ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆ ಹೋಗುವ ಭಕ್ತರೇ ಎಚ್ಚರ- ತಾಳು ಬೆಟ್ಟದಲ್ಲಿ ಅದೇ ನರಹಂತಕ ಚಿರತೆ ಪ್ರತ್ಯಕ್ಷ

ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆ ಹೋಗುವ ಭಕ್ತರೇ ಎಚ್ಚರ-  ತಾಳು ಬೆಟ್ಟದಲ್ಲಿ ಅದೇ ನರಹಂತಕ ಚಿರತೆ ಪ್ರತ್ಯಕ್ಷ

ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮಾಡುವ ಭಕ್ತರೇ ನೀವು ಜಾಗೃತರಾಗಲೇಬೇಕು. ಒಂಟಿಯಾಗಿ ಪಾದಯಾತ್ರೆ ಮಾಡುವುದು ಒಳ್ಳೆಯದಲ್ಲ. ಜೊತೆಗೆ ಇದೀಗ ಮಲೆ ಮಹದೇಶ್ವರ ರಸ್ತೆ ತಡೆಗೋಡೆ ಮೇಲೆ ಮತ್ತೆ ಅದೇ ಚಿರತೆ ಪ್ರತ್ಯಕ್ಷವಾಗಿದೆ. ಇದೀಗ ಪಾದಯಾತ್ರಿಯನ್ನ ಚಿರತೆ ಬಲಿ ಪಡೆದ ಮೇಲೆ ಜಿಲ್ಲಾಡಳಿತ ಕೂಡಾ ಅಲರ್ಟ್ ಆಗಿದೆ. ಜ.24ರ ತ‌ನಕ ಪಾದಯಾತ್ರೆ ಕೈಗೊಳ್ಳದಂತೆ ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ: ಮಲೆಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ಚಿರತೆ ಅಟ್ಯಾಕ್ – ಪಾದಯಾತ್ರೆ ಹೋದವನನ್ನ ಕಾಪಾಡಲಿಲ್ಲ ಮಾದಪ್ಪ!

ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ತಾಳುಬೆಟ್ಟದಲ್ಲಿ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಯುವಕ ಚಿರತೆ ದಾಳಿಗೆ ಬಲಿಯಾದ ಘಟನೆ ಭಕ್ತರಲ್ಲಿ ತಲ್ಲಣ ಮೂಡಿಸಿದೆ. ಅಲ್ಲದೇ, ಯುವಕನನ್ನ ಬಲಿ ಪಡೆದ ಚಿರತೆ ಮತ್ತದೇ ಜಾಗದಲ್ಲಿ ಪ್ರತ್ಯಕ್ಷವಾಗಿದೆ. ಮಲೆ ಮಹದೇಶ್ವರ ರಸ್ತೆಯ ತಡೆಗೋಡೆ ಮೇಲೆ ಚಿರತೆ ಕಾಣಿಸಿಕೊಂಡ ದೃಶ್ಯ ಸೆರೆಯಾಗಿದೆ. ಅದೇ ಜಾಗದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಭಕ್ತರ ಕಾರಿನ ಕ್ಯಾಮೆರಾದಲ್ಲಿ ಚಿರತೆ ಪ್ರತ್ಯಕ್ಷವಾಗಿರುವ ದೃಶ್ಯ ಸೆರೆಯಾಗಿದೆ.ರಸ್ತೆಯ ತಡೆಗೋಡೆಯ ಮೇಲೆಯೇ ಕುಳಿತು ಚಿರತೆ ವಿಶ್ರಮಿಸುತ್ತಿರೋದು ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೀಗ ಚಿರತೆ ಸೆರೆಗಾಗಿ ಜಿಲ್ಲಾಡಳಿತ ಪ್ರಯತ್ನಿಸುತ್ತಿದ್ದು, ಅಲ್ಲಿಯವರೆಗೆ ದ್ವಿಚಕ್ರ ವಾಹನ ಸವಾರರಿಗೆ ಜಿಲ್ಲಾಡಳಿತ ತಾತ್ಕಾಲಿಕ ನಿರ್ಬಂಧ ವಿಧಿಸಿದೆ. ಜೊತೆಗೆ ಪಾದಯಾತ್ರಿಗಳಿಗೂ ಜನವರಿ 24ರಂದು ಪಾದಯಾತ್ರೆ ಕೈಗೊಳ್ಳದಂತೆ ಆದೇಶ ನೀಡಿದೆ.

ಮಂಡ್ಯ ಜಿಲ್ಲೆಯ ಚಿರನಹಳ್ಳಿ ಗ್ರಾಮದ ಪ್ರವೀಣ್ (30) ಎಂಬುವರು ಚಿರತೆ ದಾಳಿಗೆ ಬಲಿಯಾಗಿದ್ದರು. ಮಲೆಮಹದೇಶ್ವರ ಬೆಟ್ಟಕ್ಕೆ ಮಂಡ್ಯ ಚಿರನಹಳ್ಳಿ ಗ್ರಾಮ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ನೂರಾರು ಜನರು ಪಾದಯಾತ್ರೆ ತೆರಳಿದ್ದರು. ಮಂಗಳವಾರ ರಾತ್ರಿ ತಾಳುಬೆಟ್ಟದಲ್ಲಿ ವಾಸ್ತವ್ಯ ಹೂಡಿದ್ರು, ಬುಧವಾರ ಬೆಳಗ್ಗೆ ಅಲ್ಲಿಂದ ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ಹೊರಟಿದ್ದರು ಎನ್ನಲಾಗ್ತಿದೆ.

 

Sulekha