಲ್ ಡಿಟೆಕ್ಟರ್ ಸೇರಿದಂತೆ) ಮತ್ತು ವಾಹನಗಳಿಗೆ ಕಠಿಣ ತಪಾಸಣೆ ಮಾಡಲಾಗುತ್ತದೆ ಎಂದು ನವದೆಹಲಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಆಯುಕ್ತ ದೇವೇಶ್ ಕುಮಾರ್ ಮಹಲಾ ಅವರು ಹೇಳಿದ್ದಾರೆ.

Shwetha M