ಪ್ಲೇ ಆಫ್ ಗೆ ಲಗ್ಗೆ ಇಟ್ಟ RCB – ಸೋಲಿಲ್ಲದ ಸಿಂಹಿಣಿಯರೇ ಸ್ಟ್ರಾಂಗ್ 
ಡೈರೆಕ್ಟ್ ಫಿನಾಲೆ ಫಿಕ್ಸ್.. ಕಪ್ ನಮ್ದೇ?

ಪ್ಲೇ ಆಫ್ ಗೆ ಲಗ್ಗೆ ಇಟ್ಟ RCB – ಸೋಲಿಲ್ಲದ ಸಿಂಹಿಣಿಯರೇ ಸ್ಟ್ರಾಂಗ್ ಡೈರೆಕ್ಟ್ ಫಿನಾಲೆ ಫಿಕ್ಸ್.. ಕಪ್ ನಮ್ದೇ?

ಟಾಪ್ ಆರ್ಡರ್ ಬ್ಯಾಟರ್ಸ್ ಕೈಕೊಟ್ರೂ ಮಿಡ್ಲ್ ಆರ್ಡರ್ ಬ್ಯಾಟರ್ಸ್ ಕೈ ಹಿಡೀತಾರೆ. ಪೇಸ್ ಬೌಲರ್ಸ್ ಫೇಲ್ಯೂರ್ ಆದ್ರೂ ಸ್ಪಿನ್ನರ್ಸ್ ಸುನಾಮಿ ಎಬ್ಬಿಸ್ತಾರೆ. ಫೀಲ್ಡಿಂಗ್​ನಲ್ಲಂತೂ ಚಿರತೆಯಂಥ ಸ್ಫೀಡ್. ಚೇಸಿಂಗ್ ಇರ್ಲಿ ಡಿಫೆನ್ಸ್ ಇರ್ಲಿ ನಮ್ಮ ಸಿಂಹಿಣಿಯರು ಎಲ್ಲದಕ್ಕೂ ಸಿದ್ಧ. 2026ರ ವುಮೆನ್ಸ್ ಪ್ರೀಮಿರ್ ಲೀಗ್ ನಲ್ಲಿ ಸೊಲೇ ಕಾಣದೆ ಪ್ಲೇ ಆಫ್ ಗೆ ಕ್ವಾಲಿಫೈ ಆಗಿದ್ದಾರೆ. ಡೈರೆಕ್ಟ್ ಫಿನಾಲೆಗೆ ಇನ್ನೊಂದೆ ಹೆಜ್ಜೆ.

ಇದನ್ನೂ ಓದಿ : KL ಕಡೆಗಣಿಸಿ ಕೆಟ್ಟ BCCI – ಗಿಲ್ ಗೆ ಕ್ಯಾಪ್ಟನ್ಸಿ ಕೊಟ್ಟಿದ್ದೇ ತಪ್ಪಾ?

4ನೇ ಆವೃತ್ತಿಯ ಡಬ್ಲ್ಯೂಪಿಎಲ್​ನಲ್ಲಿ ಆರ್​ಸಿಬಿ ನೆಕ್ಸ್​ಟ್ ಲೆವೆಲ್ ಪರ್ಫಾಮೆನ್ಸ್ ನೀಡ್ತಿದೆ. ಹಾಗೇ ಲೀಗ್ ಇತಿಹಾಸದಲ್ಲೇ ಯಾರೂ ಮಾಡಿರದ ಸಾಧನೆ ಮಾಡಿದ್ದಾರೆ. ಈ ಲೀಗ್​ನ 12ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ 61 ರನ್​ಗಳ ಅಂತರದಲ್ಲಿ ಗೆದ್ದು ಪ್ಲೇಆಫ್​ಗೆ ಕ್ವಾಲಿಫೈ ಆಗಿದ್ದಾರೆ. ಐದಕ್ಕೆ ಐದೂ ಪಂದ್ಯಗಳನ್ನ ಗೆದ್ದು ಟೇಬಲ್ ಟಾಪರ್ ಆಗಿ ಟ್ರೋಫಿ ಗೆಲ್ಲುವಂಥ ಮೋಸ್ಟ್ ಫೇವರೆಟ್ ಟೀಂ ಆಗಿದೆ. ಸ್ಮೃತಿ ಮಂದಾನ ನಾಯಕತ್ವದ ಬೆಂಗಳೂರು ತಂಡ ಮೊದಲ ಮ್ಯಾಚಲ್ಲಿ ಮುಂಬೈ ವಿರುದ್ಧ ಕ್ಲೋಸ್ ಆಗಿ ಗೆಲ್ತು ಅನ್ನೋದನ್ನ ಬಿಟ್ರೆ ಉಳಿದೆಲ್ಲಾ ಪಂದ್ಯಗಳು ಒನ್ ಸೈಡೆಡ್ ಆಗೇ ವಿನ್ ಆಗಿದ್ದಾರೆ. ಌಂಡ್ ಮೇನ್ ಥಿಂಗ್ ಏನಪ್ಪಾ ಅಂದ್ರೆ ಬ್ಯಾಟಿಂಗ್, ಬೌಲಿಂಗ್ ಹಾಗೇ ಫೀಲ್ಡಿಂಗ್ ಎಲ್ಲವೂ ಎಕ್ಸ್​ಟ್ರಾರ್ಡಿನರಿ ಅನ್ನೋ ಥರನೇ ಇದೆ. ಸೋಮವಾರದ ಮ್ಯಾಚಲ್ಲೂ ಗುಜರಾತ್ ವಿರುದ್ಧ ಅಂಥದ್ದೇ ಪರ್ಫಾಮೆನ್ಸ್ ಬಂತು.

ಚೇಸಿಂಗ್ ಗೂ ಸೈ.. ಡಿಫೆನ್ಸ್ ಗೂ ಜೈ ಆರ್ ಸಿಬಿ!

ವಡೋದರಾದಲ್ಲಿ ನಡೆದ ಬೆಂಗಳೂರು ವರ್ಸಸ್ ಗುಜರಾತ್ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 178 ರನ್ ದಾಖಲಿಸಿತ್ತು. 9 ರನ್​ಗಳಿಗೆ 2 ವಿಕೆಟ್ ಕಳ್ಕೊಂಡಿದ್ದವ್ರು 69 ರನ್​ಗಳಿಗೆ 3 ವಿಕೆಟ್ ಬಿದ್ದಿತ್ತು. ಸ್ಮೃತಿ ಕೂಡ 26 ರನ್​ಗಳಿಗೆ ಆಟ ಮುಗಿಸಿದ್ರು. ಇಂಥಾ ಟೈಮಲ್ಲೇ ಗೌತಮಿ ನಾಯ್ಕ್ ಆಸರೆಯಾದ್ರು. 55 ಎಸೆತಗಳಲ್ಲಿ 73 ರನ್ ಕಲೆ ಹಾಕಿದ್ರು. ಉಳಿದಂತೆ ರಿಚಾ 27, ರಾಧಾ 17 ರನ್ಸ್ ಬಾರಿಸಿದ್ರು. ಅಂತಿಮವಾಗಿ ಬೆಂಗಳೂರು ಟೀಂ 178 ರನ್​ಗಳನ್ನ ಕಲೆ ಹಾಕಿತ್ತು. 179 ರನ್​ಗಳ ಟಾರ್ಗೆಟ್ ಬೆನ್ನತ್ತಿದ್ದ ಗುಜರಾತ್ ಪರ ಪಾರ್ಟ್ನರ್​ಶಿಪ್ ಬಿಲ್ಡ್ ಆಗೋಕೆ ನಮ್ಮ ಬೌಲರ್ಸ್ ಬಿಡ್ಲೇ ಇಲ್ಲ. ಆಶ್ಲೇ ಗಾರ್ಡ್ನರ್​ 54 ರನ್ ಬಾರಿಸಿದ್ದು ಬಿಟ್ರೆ ಉಳಿದವ್ರೆಲ್ಲಾ ಬೇಗನೇ ಔಟ್ ಆದ್ರು. ಅಂತಿಮವಾಗಿ 8 ವಿಕೆಟ್​ ಕಳ್ಕೊಂಡು 117  ರನ್ ​ಗಳಿಸಲಷ್ಟೇ ಸಾಧ್ಯವಾಯ್ತು. ಆರ್​ಸಿಬಿ ಪರ ಎಲ್ಲಾ ಬೌಲರ್ಸ್ ವಿಕೆಟ್​ಗಳನ್ನ ಪಡೆದಿದ್ದು ವಿಶೇಷವಾಗಿತ್ತು. ಆರ್​ಸಿಬಿಯ ಈ ಗೆಲುವಿನ ಜರ್ನಿಗೆ ಮುಖ್ಯ ಕಾರಣವೇ ಎಲ್ಲಾ ಪ್ಲೇಯರ್​ಗಳ ಪ್ರದರ್ಶನ. ಒಂದೊಂದು ಪಂದ್ಯದಲ್ಲೂ ಒಬ್ಬೊಬ್ರು ಶೈನ್ ಆಗ್ತಿದ್ದಾರೆ. ನಡಿನ್ ಡಿ ಕ್ಲರ್ಕ್, ಗ್ರೇಸ್ ಹ್ಯಾರಿಸ್, ಸ್ಮೃತಿ ಮಂದಾನ, ಲಾರೆನ್ ಬೆಲ್, ಶ್ರೇಯಾಂಕಾ ಪಾಟೀಲ್, ಗೌತಮಿ, ರಾಧಾ ಯಾದವ್ ಹೀಗೆ ಒಬ್ಬೊಬ್ರೂ ಒಂದೊಂದು ಪಂದ್ಯದಲ್ಲೇ ಗೇಮ್ ಚೇಂಜಿಂಗ್ ಪರ್ಫಾಮೆನ್ಸ್ ಕೊಟ್ಟಿದ್ದಾರೆ. ಹಾಗೇ ಪೋಸ್ಟ್ ಮ್ಯಾಚ್ ಪ್ರಸೆಂಟೇಷನ್ ವೇಳೆಯೂ ಎಲ್ಲಾ ಪ್ರೈಸ್​ಗಳನ್ನೂ ಆರ್​ಸಿಬಿ ಹುಡ್ಗೀರೇ ಪಡೆದಿರೋದು ಇನ್ನೊಂದು ಇಂಟ್ರೆಸ್ಟಿಂಗ್ ವಿಚಾರ.

ಡಬ್ಲ್ಯೂಪಿಎಲ್ ನಲ್ಲಿ ಸತತ 6ನೇ ಪಂದ್ಯ ಗೆದ್ದ ಆರ್ ಸಿಬಿ!

WPL ಇತಿಹಾಸದಲ್ಲಿ ಆರ್​ಸಿಬಿ ಸತತ 6 ಪಂದ್ಯಗಳನ್ನ ಗೆದ್ದಿದೆ. ಅಂದ್ರೆ ಈ ಸೀಸನ್​ನಲ್ಲಿ 5 ಮ್ಯಾಚ್ ಹಾಗೇ ಕಳೆದ ಸೀಸನ್​ನಲ್ಲಿ ಕೊನೇ ಪಂದ್ಯ ಗೆದ್ದಿತ್ತು. ಹೀಗಾಗಿ ಕಂಟಿನ್ಯೂಯಸ್ ಆಗಿ 6 ಮ್ಯಾಚ್ ಗೆದ್ದಂತಾಗಿದೆ. ಹಾಗೇ ಸೀಸನ್​ವೊಂದರಲ್ಲಿ ಸತತ ಐದು ಪಂದ್ಯಗಳನ್ನು ಗೆದ್ದ ಎರಡನೇ ತಂಡ ಎನಿಸಿಕೊಂಡಿದೆ. 2023ರಲ್ಲಿ ಮುಂಬೈ ಕೂಡ ಮೊದಲ ಐದು ಪಂದ್ಯಗಳನ್ನ ಗೆದ್ದಿತ್ತು. ಪ್ರಸ್ತುತ ಸತತ ಐದು ಪಂದ್ಯಗಳನ್ನು ಗೆದ್ದುಕೊಂಡಿರುವ ಆರ್​ಸಿಬಿ ಪಾಯಿಂಟ್ಸ್ ಪಟ್ಟಿಯಲ್ಲಿ 10 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಲೀಗ್​ ಹಂತದಲ್ಲಿ ಇನ್ನೂ 3 ಪಂದ್ಯಗಳು ಬಾಕಿ ಇದ್ದು ಈ ಪೈಕಿ 1 ಮ್ಯಾಚ್ ಗೆದ್ರೂ ಕೂಡ 12 ಅಂಕಗಳೊಂಡಿಗೆ ಡೈರೆಕ್ಟ್ ಫಿನಾಲೆಗೆ ಅರ್ಹತೆ ಪಡೆಯುತ್ತೆ. ಯಾಕಂದ್ರೆ ಉಳಿದ ಯಾವುದೇ ತಂಡಗಳಿಗೂ 12 ಅಂಕಗಳನ್ನ ಗಳಿಸೋಕೆ ಸಾಧ್ಯ ಇಲ್ಲ. ಸೋ ಅಲ್ಲಿಗೆ ಆರ್​ಸಿಬಿಗೆ 2ನೇ ಕಪ್ ಲೋಡಿಂಗ್ ಅನ್ನೋ ಥರನೇ ಇದೆ. 2024ರಲ್ಲಿ ನಡೆದ ಎರಡನೇ ಆವೃತ್ತಿಯಲ್ಲಿ ಸ್ಮೃತಿ ಮಂದಾನ ನಾಯಕತ್ವದ ಬೆಂಗಳೂರು ಟೀಂ ಚಾಂಪಿಯನ್ ಆಗಿತ್ತು. ಈ ಸಲದ ಪರ್ಫಾಮೆನ್ಸ್ ನೋಡ್ತಿದ್ರೆ ಈ ಸಲವೂ ಕಪ್ ನಮ್ದೇ ಎನ್ನುವಂತಿದೆ.

Shantha Kumari