IPLಗೆ AI ಜೆಮಿನಿ ಪ್ರಾಯೋಜಕತ್ವ – BCCIಗೆ ಹರಿದು ಬಂತು ಹಣದ ಹೊಳೆ

IPLಗೆ AI ಜೆಮಿನಿ ಪ್ರಾಯೋಜಕತ್ವ – BCCIಗೆ ಹರಿದು ಬಂತು ಹಣದ ಹೊಳೆ

2026ರ ಐಪಿಎಲ್‌ಗೂ ಮುನ್ನ ಟೂರ್ನಿಯಲ್ಲಿ ಗೂಗಲ್‌ನ ಎಐ ಪ್ಲಾಟ್‌ಫಾರ್ಮ್‌ ಆಗಿರುವ ಜೆಮಿನಿ ಪ್ರಾಯೋಜಕತ್ವ ಪಡೆದಿದೆ. 3 ವರ್ಷಗಳ ಅವಧಿಗೆ ₹270 ಕೋಟಿಗೆ ಈ ಒಪ್ಪಂದ ನಡೆದಿದೆ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷ ಟಾಟಾ ಗ್ರೂಪ್‌ ಐಪಿಎಲ್‌ನ ಶೀರ್ಷಿಕೆ ಪ್ರಾಯೋಜಕತ್ವ ಪಡೆದಿತ್ತು. ಇದರ ಅವಧಿ 2028ರ ವರೆಗೂ ಇರಲಿದೆ. ಸಹ ಪ್ರಾಯೋಜಕರಾಗಿ ಈ ಬಾರಿ ಗೂಗಲ್‌ ಜೆಮಿನಿ ಸೇರ್ಪಡೆಯಾಗಿದೆ.

ಇದನ್ನೂ ಓದಿ: ಜನವರಿ 27 ರೊಳಗೆ ಏನ್ ಅಂತ ಹೇಳಿ – ಆರ್‌ಸಿಬಿಗೆ BCCI ಡೆಡ್‌ಲೈನ್

ಕಳೆದ ವರ್ಷ ಆನ್​ಲೈನ್​ ಬೆಟ್ಟಿಂಗ್​ ಗೇಮ್​ಗಳನ್ನು ಭಾರತದಲ್ಲಿ ರದ್ದುಗೊಳಿಸುವ ಮಸೂದೆಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿದ ಬೆನ್ನಲ್ಲೇ ಬಿಸಿಸಿಐಗೆ ಭಾರಿ ನಷ್ಟ ಸಂಭವಿಸಿತ್ತು. ಪ್ರಮುಖ ಪ್ರಾಯೋಜಕರಾಗಿದ್ದ  ಬೆಟ್ಟಿಂಗ್ ಆ್ಯಪ್‌ನಿಂದ ಬಿಸಿಸಿಐಗೆ ಕೋಟ್ಯಂತರ ರೂಪಾಯಿ ಹರಿದು ಬರುತ್ತಿತ್ತು. ಅದರಲ್ಲೂ IPL ಸಮಯದಲ್ಲಿ BCCI ಆನ್‌ಲೈನ್ ಗೇಮಿಂಗ್ ಕಂಪನಿಗಳಿಂದ ಗಮನಾರ್ಹ ಆದಾಯವನ್ನು ಗಳಿಸುತ್ತಿತ್ತು. ಆದರೆ, ಕೇಂದ್ರ ಸರ್ಕಾರದ ಆನ್​ಲೈನ್​ ಬೆಟ್ಟಿಂಗ್​ ಆ್ಯಪ್​ಗಳು ನಿರ್ಬಂಧಿಸುವ ಕಾನೂನು ಇದಕ್ಕೆ ಬ್ರೇಕ್​ ಹಾಕಿತು. ನಂತರ ಬಿಸಿಸಿಐ ತನಗಾದ ನಷ್ಟವನ್ನು ಸರಿದೂಗಿಸಲು ಮತ್ತು ಹೊಸ ಪ್ರಾಯೋಜಕತ್ವಕ್ಕಾಗಿ ಹುಡುಕಾಟ ನಡೆಸಿತ್ತು. ಏತನ್ಮಧ್ಯೆ, Google Gemini ಐಪಿಎಲ್ ನೊಂದಿಗೆ AI​ ಪಾಯೋಜಕತ್ವದ ಒಪ್ಪಂದಕ್ಕೆ ಮುಂದಾಗಿದ್ದು ₹270 ಕೋಟಿ ರೂ.ಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಇದು ಮೂರು ವರ್ಷಗಳ ಅವಧಿಗೆ ಸೀಮಿತವಾಗಿರಲಿದೆ .

ಜೆಮಿನಿ ಐಪಿಎಲ್ ರಂಗಕ್ಕೆ ಪ್ರವೇಶ ಪಡೆದಿದ್ದು, ಅದರ ಪ್ರತಿಸ್ಪರ್ಧಿ ಚಾಟ್‌ಜಿಪಿಟಿ ಪ್ರಸ್ತುತ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್‌ನ ಪ್ರಾಯೋಜಕರಲ್ಲಿ ಒಂದಾಗಿದೆ. ಬಿಸಿಸಿಐ ಶೀಘ್ರದಲ್ಲೇ ಜೆಮಿನಿ ಜೊತೆಗಿನ ಪಾಲುದಾರಿಕೆಯನ್ನು ಘೋಷಿಸುವ ಸಾಧ್ಯತೆಯಿದೆ. ಇದರೊಂದಿಗೆ ಎಐ ಈಗ ಕ್ರಿಕೆಟ್ ಜಗತ್ತಿನಲ್ಲಿ ತನ್ನ ಛಾಪು ಮೂಡಿಸಲು ಸಜ್ಜಾಗಿದೆ. ಅದಕ್ಕಾಗಿಯೇ ವಿಶ್ವದ ಅತಿದೊಡ್ಡ ಕ್ರಿಕೆಟ್ ಲೀಗ್ ಐಪಿಎಲ್‌ಗೆ ಪ್ರವೇಶ ಕೊಡಲು ಮುಂದಾಗಿದೆ.ಇನ್ನು, ಚಾಟ್‌ಜಿಪಿಟಿ ಮಹಿಳಾ ಪ್ರೀಮಿಯರ್ ಲೀಗ್​ನೊಂದಿಗೆ ಪಾಲುದಾರಿಕೆ ಹೊಂದಿದ್ದು, ಇದಕ್ಕಾಗಿ ಮಂಡಳಿಯು 16 ಕೋಟಿ ರೂಪಾಯಿಗಳ ಎರಡು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿತ್ತು ಎಂಬುದು ಗಮನಾರ್ಹ.

Kishor KV