ಆದಿ ಪ್ರೀತಿಗೆ ಭಾಗ್ಯ ಗ್ರೀನ್‌ ಸಿಗ್ನಲ್! – ಶ್ರೇಷ್ಠಾ ಕುತಂತ್ರ.. ಬೀದಿಗೆ ಬಿದ್ದ ತಾಂಡವ್‌!

ಆದಿ ಪ್ರೀತಿಗೆ ಭಾಗ್ಯ ಗ್ರೀನ್‌ ಸಿಗ್ನಲ್! – ಶ್ರೇಷ್ಠಾ ಕುತಂತ್ರ.. ಬೀದಿಗೆ ಬಿದ್ದ ತಾಂಡವ್‌!

ಭಾಗ್ಯ ಈಗ ಧರ್ಮ ಸಂಕಟದಲ್ಲಿದ್ದಾಳೆ. ಒಂದ್ಕಡೆ ಆದೀಶ್ವರ್‌ ಪ್ರಪೋಸ್‌ ಮಾಡಿದ್ದು, ಮದುವೆ ಆಗುವಂತೆ ಕೇಳಿಕೊಂಡಿದ್ದಾನೆ. ಮತ್ತೊಂದ್ಕಡೆ ತಾಂಡವ್‌ ಜೈಲು ಪಾಲಾಗಿದ್ದಾನೆ. ಇದೀಗ ಭಾಗ್ಯ ಮುಂದಿನ ನಡೆ ಏನು ಅನ್ನೋ ಕುತೂಹಲ ವೀಕ್ಷಕರದ್ದು ಅಷ್ಟಕ್ಕೂ ಭಾಗ್ಯ ಗಂಡನ ಪರನಾ? ಅಥವಾ ಆದೀಶ್ವರ್‌ ಪರನಾ? ಭಾಗ್ಯ ಆದೀಶ್ವರ್‌ ನ ಮದುವೆ ಆಗಲು ಒಪ್ಪುತ್ತಾಳಾ ಅಥವಾ ಜೈಲಿನಲ್ಲಿರುವ ತಾಂಡವ್‌ನ ಬಿಡಿಸಿಕೊಂಡು ಬರುತ್ತಾಳಾ ಅನ್ನೋ ಕ್ಯೂರಿಯಾಸಿಟಿ ಮೂಡಿದೆ.

ಇದನ್ನೂ ಓದಿ: ಅಗೆದಷ್ಟು ಬಯಲಾಗುತ್ತಿದೆ ಲಕ್ಕುಂಡಿ ರಹಸ್ಯ! – ದೇಗುಲದ ಆವರಣದಲ್ಲೇ ಮೂಳೆಗಳು ಪತ್ತೆ!

ಭಾಗ್ಯಲಕ್ಷ್ಮೀ ಸೀರಿಯಲ್‌ ಈಗ ರೋಚಕ ತಿರುವು ಪಡೆದುಕೊಂಡಿದೆ. ತಾಂಡವ್‌ನ ಬಿಟ್ಟು ಒಂಟಿಯಾಗಿದ್ದ ಭಾಗ್ಯ ಜೀವನದಲ್ಲಿ ಆದೀಶ್ವರ್‌ ಎಂಟ್ರಿ ಕೊಟ್ಟ ಮೇಲೆ ಎಲ್ಲವೂ ಬದಲಾಗಿದೆ. ಸದಾ ಎಮ್ಮೆ, ಕತ್ತೆ ಅಂತಾ ಬೈಸಿಕೊಂಡು ನಾಲ್ಕು ಗೋಡೆಗಳ ಮಧ್ಯೆ ಜೀವನ ಮಾಡುತ್ತಿದ್ದ ಭಾಗ್ಯ ಈಗ ಒಂದೊಳ್ಳೆ ಜೀವನ ಕಟ್ಟಿಕೊಂಡಿದ್ದಾಳೆ. ತಾನು ದುಡಿದು ಮನೆಯವರನ್ನ ಸಾಕುತ್ತಿದ್ದಾಳೆ. ಆದಿ ಸಪೋರ್ಟ್‌ ಸಿಗ್ತಿದ್ದಂತೆ ಭಾಗ್ಯಗೆ ಸಮಾಜದಲ್ಲೂ ಒಳ್ಳೆಯ ಗೌರವ ಸಿಗುತ್ತಿದೆ. ಭಾಗ್ಯ ಪ್ರತಿ ಕೆಲಸದಲ್ಲೂ ಆದೀಶ್ವರ್‌ ಜೊತೆಯಾಗಿದ್ದಾನೆ. ಕುಸುಮಾ ಕೂಡ ಆದೀಶ್ವರ್‌ ನ ಫ್ರೆಂಡು ಫ್ರೆಂಡು ಅಂತ ಹೇಳಿದ್ದಲ್ಲದೇ ಭಾಗ್ಯ ಆದೀಶ್ವರ್‌ನ ಶತಪ್ರಯತ್ನ ಮಾಡುತ್ತಿದ್ದಾಳೆ. ಇದೀಗ ಆದೀಶ್ವರ್‌ಗೆ ಭಾಗ್ಯ ಮೇಲೆ ಲವ್‌ ಆಗಿದೆ. ತನ್ನ ಪ್ರೀತಿಯನ್ನ ಭಾಗ್ಯ ಮುಂದೆ ಹೇಳಿ ಆಗಿದೆ. ಭಾಗ್ಯ ಮಕ್ಕಳಲ್ಲೂ ಆದೀಶ್ವರ್‌ ಒಪ್ಪಿಗೆ ಕೇಳಿದ್ದಾನೆ.

ಹೌದು.. ಭಾಗ್ಯ ಬರ್ತ್‌ಡೇ ದಿನವೇ ಆದೀಶ್ವರ್‌ ಪ್ರಪೋಸ್‌ ಮಾಡಿದ್ದ. ಆದ್ರೆ ಅವತ್ತು ತಾಂಡವ್‌ ಬಂದು ಎಲ್ಲವನ್ನೂ ಹಾಳು ಮಾಡಿದ್ದ. ತಾಂಡವ್‌ಗೆ ಕೈತಪ್ಪಿದ್ದ ಪ್ರಾಜೆಕ್ಟ್‌ ಸಿಗ್ಬೇಕು ಅಂದ್ರೆ ಭಾಗ್ಯ ಜೊತೆ ಚೆನ್ನಾಗಿರ್ಬೇಕು ಅನ್ನೋದು ಆತನಿಗೆ ಗೊತ್ತಾಗಿದೆ. ಹೀಗಾಗಿ ಆತ ಭಾಗ್ಯ ಕಾಲಿಗೆ ಬಿದ್ದು ನನ್ನಿಂದ ತಪ್ಪಾಗಿದೆ ಕ್ಷಮಿಸು ಎಂದು ಕೇಳಿಕೊಂಡಿದ್ದ. ಅದಾದ ಬಳಿಕ ಶ್ರೇಷ್ಠಾ ತಾಂಡವ್‌ ತಿನ್ನುವ ಊಟದಲ್ಲಿ ವಿಷ ಹಾಕಿದ್ಲು. ಭಾಗ್ಯ ನಂಬುವಂತೆ ಆಕ್ಟ್‌ ಮಾಡು ಎಂದು ಹೇಳಿದ್ಲು. ಆದ್ರೆ ಭಾಗ್ಯ ತಾಂಡವ್‌ ಡ್ರಾಮಾಗೆ ಕರಗಿಲ್ಲ. ಆದ್ರೀಗ ತಾಂಡವ್‌ ಜೈಲು ಪಾಲಾಗಿದ್ದಾನೆ. ತಾಂಡವ್‌ ಜೈಲು ಪಾಲಾಗ್ತಿದ್ದಂತೆ ಶ್ರೇಷ್ಠಾ ಇನ್ನೊಂದು ಮುಖ ರಿವೀಲ್‌ ಆಗಿದೆ. ಶ್ರೇಷ್ಠಾ ತಾಂಡವ್‌ ದುಡ್ಡು ಹೊಡಿಯೋಕೆ ಹೊಸ ಪ್ಲ್ಯಾನ್‌ ಮಾಡಿದ್ದಾಳೆ. ತಾಂಡವ್‌ ಪ್ರಾಜೆಕ್ಟ್‌ ನ ಶೇರು ಪಡೆಯೋಕೆ ಹೊರಟಿದ್ದಾಳೆ. ಹೀಗಾಗಿ ಜೈಲಿಗೆ ಬಂದು ಇದು ಬೇಲ್‌ ಕಾಪಿ. ಇದಕ್ಕೆ ಸೈನ್‌ ಹಾಕು ಅಂತ ಸುಳ್ಳು ಹೇಳಿ ಸಿಗ್ನೇಚರ್‌ ಹಾಕಿಸಿಕೊಂಡಿದ್ದಾಳೆ. ಇದೀಗ ತಾಂಡವ್‌ ನ ಶ್ರೇಷ್ಠಾ ಜೈಲಿನಿಂದ ಆಚೆ ಕರ್ಕೊಂಡು ಬರಲ್ಲ. ಭಾಗ್ಯನೇ ಬರ್ಬೇಕು. ಮತ್ತೊಂದ್ಕಡೆ ಜೈಲಿನಲ್ಲಿರುವ ತಾಂಡವ್‌ಗೆ ರಿಯಲ್‌ ಪ್ರೀತಿ ಯಾವುದು? ರೀಲ್‌ ಪ್ರೀತಿ ಯಾವುದು ಅನ್ನೋದು ಗೊತ್ತಾಗ್ತಿದೆ. ತನ್ನನ್ನ ನಿಜವಾಗಿಯೂ ಪ್ರೀತಿ ಮಾಡ್ತಿದ್ದಿದ್ದು ಭಾಗ್ಯ. ಶ್ರೇಷ್ಠಾ ತನ್ನ ಹಣ ನೋಡಿ ಬಂದಿರೋದು ಅನ್ನೋದು ಅರಿವಾಗ್ತಿದೆ. ಇದೀಗ ತಾಂಡವ್‌ ಪಶ್ಚಾತ್ತಾಪ ಕಾಡ್ತಿದೆ. ಹೀಗಾಗಿ ತಾಂಡವ್‌ ಬದಲಾಗೇ ಬದಲಾಗುತ್ತಾನೆ. ಬಳಿಕ ನನ್ಗೆ ಭಾಗ್ಯನೇ ಬೆಸ್ಟ್‌ ಅಂತ ಹೇಳಿ ಭಾಗ್ಯ ಜೊತೆ ಬಾಳ್ತೇನೆ ಅಂತ ಹೇಳೋದು ಫಿಕ್ಸ್. ಇದೀಗ ಭಾಗ್ಯ  ಇಬ್ಬರಲ್ಲಿ ಯಾರನ್ನ ಒಪ್ಪಿಕೊಳ್ತಾಳೆ? ತಾಂಡವ್‌ನ ಮತ್ತೆ ಒಪ್ಪಿಕೊಳ್ತಾಳಾ? ಅಥವಾ ಆತನನ್ನು ರಿಜೆಕ್ಟ್‌ ಮಾಡಿ ಆದೀಶ್ವರ್‌ನ ಮದುವೆ ಆಗ್ತಾಳಾ ಅನ್ನೋ ಕ್ಯೂರಿಯಾಸಿಟಿ ವೀಕ್ಷಕರಲ್ಲಿದೆ. ಒಟ್ಟಿನಲ್ಲಿ ಭಾಗ್ಯ ಲಕ್ಷ್ಮೀ ಸೀರಿಯಲ್‌ನ ಸ್ಟೋರಿಯಲ್ಲಿ ಸಾಕಷ್ಟು ಟ್ವಿಸ್ಟ್‌ ಇರಲಿದೆ.

Shwetha M