ಮೊಸರನ್ನು ಫ್ರಿಡ್ಜ್‌ನಲ್ಲಿ ಇಡುತ್ತೀರಾ? – ಈ ತಪ್ಪು ಮಾಡಿದ್ರೆ ನಿಮ್ಮ ಆರೋಗ್ಯಕ್ಕೆ ಕುತ್ತು!

ಮೊಸರನ್ನು ಫ್ರಿಡ್ಜ್‌ನಲ್ಲಿ ಇಡುತ್ತೀರಾ? – ಈ ತಪ್ಪು ಮಾಡಿದ್ರೆ ನಿಮ್ಮ ಆರೋಗ್ಯಕ್ಕೆ ಕುತ್ತು!

ಮೊಸರಿನಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ಇದನ್ನ ತಿಂದ್ರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹೀಗಾಗಿ ಅನೇಕರು ಮೊಸರನ್ನು ಖರೀದಿಸಿ ಮನೆಗೆ ತಂದು  ಫ್ರಿಡ್ಜ್‌ನಲ್ಲಿ ಇಟ್ಟುಬಿಡುತ್ತಾರೆ. ಫ್ರಿಡ್ಜ್‌ನಲ್ಲಿ ಇಟ್ಟ ಮೊಸರನ್ನು ಸೇವಿಸೋದು ಡೇಂಜರ್‌ ಎಂದು ತಜ್ಞರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಏಯ್.. ನನ್ನ ಕೆಣಕಬೇಡ..! – ತನಗೆ ಬೊಗಳಿದ ಶ್ವಾನವನ್ನು ಒದ್ದು ಓಡಿಸಿದ ಗಜರಾಜ

ಅನೇಕರು ಮೊಸರನ್ನು ಫ್ರಿಡ್ಜ್‌ನಲ್ಲಿ ಇಡುವ ಅಭ್ಯಾಸ ಮಾಡಿಕೊಂಡಿದ್ದಾರೆ. ಫ್ರಿಡ್ಜ್‌ನಲ್ಲಿ ಇಟ್ಟ ಮೊಸರನ್ನು ಸೇವಿಸೋದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲ. ಮೊಸರನ್ನ ಫ್ರಿಡ್ಜ್‌ನಲ್ಲಿ ನೇರವಾಗಿ ಸಂಗ್ರಹಿಸುವುದರಿಂದ ದೇಹಕ್ಕೆ ಯಾವುದೇ ಪೋಷಕಾಂಶಗಳು ದೊರೆಯುವುದಿಲ್ಲ.

ಮೊಸರನ್ನ ಫ್ರಿಡ್ಜ್‌ನಲ್ಲಿ ಇಡುವುದರಿಂದ ಅದು ತಾಜಾವಾಗಿರಲು ಸಹಾಯ ಮಾಡುತ್ತದೆ. ಎಲ್ಲರೂ ಇದು ಒಳ್ಳೆಯದು ಎಂದು ಭಾವಿಸುತ್ತಾರೆ. ಅದು ಹುಳಿಯಾಗುವುದಿಲ್ಲ. ಆದರೆ ಮೊಸರನ್ನ ಫ್ರಿಡ್ಜ್‌ನಲ್ಲಿ ಇಡುವ ಅಗತ್ಯವಿಲ್ಲ. ಇದನ್ನ ಸಾಮಾನ್ಯವಾಗಿ ಪಕ್ಕದ ಡಬ್ಬಿಯಲ್ಲಿ ಸಂಗ್ರಹಿಸಬಹುದು. ಮೊಸರು ಎರಡು ದಿನಗಳವರೆಗೆ ಕೆಡುವುದಿಲ್ಲ.

ಮೊಸರನ್ನ ಫ್ರಿಡ್ಜ್‌ನಲ್ಲಿ ಇಡುವುದರಿಂದ ಅದರಲ್ಲಿರುವ ಪ್ರೋಬಯಾಟಿಕ್ ಬ್ಯಾಕ್ಟೀರಿಯಾಗಳು ಸಾಯುತ್ತವೆ. ನಂತರ ನೀವು ಮೊಸರು ತಿಂದರೆ ಯಾವುದೇ ಪ್ರಯೋಜನವಾಗುವುದಿಲ್ಲ. ಆದ್ದರಿಂದ ನೀವು ಕೋಣೆಯ ಉಷ್ಣಾಂಶದಲ್ಲಿ ಮೊಸರನ್ನ ಹೊರಗೆ ಸಂಗ್ರಹಿಸಬಹುದು.

ಮೊಸರನ್ನ ಫ್ರಿಡ್ಜ್‌ನಲ್ಲಿ ಇಡುವುದರಿಂದ ಮೊಸರಿನ ಗುಣಮಟ್ಟವೂ ಕಡಿಮೆಯಾಗುತ್ತದೆ. ಇದು ನಿಮಗೆ ಯಾವುದೇ ಪೋಷಕಾಂಶಗಳನ್ನ ಒದಗಿಸುವುದಿಲ್ಲ. ಇದು ಕೇವಲ ರುಚಿಕರವಾಗಿದ್ದರೂ, ಮೊಸರು ತಿನ್ನುವುದರಿಂದ ನಿಮಗೆ ಯಾವುದೇ ಪ್ರಯೋಜನಗಳು ಸಿಗುವುದಿಲ್ಲ.

ಇದಲ್ಲದೆ ನೀವು ಮೊಸರನ್ನ ಫ್ರಿಡ್ಜ್‌ನಲ್ಲಿ ಇಟ್ಟರೆ ಅದು ಶೀತದಿಂದ ವಿಚಿತ್ರವಾದ ವಾಸನೆಯನ್ನ ಸಹ ನೀಡುತ್ತದೆ. ಇದರಿಂದ ಮೊಸರು ತಿನ್ನಬೇಕೆಂದು ಅನಿಸುವುದಿಲ್ಲ. ಫ್ರಿಜ್‌ ಸಹ ಕೆಟ್ಟ ವಾಸನೆ ಬರುತ್ತದೆ. ಆದ್ದರಿಂದ ನೀವು ಯಾವುದೇ ಸಂದೇಹವಿಲ್ಲದೆ ಮೊಸರನ್ನ ಹೊರಗೆ ಇಡಬಹುದು. ಇದು ಯಾವುದೇ ಹಾನಿಯನ್ನುಂಟುಮಾಡುವುದಿಲ್ಲ.

Shwetha M