ಶ್ರೀ ರಾಮನವಮಿ ದಿನವೇ ವಾರಣಾಸಿ ಸಿನಿಮಾ ರಿಲೀಸ್ – ಟಾಲಿವುಡ್ ಅಂಗಳದಲ್ಲಿ ನಿರೀಕ್ಷೆ ಮೂಡಿಸಿದ ರಾಜಮೌಳಿ ಮಹೇಶ್ ಬಾಬು ಜೋಡಿ

ಶ್ರೀ ರಾಮನವಮಿ ದಿನವೇ ವಾರಣಾಸಿ ಸಿನಿಮಾ ರಿಲೀಸ್ – ಟಾಲಿವುಡ್ ಅಂಗಳದಲ್ಲಿ ನಿರೀಕ್ಷೆ ಮೂಡಿಸಿದ ರಾಜಮೌಳಿ ಮಹೇಶ್ ಬಾಬು ಜೋಡಿ

ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಎಸ್.ಎಸ್ ರೌಜಮೌಳಿ ಸಿನಿಮಾ ವಾರಣಾಸಿ ಸಿನಿಮಾ ಈಗಾಗಲೇ ಸಾಕಷ್ಟು ಸೌಂಡ್ ಮಾಡುತ್ತಿದೆ. ವಾರಣಾಸಿ ಚಿತ್ರದ ಟೀಸರ್ ಈಗಾಗಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದೀಗ ವಾರಣಾಸಿ ಸಿನಿಮಾ ಶ್ರೀ ರಾಮನವಮಿ ದಿನ ರಿಲೀಸ್ ಆಗಲಿದೆ.

ಇದನ್ನೂ ಓದಿ: ಬಿಗ್‌ಬಾಸ್‌ ಕಪ್‌ ಗೆದ್ದ ಗಿಲ್ಲಿಗೆ ಹುಟ್ಟೂರಲ್ಲಿ ಭವ್ಯ ಸ್ವಾಗತ! – ಮಳವಳ್ಳಿಯಲ್ಲಿ ಭರ್ಜರಿ ರೋಡ್​ ಶೋ!

ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಎಸ್. ಎಸ್ ರಾಜಮೌಳಿ, ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಮಹೇಶ್ ಬಾಬು, ಮಲಯಾಳಂ ಚಿತ್ರರಂಗದ ಸ್ಟಾರ್ ಪೃಥ್ವಿರಾಜ್ ಸುಕುಮಾರನ್,  ಬಾಲಿವುಡ್ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ಅಭಿನಯದ ವಾರಣಾಸಿ ಸಿನಿಮಾ ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ. ಈಗಾಗಲೇ ಪ್ಯಾರಿಸ್‌ನ ಸುಪ್ರಸಿದ್ಧ ‘ಲೆ ಗ್ರಾಂಡ್ ರೆಕ್ಸ್’ ಚಿತ್ರಮಂದಿರದಲ್ಲಿ ಜನವರಿ 5 ರಂದು  ಟೀಸರ್ ಪ್ರದರ್ಶನಗೊಂಡಿದೆ. ಈ ಐತಿಹಾಸಿಕ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡ ಮೊದಲ ಭಾರತೀಯ ಚಿತ್ರದ ಟೀಸರ್ ವಾರಣಾಸಿ ಸಿನಿಮಾದ್ದು. ಇಷ್ಟೆಲ್ಲಾ ಹೈಪ್ ಸಿಕ್ಕಿರುವ ಸಿನಿಮಾ ಇದೀಗ ಶ್ರೀರಾಮ ನವಮಿಗೆ ರಿಲೀಸ್ ಆಗಲಿದೆ. ಏಪ್ರಿಲ್ 9 ಕ್ಕೆ ಸಿನಿಮಾ ಗ್ರ್ಯಾಂಡ್ ರಿಲೀಸ್ ಆಗಲಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆಗಳು ಗರಿಗೆದರಿವೆ.

ಭಾರತೀಯ ಚಿತ್ರರಂಗದ ದೈತ್ಯ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಸಿನಿಮಾ ಎಂದರೆ ಅದು ಕೇವಲ ಚಿತ್ರವಲ್ಲ, ಒಂದು ದೃಶ್ಯ ವೈಭವ.. ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆದ ಅದ್ಧೂರಿ ‘ಗ್ಲೋಬ್‌ಟ್ರೋಟರ್’ ಸಮಾರಂಭದಲ್ಲಿ ಈ ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಲಾಗಿತ್ತು. ಈ ಟೀಸರ್‌ನಲ್ಲಿ ಮಹೇಶ್ ಬಾಬು ‘ರುದ್ರ’ ಎಂಬ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೈಯಲ್ಲಿ ತ್ರಿಶೂಲ ಹಿಡಿದು, ರಕ್ತಸಿಕ್ತವಾಗಿ ಗೂಳಿಯ ಮೇಲೆ ಸವಾರಿ ಮಾಡುವ ಮಹೇಶ್ ಬಾಬು ಅವರ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಇನ್ನು ಈ ಚಿತ್ರದಲ್ಲಿ ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಮಂದಾಕಿನಿ ಎಂಬ ಪಾತ್ರದಲ್ಲಿ ನಟಿಸುತ್ತಿದ್ದರೆ, ಮಲಯಾಳಂ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಕುಂಭ ಎಂಬ ಖಡಕ್ ವಿಲನ್ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ಆಸ್ಕರ್ ವಿಜೇತ ಎಂ.ಎಂ. ಕೀರವಾಣಿ ಸಂಗೀತ ಸಂಯೋಜನೆ ಮಾಡುತ್ತಿದ್ದರೆ, ವಿ. ವಿಜಯೇಂದ್ರ ಪ್ರಸಾದ್ ಈ ಅದ್ಭುತ ಕಥೆಯನ್ನು ಹೆಣೆದಿದ್ದಾರೆ. ಆಫ್ರಿಕಾದ ಕಾಡುಗಳ ಹಿನ್ನೆಲೆಯಲ್ಲಿ ನಡೆಯುವ ಸಾಹಸಮಯ ಕಥೆ ಇದಾಗಿದೆ.

Sulekha