ಗಿಲ್ಲಿ ಗೆದ್ದ ಎಂದು ಉರಿದುಕೊಳ್ಳಬಾರದು! – ನಾನೇ ಗೆಲ್ಲಬೇಕಿತ್ತು ಎಂದ ಅಶ್ವಿನಿಗೆ ರಘು ಟಾಂಗ್!

ಬಿಗ್ಬಾಸ್ ಕನ್ನಡ ಸೀಸನ್ 12 ರಲ್ಲಿ ಗಿಲ್ಲಿನಟ ಗೆದ್ದು ಬೀಗಿದ್ದಾರೆ. ಗಿಲ್ಲಿ ಗೆಲುವನ್ನು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಆದ್ರೆ ಅಶ್ವಿನಿ ಗೌಡ ಮಾತ್ರ ಬಿಗ್ಬಾಸ್ ವಿರುದ್ಧವೇ ಹೇಳಿಕೆ ನೀಡುತ್ತಿದ್ದಾರೆ. ವೋಟ್ ರಿವೀಲ್ ಆದ್ರೆ ನಾನೇ ಗೆಲ್ಲೋದು ಅಂತ ಹೇಳಿಕೊಂಡು ಬಂದಿದ್ದಾರೆ. ಇದೀಗ ಅಶ್ವಿನಿಗೆ ರಘು ಮಾತಿನಲ್ಲೇ ತಿವಿದಿದ್ದಾರೆ. ಗಿಲ್ಲಿ ಗೆದ್ದ ಅಂತ ಉರಿದುಕೊಳ್ಳಬಾರದು ಎಂದಿದ್ದಾರೆ ರಘು.
ಇದನ್ನೂ ಓದಿ: ಗೆಳೆಯನ ಬೆನ್ನುಮೂಳೆ ಮುರಿಯಿತು ಎಂದು ಜೀವ ತೆಗೆದೇ ಬಿಟ್ರು! – ಸ್ನೇಹಿತರು ಹೀಗೂ ಇರುತ್ತಾರಾ?
ಗಿಲ್ಲಿನಟ ಗೆಲ್ಲುತ್ತಿದ್ದಂತೆ ಅಶ್ವಿನಿ ಗೌಡ, ಗಿಲ್ಲಿ ಬಡವನ ವೇಷ ಹಾಕಿಕೊಂಡಿದ್ದ. ಕಾಮಿಡಿ ಮಾಡಿ ಗೆದ್ದಿದ್ದಾರೆ, ಅವರಿಗಿಂತ ನನಗೆ ವೋಟ್ ಜಾಸ್ತಿ ಬಂದಿದೆ. ವೋಟ್ ರಿವೀಲ್ ಮಾಡಿದ್ರೆ ನಾನೇ ಗೆಲ್ಲೋದು ಎಂದು ಹೇಳುತ್ತಿದ್ದಾರೆ. ಇದೀಗ ಅಶ್ವಿನಿಗೆ ಮಾತಿಗೆ ರಘು ರಿಯಾಕ್ಟ್ ಮಾಡಿದ್ದಾರೆ. ಏನು ಪ್ರಾಬ್ಲಂ ಇಲ್ಲ. ಬಿಕಾಸ್ ಹಿ ಡಿಸರ್ವ್ ಇಟ್. ತುಂಬಾ ಚೆನ್ನಾಗಿ ಆಡಿದ. ಯಾಕಂದ್ರೆ ನಾನು ಒಂದು, ಎರಡು ವಿಡಿಯೋ ತುಂಬಾ ವಿಡಿಯೋ ನೋಡ್ತಾ ಇದ್ದೀನಿ ಕಾಮಿಡಿ ಮಾಡ್ಕೊಂಡೇ ಗಿಲ್ಲಿ ಬಂದ ಅಂತ. ಹೌದು, ಕಾಮಿಡಿಯಿಂದ ಗೆದ್ದ. ಕಾಮಿಡಿಯೇ ಅವನ ಸ್ಟ್ರೆಂಗ್ತ್ ಎಂದಿದ್ದಾರೆ.
ಕಾಮಿಡಿ ಮಾಡಿಕೊಂಡು ಗೆದ್ದ. ಆಟಾನ ಚೆನ್ನಾಗಿ ಆಡಿದ. ಕಾಮಿಡಿಯಿಂದ ಗೆದ್ದ ಅಂತ ಕಾಮೆಂಟ್ ಬಂತು. ಜಸ್ಟ್ ಬಿಕಾಸ್ ಒಬ್ರು ವಿನ್ ಆಗ್ತಾರೆ ಅಂದಾಗ ಬಗ್ಗೆ ನೆಗೆಟಿವ್ ಮಾತಾಡೋದು ತುಂಬಾ ತಪ್ಪಾಗುತ್ತೆ. ಅವನು ಗೆದ್ದಿದ್ದಾನೆ ಅಂದ್ರೆ ಬಿಕಾಸ್ ಆಫ್ ಅವನು ಏನು ಹಾರ್ಡ್ ವರ್ಕ್ ಮಾಡಿದ್ನೋ ಮನೆಯಲ್ಲಿ, ಅದರಕ್ಕೋಸ್ಕರ ಗೆದ್ದ ಎಂದಿದ್ದಾರೆ.
ಆಚೆ ಬಂದ ಮೇಲೆ ಕಾಮಿಡಿಯಿಂದ ಗೆದ್ದ, ಅವನೊಂದು ಹಳ್ಳಿ ಪ್ರತಿಭೆ ಅದೆಲ್ಲ ಮಾತಾಡೋಕೆ ಸಾಧ್ಯವೇ ಇಲ್ಲ ಎಂದಿದ್ದಾರೆ ರಘು. ಪ್ಯೂರ್ ಹಾರ್ಡ್ ವರ್ಕ್, ಅವನು ತುಂಬಾ ಟ್ಯಾಲೆಂಟೆಡ್. ತುಂಬಾ ಖುಷಿ ಆಯ್ತು ಅವನು ವಿನ್ ಆಗಿದ್ದು. ಬೇರೆ ಬೇರೆ ರಾಜಕೀಯದ ಒಂದು ಆಯಾಮವನ್ನು ಕೊಡ್ತಾ ಹೋಗ್ತಾರೆ. ಮತ್ತೆ ಬಡವರು ಶ್ರೀಮಂತರು ಎನ್ನುವ ಒಂದು ಆಯಾಮವನ್ನು ಕೊಡ್ತಾ ಹೋಗ್ತಾರೆ. ಇಲ್ಲಿ ಯಾವುದು ಬರಲ್ಲ ಎಂದು ಹೇಳಿದ್ದಾರೆ.

ನೋಡಿರಿ

