T-20 ವಿಶ್ವಕಪ್ ಆಡಲ್ವಾ ಪಾಕ್? – ಬಾಂಗ್ಲಾ ಬೆನ್ನಿಗೆ ನಿಂತು ಬ್ಲ್ಯಾಕ್ ಮೇಲ್
ICC ಡೆಡ್ ಲೈನ್ ಮೀರಿದ್ರೆ ಕಿಕ್ ಔಟ್!

ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ ಅನ್ನೋ ಗಾದೆ ಮಾತನ್ನ ನೀವ್ ಕೇಳೇ ಇರ್ತೀರಾ. ಅಂದ್ರೆ ಎರಡರದ್ದೂ ಒಂದೇ ಗುಣ.. ಅದು ಕಹಿ.. ಇದನ್ನ ಬಿಡಿಸಿ ಹೇಳ್ಬೇಕಿಲ್ಲ. ಈಗ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಸ್ಥಿತಿಯೂ ಹಿಂಗೇ ಇದೆ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ನಾವು ಭಾರತಕ್ಕೆ ವಿಶ್ವಕಪ್ ಆಡೋಕೆ ಬರಲ್ಲ.. ಬೇರೆ ಕಡೆ ಶಿಫ್ಟ್ ಮಾಡಿ ಇಲ್ದಿದ್ರೆ ನಾವು ಟೂರ್ನಿಯನ್ನೇ ಬಹಿಷ್ಕಾರ ಮಾಡ್ತೀವಿ ಅಂತಿದ್ದಾರೆ. ಇದೀಗ ಪಾಕಿಸ್ತಾನ ಕೂಡ ಟಿ-20 ವಿಶ್ವಕಪ್ ನಿಂದ ನಾವೂ ಹಿಂದೆ ಸರೀತಿವಿ ಅಂತಾ ಬ್ಲ್ಯಾಕ್ಮೇಲ್ ಮಾಡ್ತಿದ್ದಾರೆ.
ಇದನ್ನೂ ಓದಿ : MI ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ಗೆ ಭರ್ಜರಿ ಜಯ – ಸತತ ಸೋಲಿನಿಂದ ಕಂಗೆಟ್ಟ ಕೌರ್ ಪಡೆ
ಫೆಬ್ರವರಿ 7ರಿಂದ ಟಿ-20ವಿಶ್ವಕಪ್ ಆರಂಭ ಆಗುತ್ತೆ. 20 ರಾಷ್ಟ್ರಗಳ ನಡುವಿನ ಹೈವೋಲ್ಟೇಜ್ ಟೂರ್ನಿಗೆ ಆಲ್ರೆಡಿ, ಡೇಟ್, ಶೆಡ್ಯೂಲ್ ಎಲ್ಲಾ ಫಿಕ್ಸ್ ಆಗಿದೆ. ಭಾರತ ಮತ್ತು ಶ್ರೀಲಂಕಾ ಹೋಸ್ಟಿಂಗ್ ಹೊಣೆ ಹೊತ್ತಿವೆ. ಎಲ್ಲಾ ರಾಷ್ಟ್ರಗಳೂ ತಮ್ಮ ತಂಡಗಳನ್ನೂ ಅನೌನ್ಸ್ ಮಾಡಿ ಪ್ರಿಪರೇಷನ್ಸ್ ಕೂಡ ನಡೀತಿದೆ. ಹೀಗಿದ್ರೂ ಬಾಂಗ್ಲಾದೇಶ ಮಾತ್ರ ನಮ್ಮ ಪಂದ್ಯಗಳನ್ನ ಬೇರೆ ಕಡೆ ಶಿಪ್ಟ್ ಮಾಡಿ ನಾವು ಭಾರತದಲ್ಲಿ ಆಡಲ್ಲ ಅಂತಿದ್ದಾರೆ. ಇಷ್ಟು ದಿನ ನಮ್ಮ ಸಪೋರ್ಟ್ ಬಾಂಗ್ಲಾಗೆ ಅಂತಿದ್ದ ಪಾಕಿಸ್ತಾನ ಈಗ ಟೂರ್ನಿಯನ್ನೇ ಆಡಲ್ಲ ಅಂತಾ ಹೊಸ ನಾಟಕ ಶುರು ಮಾಡಿದೆ.
ಟಿ-20 ವಿಶ್ವಕಪ್ ಸಿದ್ಧತೆಗಳನ್ನ ನಿಲ್ಲಿಸುವಂತೆ ಹೇಳಿದ್ಯಾ ಪಿಸಿಬಿ?
ಐಪಿಎಲ್ನಿಂದ ಮುಸ್ತಫಿಜುರ್ ರೆಹಮಾನ್ರನ್ನ ಹೊರ ಹಾಕಿದ್ದಕ್ಕೆ ಸಿಟ್ಟಾಗಿರೋ ಬಾಂಗ್ಲಾದೇಶ ಟಿ-20 ವಿಶ್ವಕಪ್ ಪಂದ್ಯಗಳನ್ನ ನಾವು ಭಾರತದಲ್ಲಿ ಆಡಲ್ಲ. ಸುರಕ್ಷತೆ ಮತ್ತು ಭದ್ರತೆ ಬಗ್ಗೆ ನಮಗೆ ಆತಂಕ ಇದೆ. ಸೋ ಬೇರೆ ರಾಷ್ಟ್ರದಲ್ಲಿ ಆಡ್ಸಿದ್ರೆ ಆಡ್ತೀವಿ ಇಲ್ದಿದ್ರೆ ಟೂರ್ನಿಯಿಂದಲೇ ಹೊರ ಬರ್ತೀವಿ ಅಂತಿದೆ. ಆಲ್ರೆಡಿ ಪತ್ರಗಳನ್ನೂ ಬರೆದಿದೆ. ಐಸಿಸಿ ಕಡೆಯಿಂದಲೂ ಮಾತುಕತೆ ನಡೀತಿದೆ. ಹೀಗೆ ಹಜ್ಜಜಗ್ಗಾಟ ನಡೀತಿರುವಾಗ್ಲೇ ಪಾಕಿಸ್ತಾನ ನಂದೂ ಒಂದ್ ಇರ್ಲಿ ಅಂತಾ ಬಾಂಗ್ಲಾ ಮುಂದೆ ಹೀರೋ ಆಗೋಕೆ ಹೊರಟಿದೆ. ಭಾರತದಲ್ಲಿ ಆಡುವುದನ್ನು ಬಹಿಷ್ಕರಿಸಿರುವ ಬಾಂಗ್ಲಾದೇಶದ ನಿರ್ಧಾರಕ್ಕೆ ಪಾಕ್ ಬೆಂಬಲ ಘೋಷಿಸಿದೆ. ಅಷ್ಟೇ ಅಲ್ದೇ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಸಿದ್ದತೆ ಮಾಡುವುದನ್ನು ಪಾಕಿಸ್ತಾನ ತಂಡವು ನಿಲ್ಲಿಸುವಂತೆ ಪಿಸಿಬಿ ಸೂಚನೆ ನೀಡಿದೆ ಎನ್ನಲಾಗಿದೆ. ಈ ಬಗ್ಗೆ ಪಾಕಿಸ್ತಾನದ ಜಿಯೋ ನ್ಯೂಸ್ ವರದಿ ಮಾಡಿದೆ. ಒಂದು ವೇಳೆ ಬಾಂಗ್ಲಾದೇಶದ ಸಮಸ್ಯೆ ಬಗೆಹರಿಯದಿದ್ದರೆ ಟಿ20 ವಿಶ್ವಕಪ್ನಲ್ಲಿ ತನ್ನ ಭಾಗವಹಿಸುವಿಕೆಯ ವಿಚಾರವನ್ನು ಮರುಪರಿಶೀಲಿಸುವುದಾಗಿ ಪಾಕಿಸ್ತಾನ ಹೇಳಿದೆ. ಹೀಗಾಗಿ ಪಾಕಿಸ್ತಾನ ವಿಶ್ವಕಪ್ ಆಡಲ್ವಾ ಅನ್ನೋ ಅನುಮಾನ ಶುರುವಾಗಿದೆ.
ಜನವರಿ 21ರ ಡೆಡ್ ಲೈನ್ ನೀಡಿದ ಐಸಿಸಿ!
ಇನ್ನು ಭದ್ರತೆ-ಸುರಕ್ಷತೆ ಬಗ್ಗೆ ಐಸಿಸಿಯೇ ಕ್ಲಾರಿಟಿ ಕೊಟ್ಟಿದ್ದು ಭಾರತದಲ್ಲಿ ಪಂದ್ಯಗಳಿಗೆ ಯಾವುದೇ ಸಮಸ್ಯೆ ಇಲ್ಲ ಅಂದಿದ್ರೂ ಬಾಂಗ್ಲಾ ಇದನ್ನ ಒಪ್ತಿಲ್ಲ. ಐಸಿಸಿ ನಿಯೋಗ ಕೂಡ ಬಾಂಗ್ಲಾಗೆ ಭೇಟಿ ನೀಡಿ ಮಾತುಕತೆ ನಡೆಸಿತ್ತು. ಹೀಗಿದ್ರೂ ಅಂತಿಮ ನಿರ್ಧಾರಕ್ಕೆ ಬರೋಕೆ ಆಗಿಲ್ಲ. ಹೀಗಾಗಿ ಐಸಿಸಿ ಮಂಡಳಿಯು ಜನವರಿ 21ರೊಳಗೆ ಬಾಂಗ್ಲಾದೇಶ ತಮ್ಮ ಕ್ರಿಕೆಟ್ ತಂಡವನ್ನು ಐಸಿಸಿ ವಿಶ್ವಕಪ್ಗೆ ಭಾರತಕ್ಕೆ ಕಳುಹಿಸುತ್ತದೆಯೇ ಅಥವಾ ಇಲ್ಲವೇ ಅನ್ನೋದ್ರ ಬಗ್ಗೆ ಅಂತಿಮ ನಿರ್ಧಾರ ತಿಳಿಸ್ಬೇಕು ಅಂತಾ ಡೆಡ್ಲೈನ್ ಕೊಟ್ಟಿದೆ. ಬಹುಶಃ ಬಿಸಿಬಿ ತನ್ನ ತಂಡವನ್ನು ಭಾರತಕ್ಕೆ ಕಳುಹಿಸಲು ನಿರಾಕರಿಸಿದರೆ ಐಸಿಸಿ ಬದಲಿ ತಂಡವನ್ನು ಘೋಷಿಸೋ ಚಾನ್ಸಸ್ ಇರುತ್ತೆ. ಬಾಂಗ್ಲಾ ಟೂರ್ನಿಯಿಂದ ಹೊರ ಬಿದ್ರೆ ಸ್ಕಾಟ್ಲೆಂಡ್ ತಂಡಕ್ಕೆ ಅವಕಾಶ ಸಿಗುವ ಸಾಧ್ಯತೆಯಿದೆ.
ಇನ್ನು ಬಾಂಗ್ಲಾಗೆ ಸಪೋರ್ಟ್ ಮಾಡ್ತೀವಿ ಅಂತಾ ಕಳ್ಳಾಟ ಶುರು ಮಾಡಿರೋ ಪಾಕಿಸ್ತಾನ ಟೂರ್ನಿಯಿಂದ ದೀಢೀರ್ ಅಂತಾ ಹಿಂದೆ ಸರಿಯೋಕೂ ಆಗಲ್ಲ. ಯಾಕಂದ್ರೆ ತಾವು ಯಾವ ಕಾರಣಕ್ಕೆ ವಿಶ್ವಕಪ್ನ ಬಾಯ್ಕಾಟ್ ಮಾಡ್ತಿದ್ದೀವಿ ಅನ್ನೋದಕ್ಕೆ ಸಾಲಿಡ್ ರೀಸನ್ಸ್ ಕೊಡ್ಬೇಕು. ಹಾಗೇನಾದ್ರೂ ಸೂಕ್ತ ಕಾರಣ ಕೊಡದೇ ಇದ್ರೆ ಐಸಿಸಿ ನಿಯಮ ಉಲ್ಲಂಘನೆ ಅನ್ವಯ 2 ಮಿಲಿಯನ್ ಡಾಲರ್ ದಂಡ ಕೂಡ ವಿಧಿಸುವ ಅಧಿಕಾರವಿದೆ. ಒಟ್ನಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಅಂತಾ ಬಂದಾಗ ಎರಡೂ ರಾಷ್ಟ್ರಗಳ ನಡುವೆ ಸಾಕಷ್ಟು ಸಿಮಿಲಾರಿಟೀಸ್ ಇದೆ. ಫೈನಾನ್ಶಿಯಲಿ ಬರ್ಬಾದ್ ಆಗಿದ್ದಾರೆ. ಟಿ-20 ವಿಶ್ವಕಪ್ಗೆ ತಮ್ಮ ತಮ್ಮ ತಂಡಗಳನ್ನ ಕಳ್ಸಿದ್ರೆ ಅವ್ರು ಗೆಲ್ಲೋದು ಅಷ್ಟ್ರಲ್ಲೇ ಇದೆ.. ಸೋತು ಅವಮಾನ ಆಗೋದಂತೂ ಗ್ಯಾರಂಟಿ ಅನ್ನೋದೂ ಅವ್ರಿಗೆ ಗೊತ್ತಿಗೆ. ಹೀಗಾಗಿಯೇ ವಿಶ್ವಕಪ್ ಆಡೋದೇ ಬೇಡ ಅನ್ನೋ ಬಿಲ್ಡಪ್ ಕೊಡೋಣ ಅಂತಾ ಪ್ಲ್ಯಾನ್ ಮಾಡಿದಂತಿದೆ.

ನೋಡಿರಿ

