ರಾಜ್ಯದ ಮೊದಲ ಇವಿ ಪವರ್ ಪ್ಲಸ್ ಬಸ್ ಗೆ ಅಧಿಕೃತ ಚಾಲನೆ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮೊದಲ ಅಂತರ್ ಜಿಲ್ಲಾ ಎಲೆಕ್ಟ್ರಿಕ್ ಬಸ್ ಗೆ ಸೋಮವಾರ ಅಧಿಕೃತ ಚಾಲನೆ ಸಿಕ್ಕಿದೆ. ಬೆಂಗಳೂರು – ಮೈಸೂರು ನಡುವೆ ಮೊದಲ ಜಿಲ್ಲಾ ಎಲೆಕ್ಟ್ರಿಕ್ ಬಸ್ ಸೇವೆ ಇದಾಗಿದೆ.
ಮೆಜೆಸ್ಟಿಕ್ ಕೆಎಸ್ ಆರ್ ಟಿಸಿ ನಿಲ್ದಾಣದ ಟಿಸಿ ಚಂದ್ರಶೇಕರ್ ಹಾಗೂ ಕೆಎಸ್ ಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಲಕ್ಷ್ಮಣ್ ಅವರು ಇವಿ ಪವರ್ ಪ್ಲಸ್ ಬಸ್ ಗೆ ಚಾಲನೆ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿಗೆ ಪ್ರಿಯಾಂಕಾ ಗಾಂಧಿ- ಮೊಳಗಿತಾ ಕಾಂಗ್ರೆಸ್ ಚುನಾವಣಾ ಕಹಳೆ?
ಇವಿ ಪವರ್ ಪ್ಲಸ್ ಬಸ್ ಗಳು ಪ್ರೆಸ್ ವೇನಲ್ಲಿ ಬಸ್ ಸಂಚರಿಸುತ್ತಿದೆ. ಈ ಬಸ್ ನಲ್ಲಿ ವಿದ್ಯಾರ್ಥಿ ಪಾಸ್ಗೆ ಅವಕಾಶವಿಲ್ಲ. ಮುಂದಿನ ಮೂರು ತಿಂಗಳಲ್ಲಿ 50 ಕೆಎಸ್ಆರ್ಟಿಸಿ ಎಲೆಕ್ಟ್ರಿಕ್ ಬಸ್ ಸಂಚಾರ ನಡೆಸಲಿವೆ. ಬೆಂಗಳೂರಿನ ಹತ್ತಿರದ ಜಿಲ್ಲೆಗಳಿಗೆ ಸಂಚರಿಸಲಿವೆ. 300 ಕಿ.ಮೀ ವ್ಯಾಪ್ತಿಯಲ್ಲಿ ಇವಿ ಪವರ್ ಪ್ಲಸ್ ಬಸ್ ಓಡಿಸಲು ಕೆಎಸ್ಆರ್ಟಿಸಿ ನಿರ್ಧಾರ ಮಾಡಿದೆ.
ಈ ಬಸ್ ನಲ್ಲಿ ಆರಾಮದಾಯಕವಾದ ಆಸನ, ದೂರದರ್ಶನ, ಪ್ರೀಮಿಯಂ ಸೀಟ್‌ಗಳು, ಪ್ರತಿಯೊಂದು ಸೀಟ್ ಗೂ ಚಾರ್ಜಿಂಗ್ ಸಾಕೆಟ್, ಎಸಿ ವೆಂಟ್‌ಗಳು, ಓದುವ ದೀಪಗಳು ಇನ್ನೂ ಅನೇಕ ಸೌಲಭ್ಯಗಳನ್ನು ನೀಡಲಾಗಿದೆ.
ಎಲೆಕ್ಟ್ರಿಕ್ ಬಸ್ಗಳು 2022 ಡಿಸೆಂಬರ್ 31 ರಂದು ರಾಜ್ಯಕ್ಕೆ ಬಂದಿದ್ದು, ಈಗಾಗಲೆ ಟ್ರಯಲ್ ರೈಡ್ನ್ನು ಯಶಸ್ವಿಯಾಗಿ ಪೂರ್ಣಗೊಳಿಸಿವೆ. ಮೊದಲ ಇ-ಬಸ್ ಇಂದು ಬೆಂಗಳೂರಿನಿಂದ ಹೊರಟು ಮೈಸೂರು ತಲುಪುತ್ತದೆ. ಬೆಂಗಳೂರಿಂದ ಮೈಸೂರಿಗೆ ಹೊರಡುವ ಎಲೆಕ್ಟ್ರಿಕ್ ಬಸ್ ತಡೆರಹಿತವಾಗಿದ್ದು, ಬಸ್ಗೆ ಪ್ರಿಮಿಯಂ ಸರ್ವಿಸ್ ಪಾಸ್ ಹೊಂದಿರುತ್ತದೆ. ಎಲೆಕ್ಟ್ರಿಕ್ ಬಸ್ಗಳನ್ನು ಒಂದು ಸಾರಿ ಚಾರ್ಜ್ ಮಾಡಿದರೆ 300ಕೀಮಿ ಸಂಚರಿಸುತ್ತದೆ.
ಇನ್ನು ಫೆಬ್ರವರಿಯಲ್ಲಿ ರಸ್ತೆಗಿಳಿಯುವ 50 ಬಸ್ಗಳು ಬೆಂಗಳೂರಿನಿಂದ ಮಡಿಕೇರಿ, ವಿರಾಜಪೇಟೆ, ಚಿಕ್ಕಮಗಳೂರು, ದಾವಣಗೇರೆ ಮತ್ತು ಶಿವಮೊಗ್ಗ ನಗರಕ್ಕೆ ಸಂಪರ್ಕ ಕಲ್ಪಿಸಲಿವೆ. ಈಗಾಗಲೆ ಬಸ್ಗಳಿಗಾಗಿ ಮೈಸೂರು ಮತ್ತು ಬೆಂಗಳೂರಲ್ಲಿ ಚಾರ್ಜಿಂಗ್ ಪಾಯಿಂಟ್ಗಳನ್ನು ತೆರೆಯಲಾಗಿದೆ. ಎಲೆಕ್ಟ್ರಿಕ್ ಬಸ್ಗಳ ಕಾರ್ಯನಿರ್ವಹಣೆಯನ್ನು ಖಾಸಗಿಯವರಿಗೆ ನೀಡಲಾಗಿದ್ದು, ಗ್ರಾಸ್ ಕಾಸ್ಟ್ ಕಾಂಟ್ರಾಕ್ಟ್ ನಿರ್ವಹಿಸಲಿದೆ. ಈ ನಿರ್ವಹಣೆಗೆ ಕೆಎಸ್ಆರ್ಟಿಸಿ ಕೂಡ ಹಣ ನೀಡಲು ಮುಂದಾಗಿದ್ದು, ಕಾರ್ಯಾಚರಣೆಯ ವೆಚ್ಚವಾಗಿ ಕಿಮೀಗೆ 55 ರೂಪಾಯಿಗಳನ್ನು ಪಾವತಿಸಲಿದೆ.