ಟೀಂ ಇಂಡಿಯಾಗೆ ಗೆಲುವಿನ ಅಭಿಷೇಕ – ಭಾರತದ ರಿಯಲ್ ಫಿನಿಶರ್ ರಿಂಕು
200+ ಸ್ಕೋರ್ ನಲ್ಲಿ ನಾವೇ ಬಾಸ್!

ಟೆಸ್ಟ್ ನಲ್ಲಿ ಸೋಲಬಹುದು.. ಏಕದಿನ ಮಾದರಿಯಲ್ಲಿ ಮುಗ್ಗರಿಸಬಹುದು. ಬಟ್ ಟಿ-20ಐ ಅಂತಾ ಬಂದಾಗ ಅಲ್ಲಿ ಭಾರತವೇ ಬಾಸ್ ಅನ್ನೋದು ಮತ್ತೊಮ್ಮೆ ಪ್ರೂವ್ ಆಯ್ತು. ನ್ಯೂಜಿಲೆಂಡ್ ವಿರುದ್ಧದ ಮೊದಲ ಮ್ಯಾಚಲ್ಲಿ ಭರ್ಜರಿಯಾಗಿ ಗೆದ್ದು ಬೀಗಿರೋ ಟೀಂ ಇಂಡಿಯಾ ಟಿ-20 ವಿಶ್ವಕಪ್ಗೂ ಮುನ್ನ ಅತಿದೊಡ್ಡ ಮೆಸೇಜ್ ಪಾಸ್ ಮಾಡಿದೆ. ಅಭಿಷೇಕ್ ಶರ್ಮಾ ಅಬ್ಬರ, ರಿಂಕು ಸಿಂಗ್ ಗರ್ಜನೆ, ಬೌಲರ್ಗಳ ಬಿರುಗಾಳಿಗೆ ಕಿವೀಸ್ ಪಡೆ ಮಣ್ಣು ಮುಕ್ಕಿದೆ.
ಇದನ್ನೂ ಓದಿ : T-20 ವಿಶ್ವಕಪ್ ಆಡಲ್ವಾ ಪಾಕ್? – ಬಾಂಗ್ಲಾ ಬೆನ್ನಿಗೆ ನಿಂತು ಬ್ಲ್ಯಾಕ್ ಮೇಲ್
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವನ್ನ ಭಾರತ ಗೆದ್ದು ಬೀಗಿದೆ. ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಮ್ಯಾಚ್ ನಡೆದಿದ್ದು ಟಾಸ್ ಗೆದ್ದಂತ ಕಿವೀಸ್ ಪಡೆ ಬೌಲಿಂಗ್ ಚೂಸ್ ಮಾಡಿಕೊಂಡ್ರು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಪರ ಅಭಿಷೇಕ್ ಶರ್ಮಾ ಒನ್ಸ್ ಅಗೇನ್ ಪವರ್ ಹಿಟ್ಟಿಂಗ್ ಪರ್ಫಾಮೆನ್ಸ್ ನೀಡಿದ್ರು. ಕೊನೆಯಲ್ಲಿ ರಿಂಕು ಸಿಂಗ್ ನ್ಯೂಜಿಲೆಂಡ್ ಬೌಲರ್ಗಳನ್ನ ಬೆಂಡೆತ್ತಿದ್ರು.
ಭಾರತದ ಬ್ಯಾಟಿಂಗ್ ಅಬ್ಬರಕ್ಕೆ ಸುಸ್ತಾದ ನ್ಯೂಜಿಲೆಂಡ್!
ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಭಾರತದ ಪರ ಇನ್ನಿಂಗ್ಸ್ ಆರಂಭಿಸಿದ್ರೂ ಕೂಡ ಆರಂಭದಲ್ಲೇ ವಿಕೆಟ್ಗಳನ್ನ ಕಳ್ಕೊಳ್ಬೇಕಾಯ್ತು.. 2ನೇ ಓವರ್ನಲ್ಲಿ ಸಂಜು ಸ್ಯಾಮ್ಸನ್ ಮೂರನೇ ಓವರ್ನಲ್ಲಿ ಇಶಾನ್ ಕಿಶನ್ ವಿಕೆಟ್ ಬಿತ್ತು. 27 ರನ್ಗಳಿಗೆ 2 ವಿಕೆಟ್.. ಇಂಥಾ ಟೈಮಲ್ಲಿ ಅಭಿಷೇಕ್ ಮತ್ತು ಸೂರ್ಯಕುಮಾರ್ ಯಾದವ್ ನಡುವೆ ಒಂದೊಳ್ಳೆ ಪಾಟ್ನರ್ಶಿಪ್ ಬಂತು. 3ನೇ ವಿಕೆಟ್ಗೆ 99 ರನ್ಗಳ ಜೊತೆಯಾಟವಿತ್ತು. ಒಂದ್ಕಡೆ ವಿಕೆಟ್ಸ್ ಬೀಳ್ತಿದ್ರೂ ಅಭಿಷೇಕ್ ಶರ್ಮಾ ರನ್ ರೇಟ್ ಬೀಳೋಕೆ ಬಿಡ್ಲೇ ಇಲ್ಲ. 35 ಎಸೆತಗಳಲ್ಲೇ 5 ಫೋರ್ ಮತ್ತು 8 ಸಿಕ್ಸರ್ಗಳೊಂದಿಗೆ 84 ರನ್ ಕಲೆ ಹಾಕಿದ್ರು. ಇನ್ನೇನು ಸೆಂಚುರಿಯತ್ತ ಬರ್ತಿದ್ದಾರೆ ಅನ್ನುವಾಗ್ಲೇ ಅನ್ಫಾರ್ಚುನೇಟ್ಲಿ ವಿಕೆಟ್ ಒಪ್ಪಿಸಿದ್ರು. ಆ ನಂತ್ರ ದುಬೆ, ಅಕ್ಷರ್ ಕಡೆಯಿಂದ ಅಂಥಾ ಸಪೋರ್ಟ್ ಸಿಗ್ಲಿಲ್ಲ. ಬಟ್ ರಿಂಕು ಸಿಂಗ್ ಮಾತ್ರ ಚಾನ್ಸ್ ಕೊಡದೆ ಕೂರಿಸ್ತಿದ್ದವ್ರ ಶೇಪ್ ಔಟ್ ಆಗುವಂತೆ ಪರ್ಫಾಮ್ ಮಾಡಿದ್ರು. 20ನೇ ಓವರ್ನಲ್ಲಿ 21 ರನ್ ಬಾರಿಸಿದ್ರು. 20 ಎಸೆತಗಳಲ್ಲೇ 44 ರನ್ ಸಿಡಿಸಿ ಅಜೇಯರಾಗಿ ಉಳಿದ್ರು. ಬಟ್ 19ನೇ ಓವರ್ನಲ್ಲಿ ಅರ್ಷದೀಪ್ ಸಿಂಗ್ ಸ್ಟ್ರೈಕ್ ಬಿಟ್ಟುಕೊಟ್ಟಿದ್ರೆ ರಿಂಕು ಸಿಂಗ್ ಪಕ್ಕಾ ಅರ್ಧಶತಕ ಕಂಪ್ಲೀಟ್ ಮಾಡ್ಕೊಳ್ತಿದ್ರು. ಹೀಗೆ ಅಂತಿಮವಾಗಿ ಭಾರತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 238 ರನ್ಗಳನ್ನ ಕಲೆ ಹಾಕ್ತು.
ಟಾರ್ಗೆಟ್ ಬೆನ್ನತ್ತಿದ ನ್ಯೂಜಿಲೆಂಡ್ ಗೆ ಆರಂಭದಲ್ಲೇ ಆಘಾತ!
ಇನ್ನು 239 ರನ್ಗಳ ಟಾರ್ಗೆಟ್ ನೋಡಿದಾಗ್ಲೇ ನ್ಯೂಜಿಲೆಂಡ್ ಚೇಸ್ ಮಾಡೋದು ಅಸಾಧ್ಯ ಅನ್ನೋ ಥರನೇ ಕಾಣ್ತಿತ್ತು. ಯಾಕಂದ್ರೆ ಅವ್ರು ಟಿ20ಐ ಮಾದರಿಯಲ್ಲಿ ಹೈಯೆಸ್ಟ್ ಚೇಸಿಂಗ್ ರೆಕಾರ್ಡ್ ಇದ್ದದ್ದೇ 201 ರನ್ಗಳು. ಅದೂ ಕೂಡ ಜಿಂಬಾಂಬ್ವೆ ವಿರುದ್ಧ. ಆದ್ರೂ ಫೈಟ್ ಕೊಡೋಣ ಅಂತಾ ಕಣಕ್ಕಿಳಿದ ಕಿವೀಸ್ ಪಡೆಯ ಬ್ಯಾಟರ್ಗಳು ಆರಂಭದಲ್ಲೇ ಪೆವಿಲಿಯನ್ ಪರೇಡ್ ನಡ್ಸಿದ್ರು. ಫಸ್ಟ್ ಓವರ್ನಲ್ಲೇ ಡೆವೊನ್ ಕಾನ್ವೆ ಡಕ್ ಔಟ್.. 2ನೇ ಓವರ್ನಲ್ಲಿ ರಚಿನ್ ರವೀಂದ್ರ 1 ರನ್ಗೆ ಔಟ್.. ತಂಡದ ಸ್ಕೋರ್ 1 ಇದ್ದಾಗ್ಲೇ 2 ವಿಕೆಟ್ ಬಿದ್ದಾಗಿತ್ತು. ಹೀಗಿದ್ರೂ ಗ್ಲೆನ್ ಫಿಲಿಪ್ಸ್ ಸ್ಫೋಟಕ ಬ್ಯಾಟಿಂಗ್ ಶುರು ಮಾಡಿದ್ರು. 40 ಎಸೆತಗಳಲ್ಲಿ 78 ರನ್ ಸಿಡಿಸಿ ಡೇಂಜರಸ್ ಆಗ್ತಿದ್ರು. ಅಷ್ಟ್ರಲ್ಲಿ ಅಕ್ಷರ್ ಪಟೇಲ್ ವಿಕೆಟ್ ತೆಗೆದ್ರು. ಇನ್ನು ಮಾರ್ಕ್ 39, ಮಿಚೆಲ್ 28, ಸ್ಯಾಂಟ್ನರ್ 20 ರನ್ ಗಳಿಸಿ ಅಂತಿಮವಾಗಿ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಲಷ್ಟೇ ಸಾಧ್ಯವಾಯ್ತು. ಅಂತಿಮವಾಗಿ ಭಾರತ 48 ರನ್ಗಳಿಂದ ಪಂದ್ಯವನ್ನ ಗೆದ್ದು ಸರಣಿಯಲ್ಲಿ ಲೀಡ್ ಪಡ್ಕೊಂಡಿದೆ. ಹಾಗೇ ಬ್ಯಾಟಿಂಗ್ ನಲ್ಲಿ ವಿಶ್ವದಾಖಲೆ ಬರೆದಿದೆ.
ಟಿ-20ಐನಲ್ಲಿ ಅತೀ ಹೆಚ್ಚು ಬಾರಿ 200+ ರನ್ಸ್ ಕಲೆ ಹಾಕಿರುವ ಭಾರತ!
ಟಿ-20ಐನಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಸದ್ದು ಮಾಡ್ತಿರೋ ಭಾರತ ಈಗ ಮತ್ತೊಮ್ಮೆ 200+ ರನ್ಸ್ ಕಲೆ ಹಾಕೋ ಮೂಲಕ ವಿಶ್ವದಾಖಲೆಯನ್ನ ಮತ್ತಷ್ಟು ಗಟ್ಟಿ ಮಾಡ್ಕೊಂಡಿದೆ. ಅಂದ್ರೆ ಟಿ-20 ಕ್ರಿಕೆಟ್ನಲ್ಲಿ ಅತೀ ಹೆಚ್ಚು ಬಾರಿ 200+ ರನ್ಗಳನ್ನ ಕಲೆಹಾಕಿದ ವಿಶ್ವ ದಾಖಲೆ ಟೀಮ್ ಇಂಡಿಯಾ ಹೆಸರಲ್ಲೇ ಇದೆ. ಬಟ್ ನಂಬರ್ ಜಾಸ್ತಿಯಾಗ್ತಿದೆ. ಅಂದ್ರೆ ಈ ವಿಶ್ವದಾಖಲೆ 44 ಕ್ಕೇರಿದೆ. ಈ ವಿಚಾರದಲ್ಲಿ ವಿಶ್ವದ ಯಾವುದೇ ತಂಡ 30ರ ಗಡಿಯನ್ನೂ ಮುಟ್ಟಿಲ್ಲ. ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಪಡೆ ಈವರೆಗೆ 27 ಬಾರಿ ಮಾತ್ರ 200+ ರನ್ ಕಲೆ ಹಾಕಿದೆ. ಒಟ್ನಲ್ಲಿ ಭಾರತ ಚುಟುಕು ಮಾದರಿಯಲ್ಲಿ ಯಾಕೆ ದಿ ಬೆಸ್ಟ್ ಅನ್ನೋದು ಮತ್ತೆ ಸಾಬೀತಾಗಿದೆ. ಅದ್ರಲ್ಲೂ ಅಭಿಷೇಕ್ ಶರ್ಮಾ ಬ್ಯಾಟಿಂಗ್ನಲ್ಲಿ ಇರೋವರ್ಗೂ ಟೀಂ ಇಂಡಿಯಾ ಅಭಿಮಾನಿಗಳಿಗೆ ನಿಜಕ್ಕೂ ಹಬ್ಬವೇ ಸರಿ.

ನೋಡಿರಿ

