ಭಾಗ್ಯಾ ರಿಯಲ್ ಗಂಡ ಯಾರು ಗೊತ್ತಾ? – ಮಗ, ಮತ್ತು ಗಂಡನ ಪರಿಚಯಿಸಿದ ಸುಷ್ಮಾ ಕೆ. ರಾವ್

ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಈಗ ಭಾಗ್ಯ ಎರಡನೇ ಮದುವೆಯದ್ದೇ ಸುದ್ದಿ. ಇದು ರೀಲ್ ನಲ್ಲಿ ಬಂದ ವಿಚಾರ. ಇದೀಗ ರಿಯಲ್‌ನಲ್ಲಿ ಭಾಗ್ಯ ಪಾತ್ರಧಾರಿ ಸುಷ್ಮಾ ಕೆ ರಾವ್ ಅವರ ಮದುವೆ ವಿಚಾರ ರಿವೀಲ್ ಆಗಿದೆ. ಅನುಬಂಧ ಅವಾರ್ಡ್ಸ್ ವೇದಿಕೆಯಲ್ಲಿ ಸುಷ್ಮಾ ರಾವ್ ಅವರ ಗಂಡ ಮತ್ತು ಮಗನನ್ನು ಪರಿಚಯಿಸಲಾಗಿದೆ.
ಇದನ್ನೂ ಓದಿ:
ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯ ಎರಡನೇ ಮದುವೆ ಆಗ್ತಾರಾ ಇಲ್ಲವೋ ಎಂಬ ಕುತೂಹಲ ದಿನೇ ದಿನೇ ಹೆಚ್ಚಾಗುತ್ತಿದೆ. ಭಾಗ್ಯ ತಾಂಡವ್ ಒಂದಾಗುತ್ತಾರಾ, ಇಲ್ಲ ಆದಿ ಜೊತೆ ಭಾಗ್ಯ ಮದುವೆಯಾಗ್ತಾಳಾ ಎಂಬ ರೀತಿಯಲ್ಲಿ ಕಥೆ ಸಾಗುತ್ತಿದೆ. ಇದರ ನಡುವೆ ಸುಷ್ಮಾ ಕೆ. ರಾವ್ ಅವರ ರಿಯಲ್ ಲೈಫ್ ಬಗ್ಗೆ ಅನುಬಂಧ ಅವಾರ್ಡ್ಸ್ ವೇದಿಕೆಯಲ್ಲಿ ತಿಳಿಸಲಾಗಿದೆ. ಸುಷ್ಮಾ ಕೆ. ರಾವ್ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು, 25 ವರ್ಷಗಳಾಗಿವೆ. ಅನುಬಂಧ ಅವಾರ್ಡ್ಸ್‌ನಲ್ಲಿ ಸುಷ್ಮಾ ಕೆ ರಾವ್ ಅವರಿಗೆ ಪ್ರಶಸ್ತಿಯನ್ನು ನೀಡಲಾಗಿದೆ. ಆ ವೇಳೆ ಅವರಿಗೆ ವಿಶೇಷ ಸರ್ಪ್ರೈಸ್ ಕೂಡ ನೀಡಲಾಗಿದೆ. ಇದೇ ಮೊದಲ ಬಾರಿಗೆ ಸುಷ್ಮಾ ಕೆ ರಾವ್ ಅವರ ಪತಿಯನ್ನು ಪರಿಚಯ ಮಾಡಿಕೊಡಲಾಗಿದೆ.
ಸುಷ್ಮಾ ಕೆ ರಾವ್ ಅವರು ಎರಡನೇ ಮದುವೆಯಾಗಿದ್ದರು. ಎರಡನೇ ಮದುವೆ ವಿಷಯವನ್ನು ಅವರು ಎಲ್ಲಿಯೂ ಹೇಳಿರಲಿಲ್ಲ. ಖಾಸಗಿ ಜೀವನವನ್ನು ಸಾರ್ವಜನಿಕ ಜೀವನದಿಂದ ದೂರ ಇಟ್ಟಿದ್ದರು. ಅನುಬಂಧ ಅವಾರ್ಡ್ಸ್ ಶೋನ ಪ್ರೋಮೋ ರಿಲೀಸ್ ಆಗಿದ್ದು, ಅನುಬಂಧ ಅವಾರ್ಡ್ಸ್ 2025 ಕಾರ್ಯಕ್ರಮವು ಇದೇ ಶನಿ-ಭಾನು-ಸೋಮ, ಸಂಜೆ 7ಕ್ಕೆ ಪ್ರಸಾರ ಆಗಲಿದೆ. ಸೃಜನ್ ಲೋಕೇಶ್ ಅವರು ಸುಷ್ಮಾ ಕೆ ರಾವ್ ಅವರ ಮಗನಿಗೆ , “ಅಮ್ಮ, ನಿನಗೆ ಜಾಸ್ತಿ ಹೊಡಿತಾರಾ? ಅಪ್ಪನಿಗೆ ಹೊಡಿತಾರಾ?” ಎಂದು ಪ್ರಶ್ನೆ ಕೇಳಿದ್ದಾರೆ. ಆಗ ಆರ್ಯನ್ ಅವರು, “ಅಮ್ಮ ನನಗೆ ಹೊಡೆಯುತ್ತಾರೆ” ಎಂದು ಹೇಳಿದ್ದಾರೆ. ಗಂಡ ಮತ್ತು ಮಗನನ್ನು ಒಂದೇ ವೇದಿಕೆಯಲ್ಲಿ ನೋಡಿದ ಸುಷ್ಮಾ ಕೂಡಾ ಖುಷಿಯಾಗಿದ್ದಾರೆ. ಕುಟುಂಬದಿಂದಲೇ ನಾನು ಇಲ್ಲಿರೋದು ಎಂದು ಸುಷ್ಮಾ ಹೇಳಿದ್ದಾರೆ. ನಿರ್ದೇಶಕ ಪ್ರೀತಂ ಗುಬ್ಬಿ ಜೊತೆ ಸುಷ್ಮಾ ಮದುವೆಯಾಗಿತ್ತು. ಮನಸ್ತಾಪದಿಂದ ಇವರಿಬ್ಬರು ದೂರ ಆದರು. ಡಿವೋರ್ಸ್ ಹಾಗೂ ಎರಡನೇ ಮದುವೆ ಬಗ್ಗೆ ಸುಷ್ಮಾ ಎಲ್ಲಿಯೂ ಮಾತಾಡಿರಲಿಲ್ಲ.

ನೋಡಿರಿ

