ಕ್ಷಣ ಕ್ಷಣಕ್ಕೂ ರಿವೀಲ್‌ ಆಗುತ್ತಿದೆ ಲಕ್ಕುಂಡಿ ರಹಸ್ಯ! – ಮನೆಯೊಳಗೆ ಪತ್ತೆಯಾಯ್ತು ಶಿವನ ದೇಗುಲ!

ಕ್ಷಣ ಕ್ಷಣಕ್ಕೂ ರಿವೀಲ್‌ ಆಗುತ್ತಿದೆ ಲಕ್ಕುಂಡಿ ರಹಸ್ಯ! – ಮನೆಯೊಳಗೆ ಪತ್ತೆಯಾಯ್ತು ಶಿವನ ದೇಗುಲ!

ಲಕ್ಕುಂಡಿ ಗ್ರಾಮದಲ್ಲಿ ನಿಧಿ ಸಿಕ್ಕ ಪ್ರಕರಣ ರೋಚಕರ ತಿರುವು ಪಡೆದುಕೊಂಡಿದೆ.  ಈಗಾಗಲೇ ನಿಧಿ ಪತ್ತೆಯಾದ ಒಂದು ಕುಟುಂಬವನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ. ಇದೀಗ ಇಡೀ ನಿಧಿ ಪತ್ತೆಯಾದ ಪ್ರದೇಶ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಶುಕ್ರವಾರದಿಂದ ಉತ್ಖನನ ಕಾರ್ಯ ಪ್ರಾರಂಭವಾಗಿದೆ. ಇದೀಗ ಮನೆಯೊಂದರಲ್ಲಿ ಈಶ್ವರನ ದೇವಾಲಯ ಪತ್ತೆಯಾಗಿದೆ.

ಇದನ್ನೂ ಓದಿ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಡ್ರೆಸ್‌ಕೋಡ್! – ಇನ್ಮುಂದೆ ಶಾರ್ಟ್ಸ್, ಟೈಟ್ ಪ್ಯಾಂಟ್ ಧರಿಸುವಂತಿಲ್ಲ!

ಲಕ್ಕುಂಡಿಯಲ್ಲಿ ನಿಧಿ ಪತ್ತೆಯಾದ ಬೆನ್ನಲ್ಲೇ ಅಧಿಕಾರಿಗಳು ಗ್ರಾಮದಲ್ಲಿ ಉತ್ಖನನ ಆರಂಭಿಸಿದ್ದಾರೆ. ಈಗಾಗಲೇ ಚಿನ್ನ, ಶಿವನ ವಿಗ್ರಹ ಸೇರಿದಂತೆ ಹಲವಾರು ಪ್ರಾಚೀನ ವಸ್ತುಗಳು ಪತ್ತೆಯಾಗಿದೆ. ಇದೀಗ ನಿಧಿ ಸಿಕ್ಕ ಗ್ರಾಮದಲ್ಲಿ ಕುಟುಂಬವೊಂದು ನಾಲ್ಕು ಶತಮಾನಗಳಷ್ಟು ಹಳೆಯದಾದ ಈಶ್ವರನ ದೇವಾಲಯದೊಳಗೆ ಮನೆ ನಿರ್ಮಾಣ ಮಾಡಿಕೊಂಡು ವಾಸಿಸುತ್ತಿದೆ ಎಂಬ ವಿಚಾರ ಬಯಲಾಗಿದೆ.

ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಶಿವಯ್ಯ ಹಾಗೂ ಶೇಖರಯ್ಯ ಚೌಕಿಮಠ ಎಂಬವರ ಕುಟುಂಬ ದೇವಸ್ಥಾನದೊಳಗೆ ಮನೆ ನಿರ್ಮಾಣ ಮಾಡಿಕೊಂಡು ವಾಸಿಸುತ್ತಿದೆ. ಈ ಮನೆಯಲ್ಲಿ ಸುಮಾರು 5-6 ಮಂದಿ ವಾಸ ಮಾಡುತ್ತಿದ್ದಾರೆ. ದೇವಸ್ಥಾನದ ಹೊರಭಾಗದಲ್ಲಿ ಮನೆಯಿದೆ. ಅದರೊಳಗೆ ಈ ಐತಿಹಾಸಿಕ ದೇವಾಲಯವಿದೆ.  ಈ ದೇವಾಲಯದೊಳಗೆ ನಾಲ್ಕನೇ ಶತಮಾತನದ ಶಿವನ ಮೂರ್ತಿಯಿದೆ. ಈ ಮೂರ್ತಿಯನ್ನೇ ಕುಟುಂಬದವರು ಆರಾಧಿಸುತ್ತಾ ಬಂದಿದ್ದಾರೆ. ಸುಮಾರು 5 ತಲೆಮಾರಿನಿಂದ ಈ ಕುಟುಂಬ ಇಲ್ಲಿ ವಾಸಿಸುತ್ತಿದೆ. ಬೇರೆ ಕಡೆ ನಿವೇಶನ ನೀಡಿದರೆ ಮಾತ್ರ ಸ್ಥಳಾಂತರಗೊಳ್ಳುತ್ತೇವೆ. ಇಲ್ಲವಾದರೆ ಸ್ಥಳಾಂತರವಾಗುವುದಿಲ್ಲ ಎಂದು ಕುಟುಂಬ ತಿಳಿಸಿದೆ. ಇದೀಗ ಈ ಕುಟುಂಬಕ್ಕೆ ಸರ್ಕಾರ ಬೇರೆ ನಿವೇಶನ ನೀಡುತ್ತಾ ಅನ್ನೋದನ್ನ ಕಾದು ನೋಡ್ಬೇಕು.

Shwetha M