ಪತ್ತೆಯಾಯ್ತು 2,000 ವರ್ಷಗಳ ಹಿಂದಿನ ಮಯಾನ್ ನಗರ

ಪತ್ತೆಯಾಯ್ತು 2,000 ವರ್ಷಗಳ ಹಿಂದಿನ ಮಯಾನ್ ನಗರ

ವಾಷಿಂಗ್ಟನ್ : ಉತ್ತರ ಗ್ವಾಟೆಮಾಲಾದ ಮಳೆ ಕಾಡುಗಳಲ್ಲಿ ಸಂಶೋಧಕರು ವೈಮಾನಿಕ ಸಮೀಕ್ಷೆ ನಡೆಸುವ ವೇಳೆ ಸುಮಾರು 2,000 ವರ್ಷಗಳ ಹಿಂದಿನ ಮಯಾನ್ ನಗರ ಪತ್ತೆಯಾಗಿದೆ.

ಮೆಕ್ಸಿಕನ್ ಗಡಿಗೆ ಸಮೀಪದಲ್ಲಿರುವ ಮತ್ತು ಅಗಾಧವಾದ 650 ಚದರ ಮೈಲುಗಳಷ್ಟು ವ್ಯಾಪಿಸಿರುವ ಈ ಪ್ರದೇಶವನ್ನು ಮಿರಾಡೋರ್-ಕಲಾಕ್ಮುಲ್ ಕಾರ್ಸ್ಟ್ ಬೇಸಿನ್ ಎಂದು ಕರೆಯಲಾಗುತ್ತದೆ. 2,000 ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದ ಈ ನಗರವು 110 ಮೈಲುಗಳ ಏರುದಾರಿಗಳನ್ನುಹೊಂದಿದೆ. ಇದು ಮಯಾನ್  ನಾಗರಿಕತೆಯ ನಿವಾಸಿಗಳು ಹತ್ತಿರದ ವಸಾಹತುಗಳಿಗೆ ಸಂಪರ್ಕಿಸಲು ಸಹಾಯಕವಾಗಿತ್ತು  ಎಂದು ಪುರಾತತ್ವ ಶಾಸ್ತ್ರಜ್ಞರು ಅಂದಾಜಿಸಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಮತ್ತು ಪೂರ್ವ ಘಟ್ಟಗಳಿಗೂ ಕಾದಿದ್ಯಾ ಆಪತ್ತು! – ಭೂವಿಜ್ಞಾನಿಗಳು ಹೇಳಿದ್ದೇನು?

ಲಿಡಾರ್ ಪದ್ದತಿಯ (ಲೈಟ್ ಡಿಟೆಕ್ಷನ್ ಅಂಡ್ ರೇಂಜಿಂಗ್) ವಿಧಾನ ಬಳಸಿ ಅಮೆರಿಕಾ, ಫ್ರಾನ್ಸ್ ಮತ್ತು ಗ್ವಾಟೆಮಾಲಾದ ಹಲವು ವಿಶ್ವವಿದ್ಯಾಲಯಗಳು ಸೇರಿ ಮಯಾನ್ ನಗರವನ್ನು ಪತ್ತೆ ಹಚ್ಚಲಾಗಿದೆ.

Ancient Mesoamerica ಎಂಬ ನಿಯತಕಾಲಿಕೆಯಲ್ಲಿ ಅಧ್ಯಯನ ವರದಿ ಪ್ರಕಟವಾಗಿದೆ. ‘ ನಾಗರಿಕತೆಯೊಂದು ತನ್ಮ ಸಾಮಾಜಿಕ ಆರ್ಥಿಕ ಸಂಘಟನೆ ಮತ್ತು ರಾಜಕೀಯ ಶಕ್ತಿಯನ್ನು ಪ್ರತಿಬಿಂಬಿಸಲು ಮೂಲಸೌಕರ್ಯ ಸೌಲಭ್ಯವನ್ನು ಹೇಗೆ ಮಾಡಿಕೊಂಡಿದೆ ಎಂಬುದನ್ನು ವಿಶ್ಲೇಷಿಸಲು ಲಿಡಾರ್ ವಾಯುಗಾಮಿ ದತ್ತಾಂಶವನ್ನು ಸಂಶೋಧನೆಯಲ್ಲಿ ಬಳಸಲಾಗಿದೆ’ ಎಂದು ಸಂಶೋಧಕರೊಬ್ಬರು ಹೇಳಿದ್ದಾರೆ.

suddiyaana