ಬಿಗ್‌ಬಾಸ್‌ ಕಪ್‌ ಗೆದ್ದ ಗಿಲ್ಲಿಗೆ ಹುಟ್ಟೂರಲ್ಲಿ ಭವ್ಯ ಸ್ವಾಗತ! – ಮಳವಳ್ಳಿಯಲ್ಲಿ ಭರ್ಜರಿ ರೋಡ್​ ಶೋ!

ಬಿಗ್‌ಬಾಸ್‌ ಕಪ್‌ ಗೆದ್ದ ಗಿಲ್ಲಿಗೆ ಹುಟ್ಟೂರಲ್ಲಿ ಭವ್ಯ ಸ್ವಾಗತ! – ಮಳವಳ್ಳಿಯಲ್ಲಿ ಭರ್ಜರಿ ರೋಡ್​ ಶೋ!

ಬಿಗ್‌ಬಾಸ್‌ ಕನ್ನಡ ಸೀಸನ್‌ 12 ರಲ್ಲಿ ಗಿಲ್ಲಿ ನಟ ಗೆದ್ದು ಬೀಗಿದ್ದಾರೆ. ಇದೀಗ ಗಿಲ್ಲಿ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿದೆ. ಇದೀಗ ಗಿಲ್ಲಿಗೆ ಹುಟ್ಟೂರಿನಲ್ಲೂ ಭವ್ಯ ಸ್ವಾಗತ ಸಿಕ್ಕಿದೆ.

ಇದನ್ನೂ ಓದಿ: S ಅಂದರೆ ಶೌಟಿಂಗ್‌! – ಎಸ್‌ ಕ್ಯಾಟಗರಿ ವಿವಾದದ ಬಗ್ಗೆ ಕಡೆಗೂ ಮೌನ ಮುರಿದ ಅಶ್ವಿನಿ ಗೌಡ!

ಬಿಗ್‌ಬಾಸ್‌ ಕಪ್‌ ಗೆಲ್ಲುತ್ತಿದ್ದಂತೆ ಗಿಲ್ಲಿನಟ ಬೆಂಗಳೂರಿನಿಂದ ನೇರವಾಗಿ ಮಂಡ್ಯಗೆ ತೆರಳಿದ್ದಾರೆ. ಗಿಲ್ಲಿ ಹುಟ್ಟೂರಿಗೆ ತಲುಪುತ್ತಿದ್ದಂತೆ ಅದ್ದೂರಿ ಸ್ವಾಗತ ಸಿಕ್ಕಿದೆ. ಗಿಲ್ಲಿ ಫ್ಯಾನ್ಸ್‌ ಬರೋಬ್ಬರಿ 7 ಕಿಲೋ ಮೀಟರ್ ದೂರದವರೆಗೂ ರೋಡ್ ಶೋ ನಡೆಸಿದ್ದಾರೆ. ಮಂಡ್ಯದ ಮಳವಳ್ಳಿಯ ದಂಡಿನ ಮಾರಮ್ಮ ದೇವಸ್ಥಾನದಿಂದ ದಡದಪುರದವರೆಗೆ ಗಿಲ್ಲಿ ವಿಜಯೋತ್ಸವದ ಯಾತ್ರೆ ನಡೆದಿದೆ.

ಗಿಲ್ಲಿ ನಟ ವೈಟ್ ಆ್ಯಂಡ್ ವೈಟ್ ಡ್ರೆಸ್ ಧರಿಸಿ ಊರಿಗೆ ತೆರಳಿದ್ದಾರೆ. ಕಾರಿನ ಸನ್ ರೂಪ್‌ ನಲ್ಲಿ ನಿಂತು ಗೆದ್ದ ಕಪ್ ಅನ್ನ ಕೈಯಲ್ಲಿ ಹಿಡಿದು ರ್ಯಾಲಿಯಲ್ಲಿ ಸಾಗಿದ್ದಾರೆ. ಈ ವೇಳೆ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ.

ಇನ್ನು ರೋಡ್‌ ಶೋ ಹಿನ್ನೆಲೆಯಲ್ಲಿ ಮಳವಳ್ಳಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿದೆ. ರೋಡ್ ಶೋಗೆ ಕೆಎಸ್‌ಆರ್‌ಪಿಯ 200 ಸಿಬ್ಬಂದಿಯ ನಿಯೋಜನೆ ಆಗಿತ್ತು. ಆ ರೀತಿಯ ಸೂಕ್ತ ವ್ಯವಸ್ಥೆಯೊಂದಿಗೇನೆ ಗಿಲ್ಲಿ ನಟನ ರೋಡ್ ಶೋ ನಡೆದಿದೆ. ಗಿಲ್ಲಿ ನೋಡಲು ಇಲ್ಲಿ ಸಾವಿರಾರು ಜನ ಅಭಿಮಾನಿಗಳು ಆಗಮಿಸಿದ್ದರು. ಮಳ್ಳವಳ್ಳಿಯಿಂದ ಗಿಲ್ಲಿ ಹುಟ್ಟೂರು ದಡದಪುರದವರೆಗೂ ರೋಡ್ ಶೋ ನಡೆಯಿತು.

Shwetha M