ಬೆಂಗಳೂರಿನ ಜಿಮ್ ಟ್ರೈನರ್ ಮೇಲೆ ಲವ್ – ಹರಿಯಾಣದಿಂದ ಓಡೋಡಿ ಬಂದವನು ಖಾಕಿ ಕೈಯಲ್ಲಿ ಲಾಕ್

ಸೋಷಿಯಲ್ ಮೀಡಿಯಾದಲ್ಲಿ ಫಿಟ್ನೆಸ್ ಟ್ರೈನರ್‌ಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪಿ ಲಾಕ್ ಆಗಿದ್ದಾನೆ. 34 ವರ್ಷದ ಫಿಟ್ನೆಸ್ ಟ್ರೈನರ್ ನೀಡಿದ ದೂರಿನನ್ವಯ ಹರಿಯಾಣದ ಸುಧೀರ್ ಕುಮಾರ್ ಎಂಬಾತನನ್ನು ಬಂಧಿಸಲಾಗಿದೆ.ಹರಿಯಾಣದ ರೇವಾರಿ ಮೂಲದ ಯುವತಿ ಬೆಂಗಳೂರಲ್ಲಿ ಫಿಟ್ನೆಸ್ ತರಬೇತುದಾರಳಾಗಿ 15 ವರ್ಷಗಳಿಂದ ವಾಸಿಸುತ್ತಿದ್ದರು. ಕಳೆದ ವರ್ಷ ಹರಿಯಾಣದಲ್ಲಿ ಕುಟುಂಬಸ್ಥರ ಮನೆಗೆ ಬಂದಾಗ ದೂರುದಾರಳನ್ನು ನೋಡಿದ್ದ ಸುಧೀರ್ ಕುಮಾರ್, ನಂತರ ಸೋಷಿಯಲ್ ಮೀಡಿಯಾ ಮೂಲಕ ಕಿರುಕುಳ ನೀಡುವುದ್ದಕ್ಕೆ ಶುರುವಾಗಿದೆ. ಆರೋಪಿತನಿಂದ ಅಪೇಕ್ಷಿಸಲಾರದಷ್ಟು ಅಶ್ಲೀಲ, ಅಸಂಬದ್ಧ ಸಂದೇಶಗಳು ಬರಲಾರಂಭಿಸಿದಾಗ ದೂರುದಾರೆ ಆತನನ್ನು ಬ್ಲಾಕ್ ಮಾಡಿದ್ದರು. ಆದರೂ ಸಹ ಬೇರೆ ಬೇರೆ ಖಾತೆಗಳ ಮೂಲಕ, ವಾಟ್ಸ್ಆ್ಯಪ್ ಮೂಲಕ ಆರೋಪಿ ತನ್ನ ಚಾಳಿ ಮುಂದುವರೆಸಿದ್ದ ಎಂದು ಯುವತಿಯು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಗಗನಯಾತ್ರಿ ಸುನೀತಾ ವಿಲಿಯಮ್ಸ್ ನಿವೃತ್ತಿ! – 27 ವರ್ಷಗಳ ಬಾಹ್ಯಾಕಾಶ ಪಯಣಕ್ಕೆ ನಿಗುಡ್‌ಬೈ!
ನಂತರ ಜನವರಿ 12ರಂದು ಬೆಂಗಳೂರಿಗೆ ಬಂದಿದ್ದ ಆರೋಪಿ, ಬನಶಂಕರಿ 3ನೇ ಹಂತದಲ್ಲಿರುವ ಜಿಮ್ ಬಳಿ ತೆರಳಿ ಯುವತಿಯ ಕುರಿತು ಆಕೆಯ ಪರಿಚಿತರ ಬಳಿ ವಿಚಾರಿಸಿದ್ದ. ವಿಚಾರ ತಿಳಿಯುತ್ತಿದ್ದಂತೆ, ಯುವತಿ ಬೆಂಗಳೂರು ದಕ್ಷಿಣ ವಿಭಾಗದ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ಸುಧೀರ್ ಕುಮಾರ್‌ನನ್ನು ಬಂಧಿಸಿದ್ದು, ವಿಚಾರಣೆ ನಡೆಯುತ್ತಿದೆ.
ಇನ್ಸ್ಟಾಗ್ರಾಮ್ ಮೂಲಕ ಸಂಪರ್ಕ ಸಾಧಿಸಿದ ಆರೋಪಿ, ಬಳಿಕ ವಾಟ್ಸಾಪ್ ಸಂಖ್ಯೆಯನ್ನು ಪಡೆದು ಅಶ್ಲೀಲ ಮೆಸೇಜ್‌ಗಳ ಮೂಲಕ ಕಿರುಕುಳ ಮುಂದುವರಿಸಿದ್ದಾನೆ. ಹರಿಯಾಣದಲ್ಲಿರುವಾಗಲೇ ದೂರುದಾರೆಯ ಕುಟುಂಬ ಸದಸ್ಯರ ಮನೆಗೆ ಬಂದು ಇನ್ಸ್ಟಾಗ್ರಾಮ್‌ನಲ್ಲಿ ಸಂಪರ್ಕ ಸಾಧಿಸಿದ್ದ ಆರೋಪಿಯು, ಮಹಿಳೆಯನ್ನು ಬಿಡದೆ ಬೆಂಬಿಡದೇ ಕಾಡಲು ಶುರು ಮಾಡಿದ್ದಾನೆ.
ನಂತರ ಯುವತಿಯಿಗಾಗಿ ಹರಿಯಾಣದಿಂದ ಕರ್ನಾಟಕಕ್ಕೆ ಪ್ರಯಾಣ ಮಾಡಿದ ಆರೋಪಿ, ಬೆಂಗಳೂರಿಗೆ ಬಂದು ಜಿಮ್ ಹಾಗೂ ಯುವತಿಯ ಸಹೋದ್ಯೋಗಿಗಳ ಬಳಿ ಮಾಹಿತಿ ಕಲೆಹಾಕಲು ಪ್ರಯತ್ನಿಸಿದ್ದಾನೆ. ಈ ವಿಚಾರ ತಿಳಿಯುತ್ತಿದ್ದಂತೆ ಆತಂಕಗೊಂಡ ಇನ್ಫ್ಲೂಯೆನ್ಸರ್ ದಕ್ಷಿಣ ವಿಭಾಗ ಮಹಿಳಾ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾಳೆ. ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಸುಧೀರ್ ಕುಮಾರ್ ಅನ್ನು ಬಂಧಿಸಿದ್ದಾರೆ. ಸದ್ಯ ಪ್ರಕರಣದ ತನಿಖೆ ಮುಂದುವರಿದಿದೆ.

ನೋಡಿರಿ

