ಪ್ರೋಟಿನ್ ಬೇಕು ಎಂದು ಜಿಮ್‌ನಲ್ಲಿ ಪೆಡಿಗ್ರಿ ತಿಂದ ಯುವಕ! – ಫಿಟ್ನೆಸ್‌ಗಾಗಿ ಈ ಹುಚ್ಚಾಟ ಬೇಕಾ?

ಬಾಡಿ ಬಿಲ್ಡ್ ಮಾಡಬೇಕು. ನೋಡೋಕೆ ಹ್ಯಾಂಡ್ಸಮ್ ಆಗಿ ಕಾಣಬೇಕು ಅನ್ನೋದು ಯುವಕರ ಕನಸು. ಇದಕ್ಕಾಗಿ ಜಿಮ್‌ಗೆ ಹೋಗಿ ನಾನಾ ಸರ್ಕಸ್ ಮಾಡ್ತಾರೆ. ಪ್ರೋಟೀನ್ ಬೂಸ್ಟರ್ ಸೇವಿಸ್ತಾರೆ. ಆದ್ರೆ ಇಲ್ಲೊಬ್ಬ ಮಾತ್ರ ಜಿಮ್‌ನಲ್ಲಿ ಶಕ್ತಿ ಬೇಕು ಅಂತ ನಾಯಿ ಆಹಾರವನ್ನ ಸೇವಿಸಿದ್ದಾನೆ.
ಇದನ್ನೂ ಓದಿ: ಗಿಲ್ಲಿ ಗೆದ್ದ ಎಂದು ಉರಿದುಕೊಳ್ಳಬಾರದು! – ನಾನೇ ಗೆಲ್ಲಬೇಕಿತ್ತು ಎಂದ ಅಶ್ವಿನಿಗೆ ರಘು ಟಾಂಗ್!
ಯುವಕರಿಗೆ ಫಿಟ್ನೆಸ್ ಕ್ರೇಜ್ ಹೆಚ್ಚಾಗಿದೆ. ಫಿಟ್ ಆಗಿ ಕಾಣ್ಬೇಕು ಅಂತ ಅನೇಕರು ಜಿಮ್ ಗೆ ಹೋಗುತ್ತಾರೆ. ಪ್ರೋಟಿನ್ ಜ್ಯೂಸ್‌ಗಳನ್ನ ಸೇವಿಸ್ತಾರೆ. ಇದೀಗ ಇಲ್ಲೊಬ್ಬ ಯುವಕ ಜಿಮ್‌ನಲ್ಲಿ ವ್ಯಾಯಾಮವನ್ನು ಮಾಡುವಾಗ ಪ್ರೋಟೀನ್ ಬೂಸ್ಟರ್ ಆಗಿ ನಾಯಿ ಆಹಾರವನ್ನು ಸೇವಿಸುತ್ತಿರುವುದು ಕಂಡುಬಂದಿದೆ. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ವೈರಲ್ ಆದ ವಿಡಿಯೋದಲ್ಲಿ ಯುವಕ ಜಿಮ್ ನಲ್ಲಿ ಕಾಲಿಗೆ ಸಂಬಂಧಿಸಿದ ವ್ಯಾಯಾಮ ಮಾಡುತ್ತಿರುತ್ತಾನೆ. ವ್ಯಾಯಾಮದ ಮಧ್ಯೆ ವಿರಾಮ ತೆಗೆದು ಕೊಂಡಿದ್ದ ಆತ ಪಕ್ಕದಲ್ಲೇ ಇಟ್ಟಿದ್ದ ಪೆಡಿಗ್ರಿ ನಾಯಿ ಆಹಾರದ ಪ್ಯಾಕೆಟ್‌ನಿಂದ ಸ್ವಲ್ಪ ತೆಗೆದುಕೊಂಡು ಬಾಯಿಗೆ ಹಾಕಿಕೊಳ್ಳುತ್ತಾನೆ. ಡಾ. ಸಿಜೆಡ್ ಎಂಬುವವರು ಈ ವಿಡಿಯೋ ವನ್ನು ಶೇರ್ ಮಾಡಿಕೊಂಡಿದ್ದು ಜಿಮ್‌ಗಳಲ್ಲಿ ನಿಜವಾಗಿ ಏನಾಗುತ್ತಿದೆ ಜನರು ಬಳಸುತ್ತಿರುವ ಉತ್ಪನ್ನಗಳು ಕಾರ್ಯಕ್ಷಮತೆ ಮತ್ತು ಆರೋಗ್ಯವನ್ನು ಹೆಚ್ಚಿಸುತ್ತಿವೆಯೇ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋ ಕಂಡು ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಹೆಚ್ಚಿನವರು ಆತನನ್ನು ಟೀಕೆ ಮಾಡಿದ್ದು ಸಾಮಾನ್ಯ ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರದಿಂದ ಪ್ರೋಟೀನ್ ಸಾಕು. ಇಂತಹ ನಾಯಿ ಆಹಾರ ತಿನ್ನುವುದನ್ನು ನಿಲ್ಲಿಸಿ. ಮೊಟ್ಟೆ, ಚಿಕನ್ ನಿಂದ ಪ್ರೋಟೀನ್‌ಗಳು ಇನ್ನೂ ಲಭ್ಯವಿವೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಇದನ್ನು ನಾಯಿ ಗಳಿಗಾಗಿ ರೂಪಿಸಲಾಗಿದೆ, ಮನುಷ್ಯರಿಗಾಗಿ ಅಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.ಆರೋಗ್ಯ ತಜ್ಞರ ಪ್ರಕಾರ, ನಾಯಿ ಆಹಾರದಲ್ಲಿ ಪ್ರೋಟೀನ್ ಪ್ರಮಾಣ ಹೆಚ್ಚಿರಬಹುದು ಆದರೆ ಅದು ಮನುಷ್ಯರ ದೇಹಕ್ಕೆ ಪೂರಕವಲ್ಲ ಎಂದು ತಿಳಿಸಿದ್ದಾರೆ.

ನೋಡಿರಿ

