ಗೆದ್ದಿದ್ದಕ್ಕಿಂತ ಬಿದ್ದಿದ್ದೇ ಜಾಸ್ತಿ ಗಂಭೀರ್ – ಕೊಹ್ಲಿ ಎದುರಲ್ಲೇ ಅಭಿಮಾನಿಗಳ ಗೇಲಿ
ಕೋಚ್ ಸ್ಥಾನಕ್ಕೆ ಗುಡ್ ಬೈ ಹೇಳ್ತಾರಾ?

ಗೆದ್ದಿದ್ದಕ್ಕಿಂತ ಬಿದ್ದಿದ್ದೇ ಜಾಸ್ತಿ ಗಂಭೀರ್ – ಕೊಹ್ಲಿ ಎದುರಲ್ಲೇ ಅಭಿಮಾನಿಗಳ ಗೇಲಿಕೋಚ್ ಸ್ಥಾನಕ್ಕೆ ಗುಡ್ ಬೈ ಹೇಳ್ತಾರಾ?

ಗೌತಮ್ ಗಂಭೀರ್. ಟೀಂ ಇಂಡಿಯಾದ ಒಬ್ಬ ಯಶಸ್ವೀ ಬ್ಯಾಟರ್. ಅದೆಷ್ಟೋ ಪಂದ್ಯಗಳನ್ನ ಏಕಾಂಗಿಯಾಗಿ ನಿಂತು ಗೆಲ್ಲಿಸಿಕೊಟ್ಟಿದ್ದಾರೆ. ಕೋಟ್ಯಂತರ ಅಭಿಮಾನಿಗಳ ಫೇವರೆಟ್ ಕೂಡ. ಆದ್ರೆ ಈಗ ಹೆಡ್​ಕೋಚ್ ಆದ್ಮೇಲೆ ಅವ್ರ ಮೇಲಿನ ಅಭಿಪ್ರಾಯಗಳೇ ಬದಲಾಗಿವೆ. ಗಂಭೀರ್​ರನ್ನ ಹಾಡಿ ಹೊಗಳ್ತಿದ್ದ ಅದೇ ಅಭಿಮಾನಿಗಳು ಈಗ ಹೆಡ್​​ಕೋಚ್ ಸ್ಥಾನದಿಂದ ಗೇಟ್​ಪಾಸ್ ಕೊಡಿ ಅನ್ನುವಷ್ಟ್ರರ ಮಟ್ಟಿಗೆ ವಿರೋಧ ಮಾಡ್ತಿದ್ದಾರೆ. ಮೈದಾನಗಳಲ್ಲೇ ಘೋಷಣೆ ಕೂಗಿದ್ದಾರೆ.

ಇದನ್ನೂ ಓದಿ : ಪ್ಲೇ ಆಫ್ ಗೆ ಲಗ್ಗೆ ಇಟ್ಟ RCB – ಸೋಲಿಲ್ಲದ ಸಿಂಹಿಣಿಯರೇ ಸ್ಟ್ರಾಂಗ್ 

ಟೀಂ ಇಂಡಿಯಾ ಒಂದೊಂದು ಪಂದ್ಯಗಳನ್ನ ಸೋತಾಗ್ಲೆಲ್ಲಾ ಅಲ್ಲಿ ಆಟಗಾರರಿಗಿಂತ ಗೌತಮ್ ಗಂಭೀರ್ ಚರ್ಚೆಯಲ್ಲಿರ್ತಾರೆ. ಸೋಶಿಯಲ್ ಮೀಡಿಯಾದಲ್ಲಂತೂ ಅವ್ರದ್ದೇ ಸದ್ದು, ಸುದ್ದಿ ಎಲ್ಲವೂ. ಯಾಕಂದ್ರೆ ಗಂಭೀರ್ ಕೋಚಿಂಗ್​ನಲ್ಲಿ ಟೀಂ ಇಂಡಿಯಾ ಬೇಡದ ದಾಖಲೆಗಳನ್ನೇ ಮಾಡಿದೆ. ದಶಕಗಳ ಪಾರುಪತ್ಯ ಒಂದೊಂದಾಗೇ ಅಂತ್ಯವಾಗಿದೆ. ಟೆಸ್ಟ್ ಸಿರೀಸ್​ನಲ್ಲಿ ಅಟ್ಟರ್​ಫ್ಲ್ಯಾಪ್ ಆಗಿದ್ದ ಭಾರತ ಈಗ ಏಕದಿನದಲ್ಲೂ ಪಾತಾಳಕ್ಕೆ ಕುಸೀತಿದೆ.  ನ್ಯೂಜಿಲೆಂಡ್ ವಿರುದ್ಧ ಫಾರ್ ದಿ ಫಸ್ಟ್ ಟೈಂ ಭಾರತದಲ್ಲಿ ಏಕದಿನ ಸರಣಿಯನ್ನೂ ಸೋತ್ರು. ಇದೇ ಕಾರಣಕ್ಕೆ ಅಭಿಮಾನಿಗಳು ಮೈದಾನದಲ್ಲೇ ಗಂಭೀರ್​ರನ್ನ ಗೇಲಿ ಮಾಡಿದ್ದಾರೆ. ಗೆಟ್​ಔಟ್ ಗಂಭೀರ್ ಅನ್ನೋ ಘೋಷಣೆಗಳು ಬಂದಿವೆ.

ಮೈದಾನದಲ್ಲೇ ‘ಗಂಭೀರ್ ಹಾಯೆ ಹಾಯೆ’ ಅಂತಾ ಕೂಗಿದ ಫ್ಯಾನ್ಸ್!

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಯ ಕೊನೇ ಪಂದ್ಯ ಭಾನುವಾರ ಇಂದೋರ್​ನಲ್ಲಿ ನಡೆದಿತ್ತು. ಈ ಮ್ಯಾಚಲ್ಲಿ ಸೋತ ಭಾರತ ಸರಣಿಯನ್ನೂ ಕಳ್ಕೊಂಡಿದೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ನ್ಯೂಜಿಲೆಂಡ್ ಏಕದಿನ ಸರಣಿ ಗೆಲ್ತು. ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರಸೆಂಟೇಷನ್ ವೇಳೆ ಗಂಭೀರ್ ಸೇರಿದಂತೆ ಸಾಕಷ್ಟು ಆಟಗಾರರು ಮೈದಾನದಲ್ಲಿದ್ರು. ಈ ವೇಳೆ ಒಂದಷ್ಟು ಅಭಿಮಾನಿಗಳು ಗಂಭೀರ್ ವಿರುದ್ಧ ಘೋಷಣೆಗಳನ್ನ ಕೂಗಿದ್ದಾರೆ. ಗ್ಯಾಲರಿಯಲ್ಲಿದ್ದ ಮಂದಿ ಗಂಭೀರ್ ಹಾಯೆ ಹಾಯೆ ಅಂದ್ರೆ ಗಂಭೀರ್ ಅಯ್ಯೋ ಅಯ್ಯೋ ಅಂತಾ ಗೇಲಿ ಮಾಡಿದ್ದಾರೆ. ಈ ವೇಳೆ ಗಂಭೀರ್ ಪಕ್ಕದಲ್ಲೇ ನಿಂತಿದ್ದ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹರ್ಷಿತ್ ರಾಣಾ, ನಿತೀಶ್ ರೆಡ್ಡಿ, ರವೀಂದ್ರ ಜಡೇಜಾ, ಕೆಎಲ್ ರಾಹುಲ್ ಎಲ್ಲರೂ ಸಿಟ್ಟಿನಿಂದ ಅಭಿಮಾನಿಗಳನ್ನ ದಿಟ್ಟಿಸಿ ನೋಡಿದ್ದಾರೆ. ಹಾಗೇ ವಿರಾಟ್ ಕೊಹ್ಲಿ ಫ್ಯಾನ್ಸ್ ವರ್ತನೆಗೆ ಸಿಟ್ಟಿನಿಂದಲೇ ರಿಯಾಕ್ಟ್ ಮಾಡಿದ್ದಾರೆ. ನಿಮಗೇನು ತಲೆಕೆಟ್ಟಿದೆಯಾ? ಯಾಕೆ ಹೀಗೆ ಮಾಡುತ್ತಿದ್ದೀರಾ? ಎಂದು ಸನ್ನೆ ಮಾಡಿದರು.ಈ ವಿಡಿಯೋ ಈಗ ಫುಲ್ ವೈರಲ್ ಆಗ್ತಿದೆ.

ಮೊದ್ಲೇ ಗೌತಮ್ ಗಂಭೀರ್ ಪ್ರೆಶರ್​ನಲ್ಲಿದ್ದಾರೆ. ಒಂದ್ಕಡೆ ಟೆಸ್ಟ್ ಫಾರ್ಮೆಟ್​ನಲ್ಲಿ ಹೀನಾಯ ಸೋಲುಗಳು.. ಈಗ ಏಕದಿನ ಸರಣಿಯಲ್ಲೂ ಸೋಲು.. ಇದ್ರಿಂದ ಹೇಗೆ ಹೊರಗೆ ಬರೋದು ಅಂತಾ ಟೆನ್ಷನ್​ನಲ್ಲಿದ್ದಾರೆ. ಇದ್ರ ನಡುವೆ ಫ್ಯಾನ್ಸ್ ಕೂಡ ಗಂಭೀರ್​ರನ್ನೇ ಟಾರ್ಗೆಟ್ ಮಾಡಿ ಟೀಸ್ ಮಾಡ್ತಿದ್ದಾರೆ. ಅಷ್ಟಕ್ಕೂ ಇಲ್ಲಿ ಗಂಭೀರ್​ರನ್ನೇ ಗುರಿಯಾಗಿಸಿ ಅಭಿಮಾನಿಗಳು ಈ ರೀತಿ ವರ್ತಿಸೋಕೆ ಕಾರಣಗಳೂ ಇವೆ. ಗಂಭಿರ್ ಹೆಡ್​ಕೋಚ್ ಆದಾಗ್ಲಿಂದ ಭಾರತ ಬ್ಯಾಕ್ ಟು ಬ್ಯಾಕ್ ಬೇಡದ ದಾಖಲೆಗಳನ್ನೇ ಬರೆದಿದೆ. ಚಾಂಪಿಯನ್ಸ್ ಟ್ರೋಫಿ, ಏಷ್ಯಾಕಪ್ ಗೆದ್ರು. ಟಿ-20ಐನಲ್ಲಿ ಸೋತಿಲ್ಲ ಅನ್ನೋದನ್ನ ಬಿಟ್ರೆ ಟೆಸ್ಟ್ ಮತ್ತು ಏಕದಿನ ಸರಣಿಗಳು ಅಂತಾ ಬಂದಾಗ್ಲೆಲ್ಲಾ ಭಾರತ ಮುಗ್ಗರಿಸಿದೆ.

‘ಗಂಭೀರ’ ಸ್ಥಿತಿಯಲ್ಲಿದೆ ಟೀಂ ಇಂಡಿಯಾ!

  1. 2024ರಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಸೋಲು
  2. 2024ರ ಕೊನೆಯಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಕ್ಲೀನ್ ಸ್ವೀಪ್
  3. 2024ರ ಅಕ್ಟೋಬರ್ ನಲ್ಲಿ ತವರಿನ ಟೆಸ್ಟ್‌ ನಲ್ಲಿ ಅತಿ ಕಡಿಮೆ ಸ್ಕೋರ್ -46 ರನ್
  4. 2023-25ರ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ಫೈನಲ್ ತಲುಪಲು ಸಾಧ್ಯವಾಗಲಿಲ್ಲ
  5. 2015ರ ನಂತರ ಮೊದಲ ಬಾರಿಗೆ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಸೋಲು
  6. ಮೊದಲ ಬಾರಿಗೆ ತವರಿನಲ್ಲಿ 200 ಕ್ಕಿಂತ ಕಡಿಮೆ ಟಾರ್ಗೆಟ್ ಬೆನ್ನಟ್ಟಲು ಫೇಲ್
  7. 25 ವರ್ಷಗಳ ನಂತರ ದಕ್ಷಿಣ ಆಫ್ರಿಕಾ ವಿರುದ್ಧ ಹೋಮ್ ಟೆಸ್ಟ್ ಸರಣಿ ಸೋಲು
  8. ಸೌತ್ ಆಫ್ರಿಕಾ ವಿರುದ್ಧ 2ನೇ ಪಂದ್ಯದಲ್ಲಿ ಅತಿ ದೊಡ್ಡ ಸೋಲು – 408 ರನ್‌ ಗಳು
  9. 2026ರಲ್ಲಿ ನ್ಯೂಜಿಲೆಂಡ್ ವಿರುದ್ಧ ಮೊದಲ ಬಾರಿಗೆ ತವರಿನಲ್ಲಿ ಏಕದಿನ ಸರಣಿ ಸೋಲು

ಹೀಗೆ ಗಂಭೀರ್ ಬಂದ್ಮೇಲೆ ಹೇಳ್ತಾ ಹೋದ್ರೆ ಭಾರತದ ಸೋಲು ಮತ್ತು ಕಳಪೆ ದಾಖಲೆಗಳ ಪಟ್ಟಿ ಬೆಳಿತಾನೇ ಹೋಗುತ್ತೆ. ಇಂಗ್ಲೆಂಡ್, ಸೌತ್ ಆಫ್ರಿಕಾ ಹಾಗೇ ನ್ಯೂಜಿಲೆಂಡ್ ಮೂರೂ ಟೆಸ್ಟ್ ಗಳಲ್ಲೂ ಒಂದೊಂದು ಪಂದ್ಯಗಳಲ್ಲೂ ಬೇಡದ ದಾಖಲೆಗಳ ಪಟ್ಟಿ ತುಂಬಾನೇ ದೊಡ್ಡದಿವೆ. ಈ ಮೇಲೆ ಹೇಳಿರುವ ಅಂಕಿಅಂಶಗಳಷ್ಟೇ ಟಾರ್ಗೆಟ್, ಚೇಸಿಂಗ್, ಡಿಫೆನ್ಸ್​ನಲ್ಲೂ ಕಳಪೆ ಪ್ರದರ್ಶನ ನೀಡಿದೆ. ಹೀಗೆ ಪಂದ್ಯದಿಂದ ಪಂದ್ಯಕ್ಕೆ ಗಂಭಿರ್ ಕುರ್ಚಿ ಮತ್ತಷ್ಟು ಅಲುಗಾಡ್ತಾನೇ ಇದೆ. ಟೆಸ್ಟ್ ಮತ್ತು ಏಕದಿನದಲ್ಲಿ ಭಾರತ ವೀಕ್ ಟೀಂ ಅನ್ನೋ ಥರ ಪರ್ಫಾಮ್ ಮಾಡ್ತಿದೆ. ಹೀಗಾಗಿ ಅಭಿಮಾನಿಗಳೂ ಕೂಡ ಗಂಭೀರ್​ ಗೆಟ್​ಔಟ್ ಅಂತಾ ಆಕ್ರೋಶ ಹೊರ ಹಾಕ್ತಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಇದ್ದ ಸಿಟ್ಟು ಈಗ ಮೈದಾನಗಳಲ್ಲಿ ಗೇಲಿ ಮಾಡುವಷ್ಟರ ಮಟ್ಟಿಗೆ ಬಂದಿದೆ. ಆದ್ರೆ ಇದನ್ನೆಲ್ಲಾ ಹೇಗೆ ಹ್ಯಾಂಡಲ್ ಮಾಡ್ತಾರೆ. ನ್ಯೂಜಿಲೆಂಡ್ ವಿರುದ್ಧ ಟಿ-20ಐ ಸಿರೀಸ್ ಮತ್ತು ಟಿ-20 ವಿಶ್ವಕಪ್ ಗೆದ್ರೆ ಜೂನ್​ವರೆಗೂ ಗಂಭೀರ್ ಸ್ವಲ್ಪ ರಿಲ್ಯಾಕ್ಸ್ ಆಗ್ಬೋದು.

Shantha Kumari