ಕಚೇರಿಯಲ್ಲೇ ಸರಸವಾಡಿದ ಡಿಜಿಪಿ ರಾಮಚಂದ್ರ ರಾವ್ ಸಸ್ಪೆಂಡ್

ತಾನು ಡಿಜಿಪಿ, ತನ್ನ ಮೈಮೇಲೆ ಖಾಕಿ ಇದೆ ಅನ್ನೋದ್ದನ್ನೇ ಮರೆತು ಕಚೇರಿಯಲ್ಲೇ ರಾಸಲೀಲೆ ನೆಡೆಸಿದ ಡಿಜಿಪಿ ರಾಮಚಂದ್ರಗೆ ತಕ್ಕ ಶಿಕ್ಷೆಯಾಗಿದೆ. ಮಹಿಳೆಯೊಂದಿಗಿನ ರಾಸಲೀಲೆ ವಿಡಿಯೋ ವೈರಲ್ ಆರೋಪದ ಬೆನ್ನಲ್ಲೇ ಡಿಜಿಪಿ ಡಾ. ರಾಮಚಂದ್ರ ರಾವ್ ಅವರನ್ನುಅಮಾನತು ಮಾಡಲಾಗಿದೆ. ಡಿಜಿಪಿ ರಾಮಚಂದ್ರ ರಾವ್ ಅವರನ್ನ ಸಸ್ಪೆಂಡ್ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಪಡಿತರ ಫಲಾನುಭವಿಗಳಿಗೆ ಸರ್ಕಾರದಿಂದ ಗುಡ್‌ನ್ಯೂಸ್! – ಈ ನಂಬರ್ ಹೇಳಿದ್ರೆ ಇನ್ಮುಂದೆ ಪಡಿತರ ಸಿಗುತ್ತೆ!
ತನ್ನ ಕಚೇರಿಯಲ್ಲೇ ಮಹಿಳೆಯರ ಜೊತೆ ಅಶ್ಲೀಲ ವರ್ತನೆಯಲ್ಲಿ ತೊಡಗಿದ್ದ ಆಡಿಯೋ ಹಾಗೂ ವಿಡಿಯೋ ಜನವರಿ 19 ರಂದು ವೈರಲ್ ಆಗಿತ್ತು. ಉನ್ನತ ಹುದ್ದೆಯಲ್ಲಿದ್ದ ಅಧಿಕಾರಿಯ ಕೇಸ್ ಸರ್ಕಾರಕ್ಕೆ ಮುಜುಗರವನ್ನು ಉಂಟು ಮಾಡಿತ್ತು, ಹೀಗಾಗಿ ಸಿದ್ದು ಸರ್ಕಾರ ಡಿಜಿಪಿ ರಾಮಚಂದ್ರ ರಾವ್‌ರನ್ನ ಸಸ್ಪೆಂಡ್ ಮಾಡಿದೆ.
ಕೆ.ರಾಮಚಂದ್ರ ರಾವ್ ಸರ್ಕಾರಿ ನೌಕರರಿಗೆ ಶೋಭೆಯಲ್ಲದ ರೀತಿಯಲ್ಲಿ ವರ್ತಿಸಿದ ಆರೋಪವಿದ್ದು, ಅಶ್ಲೀಲವಾಗಿ ವರ್ತಿಸಿರುವುದು ಕಂಡುಬಂದಿದೆ. ಇದು ಸರ್ಕಾರಕ್ಕೆ ಮುಜುಗರವನ್ನು ಉಂಟುಮಾಡಿದೆ. ರಾಜ್ಯ ಸರ್ಕಾರ ಇದನ್ನ ಪರಿಶೀಲನೆ ನಡೆಸಲಿದೆ ಎಂದು ಆದೇಶದಲ್ಲಿ ಬರೆಯಲಾಗಿದೆ. ಅಧಿಕಾರಿಯ ವರ್ತನೆ ಅಖಿಲ ಭಾರತ ಸೇವೆಗಳ (ನಡತೆ) ನಿಯಮಗಳು, 1968 ರ ನಿಯಮ 3 ರ ಉಲ್ಲಂಘನೆಯಾಗಿದೆ. ಆದ್ದರಿಂದ ವಿಚಾರಣೆಯನ್ನು ಬಾಕಿ ಇರಿಸಿ. ಡಾ. ಕೆ. ರಾಮಚಂದ್ರ ರಾವ್ ಅವರನ್ನ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲು ಆದೇಶ ಹೊರಡಿಸಲಾಗಿದೆ. ಅಖಿಲ ಭಾರತ ಸೇವೆಗಳ (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳು. 1969 ರ ನಿಯಮ 3(1)(a) ಅಡಿಯಲ್ಲಿ ಅಮಾನತುಗೊಳಿಸಿ ಆದೇಶ ನೀಡಲಾಗಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ರಾಮಚಂದ್ರ ರಾವ್ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿಯಾಗಲು ಪ್ರಯತ್ನಿಸಿದರು. ಆದರೆ, ಗೃಹ ಸಚಿವರು ಅನಾರೋಗ್ಯದ ಕಾರಣ ಹೇಳಿ ಭೇಟಿಗೆ ಅವಕಾಶ ನೀಡಿಲ್ಲ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ವಿಡಿಯೋ ಬಗ್ಗೆ ನನಗೆ ಗೊತ್ತಿಲ್ಲ. AI ವಿಡಿಯೋ , ಈ ಬಗ್ಗೆ ತನಿಖೆ ಈಗಬೇಕು ಎಂದಿದ್ರು.

ನೋಡಿರಿ

