ಏಯ್.. ನನ್ನ ಕೆಣಕಬೇಡ..! – ತನಗೆ ಬೊಗಳಿದ ಶ್ವಾನವನ್ನು ಒದ್ದು ಓಡಿಸಿದ ಗಜರಾಜ

ಏಯ್.. ನನ್ನ ಕೆಣಕಬೇಡ..! – ತನಗೆ ಬೊಗಳಿದ ಶ್ವಾನವನ್ನು ಒದ್ದು ಓಡಿಸಿದ ಗಜರಾಜ

ಆನೆಗಳನ್ನು ಯಾವಾಗಲು ಕೆಣಕಲು ಹೋಗಬಾರದು. ಅದಕ್ಕೆ ಒಮ್ಮೆ ಸಿಟ್ಟು ಬಂದ್ರೆ ಯಾರನ್ನೂ ಸುಮ್ಮನೆ ಬಿಡಲ್ಲ. ಸಿಟ್ಟು ಬಂದ್ರೆ ಮುಂದೆ ಇದ್ದ ವಸ್ತುಗಳನ್ನ ಪುಡಿ ಪುಡಿ ಮಾಡಿಬಿಡುತ್ತವೆ. ಮನುಷ್ಯರು ಇದ್ರೆ ಕೊಂದೇ ಬಿಡುತ್ತವೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗುತ್ತಿರುತ್ತವೆ. ಇದೀಗ ಇಲ್ಲೊಂದು ಶ್ವಾನ ಆನೆಗೆ ಕಾಟ ಕೊಟ್ಟಿದ್ದು, ಆನೆ ಸರಿಯಾಗೇ ಪಾಠ ಕಲಿಸಿದೆ.

ಇದನ್ನೂ ಓದಿ: ಪವಿತ್ರಾ ಗೌಡಗೆ ಇನ್ಮುಂದೆ ಜೈಲೂಟವೇ ಫಿಕ್ಸ್!‌ – ಮನೆ ಊಟಕ್ಕೆ ಕೋರ್ಟ್‌ ಬ್ರೇಕ್!

ಆನೆಗಳು ಸುಖಾ ಸುಮ್ಮನೆ ತನ್ನೊಂದಿಗೆ ಕಿರಿಕ್ ಮಾಡಲು ಬರುವ ಯಾರನ್ನು ಕೂಡ ಸುಮ್ಮನೆ ಬಿಡಲ್ಲ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ತನಗೆ ಬೊಗಳಿದ ಶ್ವಾನವನ್ನು ಆನೆಯು ಒದ್ದು ಓಡಿಸಿದೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಲೆಕ್ ಚೈರ್ಲಟ್ (lek_chailert) ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಆನೆಗಳು ಸೇರಿರುವುದನ್ನು ನೀವು ನೋಡುತ್ತೀರಿ. ಅಲ್ಲೇ ಒಂದು ಬಿಳಿ ಶ್ವಾನವು ನಿಂತಿದೆ. ಈ ನಾಯಿಯೂ ಆನೆಯನ್ನು ನೋಡಿದ ತಕ್ಷಣ ಬೊಗಳಲು ಶುರು ಮಾಡುತ್ತದೆ. ಆದರೆ ಗಜರಾಜ ಪ್ರಾರಂಭದಲ್ಲಿ ಈ ಶ್ವಾನವನ್ನು ನಿರ್ಲಕ್ಷ್ಯ ಮಾಡುತ್ತದೆ. ನಾಯಿಯೂ ಮತ್ತೆ ಮತ್ತೆ ಬೊಗಳುತ್ತಿದ್ದಂತೆ ಆನೆಯು ಒದ್ದು ಬುದ್ಧಿ ಕಲಿಸುವುದನ್ನು ನೋಡಬಹುದು. ಈ ವಿಡಿಯೋ ಒಂದು ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ನೋಡಲು ತುಂಬಾನೇ ಮುದ್ದಾಗಿದೆ ಎಂದಿದ್ದಾರೆ. ಇನ್ನೊಬ್ಬರು, 01% ದಾಳಿ ಹಾಗೂ 0% ಡ್ಯಾಮೇಜ್ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನನಗೆ ಈ ರೀತಿ ಬ್ಯಾಕ್ ಕಿಕ್ ಇಷ್ಟ ಎಂದು ಹೇಳಿದ್ದಾರೆ.

Shwetha M