NZ ವಿರುದ್ಧ ಸೋಲಿನ ಸರಣಿ ನಿಲ್ಲುತ್ತಾ? – T-20Iನಲ್ಲಾದ್ರೂ ಗೆಲ್ಲುತ್ತಾ ಭಾರತ?
ಕಿವೀಸ್ ಗ್ರೌಂಡ್ ವರ್ಕ್ ಗುಟ್ಟು ರಟ್ಟು

ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿ ಸೋತಿರೋ ಭಾರತ ಈಗ ಅದೇ ನ್ಯೂಜಿಲೆಂಡ್ ವಿರುದ್ಧ ಟಿ-20ಐ ಸರಣಿಗೆ ಸಜ್ಜಾಗಿದೆ. ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯ ಇವತ್ತು ನಡೆಯಲಿದೆ. ಭಾರತದಲ್ಲಿ ಕಂಪ್ಲೀಟ್ ಡಾಮಿನೇಷನ್ ಮಾಡ್ತಿರೋ ಕಿವೀಸ್ ಪಡೆ ಚುಟುಕು ಮಾದರಿಯಲ್ಲೂ ಸೋಲಿನ ಶಾಕ್ ಕೊಡೋಕೆ ಕಾಯ್ತಿದ್ದಾರೆ. ಆದ್ರೆ ಕಳೆದ 20 ತಿಂಗಳಿಂದ ಟಿ-20ಐನಲ್ಲಿ ಸೋಲನ್ನೇ ಕಾಣದೆ ಇರೋ ಭಾರತ ಈ ಸರಣಿಯಲ್ಲೂ ಗೆದ್ದು ಅಜೇಯವಾಗಿ ವಿಶ್ವಕಪ್ ಅಖಾಡಕ್ಕಿಳಿಯೋಕೆ ರೆಡಿಯಾಗಿದೆ.
ಇದನ್ನೂ ಓದಿ : IPLಗೆ AI ಜೆಮಿನಿ ಪ್ರಾಯೋಜಕತ್ವ – BCCIಗೆ ಹರಿದು ಬಂತು ಹಣದ ಹೊಳೆ
ಐದು ಪಂದ್ಯಗಳ ಟಿ-20ಐ ಸರಣಿಯ ಮೊದಲ ಪಂದ್ಯ ಇವತ್ತು ನಾಗ್ಪುರದಲ್ಲಿ ನಡೆಯಲಿದೆ. ಌಂಡ್ ಈ ಪಂದ್ಯದಲ್ಲಿ ಭಾರತದ ಪ್ಲೇಯಿಂಗ್ 11 ಬಗ್ಗೆಯೇ ಜಾಸ್ತಿ ಚರ್ಚೆಯಾಗ್ತಿದೆ. ಯಾಕಂದ್ರೆ ತಿಲಕ್ ವರ್ಮಾ ಮತ್ತು ವಾಷಿಂಗ್ಟನ್ ಸುಂದರ್ ರೂಲ್ಡ್ ಔಟ್ ಆಗಿರೋದ್ರಿಂದ ಫೈನಲ್ ಟೀಂ ಹೇಗಿರುತ್ತೆ ಅನ್ನೋ ಕ್ಯೂರಿಯಾಸಿಟಿಯೂ ಇದೆ. ಈಗಾಗ್ಲೇ ಭಾರತದಲ್ಲೇ ಭಾರತವನ್ನ ಟೆಸ್ಟ್ನಲ್ಲಿ ಕ್ಲೀನ್ ಸ್ವೀಪ್ ಮಾಡಿ ಏಕದಿನ ಸರಣಿಯನ್ನೂ ಗೆದ್ದಿರೋ ನ್ಯೂಜಿಲೆಂಡ್ ವಿರುದ್ಧದ ಸೋಲಿನ ಸರಣಿ ನಿಲ್ಬೇಕಿದೆ.
ಭಾರತದ ಸಂಭಾವ್ಯ ಪ್ಲೇಯಿಂಗ್ 11
ಅಭಿಷೇಕ್ ಶರ್ಮಾ
ಸಂಜು ಸ್ಯಾಮ್ಸನ್
ಇಶಾನ್ ಕಿಶನ್
ಸೂರ್ಯಕುಮಾರ್ ಯಾದವ್
ಹಾರ್ದಿಕ್ ಪಾಂಡ್ಯ
ಅಕ್ಸರ್ ಪಟೇಲ್
ರಿಂಕು ಸಿಂಗ್
ಶಿವಂ ದುಬೆ
ಜಸ್ಪ್ರೀತ್ ಬುಮ್ರಾ
ಅರ್ಷದೀಪ್ ಸಿಂಗ್
ವರುಣ್ ಚಕ್ರವರ್ತಿ
ಸೋ ಅಲ್ಲಿಗೆ ತಿಲಕ್ ಬದಲಿಗೆ ಇಶಾನ್ ಕಿಶನ್ ಅಂತೂ ಕಣಕ್ಕಿಳಿಯೋದು ಪಕ್ಕಾ. ಯಾಕಂದ್ರೆ ನಾಗ್ಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ಬದಲಿಗೆ ಇಶಾನ್ ಕಿಶನ್ ಕಣಕ್ಕಿಳಿಯಲಿದ್ದಾರೆ ಎಂದಿದ್ರು. ಹೀಗಾಗಿ ಶ್ರೇಯಸ್ ಅಯ್ಯರ್ ಬೆಂಚ್ ಕಾಯಿಸ್ಬೇಕಾಗುತ್ತೆ. ಹಾಗೇ ವಾಷಿಂಗ್ಟನ್ ಸುಂದರ್ ಬದಲಿಗೆ ರಿಂಕು ಸಿಂಗ್ ಕಾಣಿಸಿಕೊಳ್ಳೋ ನಿರೀಕ್ಷೆ ಇದೆ. ಇನ್ನು ಈ ಸರಣಿ ಮೂಲಕ ಇಶಾನ್ ಕಿಶನ್ ಟೀಂ ಇಂಡಿಯಾಗೆ ಕಂ ಬ್ಯಾಕ್ ಮಾಡ್ತಿರೋದು ಮತ್ತೊಂದು ವಿಶೇಷ..
2 ವರ್ಷಗಳ ಬಳಿಕ ಟೀಂ ಇಂಡಿಯಾ ಜೆರ್ಸಿಯಲ್ಲಿ ಕಿಶನ್!
ಇನ್ನು ಇಶಾನ್ ಕಿಶನ್ 2021ರ ಮಾರ್ಚ್ 14ರಂದು ಇಂಗ್ಲೆಂಡ್ ವಿರುದ್ಧ ಚೊಚ್ಚಲ ಪಂದ್ಯ ಆಡಿದ್ರು. ಕೊನೇದಾಗಿ 2023ರ ನವೆಂಬರ್ ನಲ್ಲಿ ತಮ್ಮ ಕೊನೆಯ T20 ಅಂತರರಾಷ್ಟ್ರೀಯ ಪಂದ್ಯ ಆಡಿದ್ದರು. ನಂತರ ಅವರನ್ನು ತಂಡದಿಂದ ಕೈಬಿಡಲಾಯಿತು. ಇದೀಗ ಮತ್ತೆ ಟಿ-20ಐ ತಂಡದಲ್ಲಿ ಸ್ಥಾನ ಸಿಕ್ಕಿದ್ದು ಪ್ಲೇಯಿಂಗ್ 11ನಲ್ಲಿ ಆಡೋದು ಕೂಡ ಕನ್ಫರ್ಮ್ ಆಗಿದೆ. ಇನ್ನು ಕಿಶನ್ 32 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. 796 ರನ್ ಗಳಿಸಿದ್ದಾರೆ. ಇದರಲ್ಲಿ ಆರು ಅರ್ಧಶತಕಗಳಿವೆ. ಈ ನಂಬರ್ಸ್ ನೋಡ್ದಾಗ ತುಂಬಾ ಇಂಪ್ರೆಸ್ಸಿವ್ ಅನ್ಸಲ್ಲ ಬಟ್ ಕಳೆದ 2 ವರ್ಷಗಳಿಂದ ಡೊಮೆಸ್ಟಿಕ್ನಲ್ಲಿ ತುಂಬಾನೇ ಚೆನ್ನಾಗಿ ಪರ್ಫಾಮ್ ಮಾಡ್ತಿರೋದ್ರಿಂದ ಮತ್ತೆ ಭಾರತದ ಬಾಗಿಲು ತೆರೆದಿದೆ. ಇದನ್ನ ಹೇಗೆ ಉಪಯೋಗಿಸಿಕೊಳ್ತಾರೆ ಅನ್ನೋದು ಇಂಪಾರ್ಟೆಂಟ್ ಆಗುತ್ತೆ. ಆದ್ರೆ ಇದೆಲ್ಲದಕ್ಕಿಂತ ಹೆಚ್ಚಾಗಿ ಟೀಂ ಇಂಡಿಯಾಗೆ ಇರೋ ಮೇನ್ ಚಾಲೆಂಜ್ ಅಂದ್ರೆ ನ್ಯೂಜಿಲೆಂಡ್ ವಿರುದ್ಧ ಸರಣಿ ಗೆಲ್ಲೋದು. ಈಗಾಗ್ಲೇ ಟೆಸ್ಟ್ ಮತ್ತು ಏಕದಿನದಲ್ಲಿ ಭಾರತವನ್ನ ಸೋಲಿಸಿರೋ ಕಿವೀಸ್ ಪಡೆ ಟಿ-20ಐನಲ್ಲೂ ಗೆಲ್ಲೋಕೆ ನೋಡ್ತಿದೆ.
ಅಲರ್ಟ್ ಆಗಲೇಬೇಕು ಭಾರತ!
ಅಭಿಷೇಕ್ ಶರ್ಮಾ ಮೇಲೆಯೇ ಬ್ಯಾಟಿಂಗ್ ಡಿಪೆಂಡೆನ್ಸಿ ಬೇಡ
ನಾಯಕ ಸೂರ್ಯಕುಮಾರ್ ಯಾದವ್ ಕಂ ಬ್ಯಾಕ್ ಮುಖ್ಯ
ಟಾಪ್ ಆರ್ಡರ್ ಬ್ಯಾಟಿಂಗ್ ನಲ್ಲಿ ಸ್ಟ್ರೈಕ್ ರೇಟ್ ಕಾಯ್ದುಕೊಳ್ಳುವುದು
ಬೌಲಿಂಗ್ ನಲ್ಲಿ ಬುಮ್ರಾಗೆ ಉಳಿದವರಿಂದಲೂ ಸರಿಯಾದ ಸಪೋರ್ಟ್
ನ್ಯೂಜಿಲೆಂಡ್ ಆಟಗಾರರ ಬಗ್ಗೆ ಗ್ರೌಂಡ್ ವರ್ಕ್ ಮಾಡಿ ರಣತಂತ್ರ
ಟೆಸ್ಟ್ ಮತ್ತು ಏಕದಿನ ಸೋಲಿಸಿದ್ರೂ ಟಿ-20ಐನಲ್ಲಿ ಸೇಡು
ಟಿ-20 ವಿಶ್ವಕಪ್ ಗೆ ಅಜೇಯವಾಗಿ ಕಾಲಿಡುವಂಥ ಟಾರ್ಗೆಟ್

ನೋಡಿರಿ

