ಯಪ್ಪಾ ಸಿಕ್ಕಾಪಟ್ಟೆ ಚಳಿ, ವೈರಲ್ ಫೀವರ್ ಹಾವಳಿ – ಯಾಮಾರಿದ್ರೆ ಏನಾಗುತ್ತೆ ಗೊತ್ತಾ?

ಯಪ್ಪಾ ಸಿಕ್ಕಾಪಟ್ಟೆ ಚಳಿ, ವೈರಲ್ ಫೀವರ್ ಹಾವಳಿ – ಯಾಮಾರಿದ್ರೆ ಏನಾಗುತ್ತೆ ಗೊತ್ತಾ?

ಮಂಗಳೂರು: ಅಬ್ಬಾ ಎಂಥಾ ಚಳಿ ಅಂತೀರಾ. ಮನೆ ಒಳಗೆ ಇರೋಕೂ ಆಗುತ್ತಿಲ್ಲ. ಸ್ವೆಟರ್, ಟೋಪಿ ಇಲ್ಲದೆ ಹೊರಗೆ ಕಾಲಿಡೋಕೂ ಆಗುತ್ತಿಲ್ಲ.  ಮೈಕೊರೆಯೋ ಈ ಥಂಡಿ ನಡುವೆ ಜನ್ರಿಗೆ ಹೊಸ ಕಾಟ ಶುರುವಾಗಿದೆ. ವೈರಲ್ ಫೀವರ್ ಜನ್ರನ್ನ ಹಿಂಡಿ ಹಿಪ್ಪೆ ಮಾಡುತ್ತಿದೆ.

ಇದನ್ನೂ ಓದಿ:ಬೆಂಗಳೂರಿಗೆ ಪ್ರಿಯಾಂಕಾ ಗಾಂಧಿ- ಮೊಳಗಿತಾ ಕಾಂಗ್ರೆಸ್ ಚುನಾವಣಾ ಕಹಳೆ?

ಕಳೆದ ಕೆಲ ದಿನಗಳಿಂದ ಚಳಿಯ ಪ್ರಮಾಣ ವಿಪರೀತ ಎನ್ನುವಂತಾಗಿದೆ. ಅದರಲ್ಲೂ ರಾಜ್ಯದ ಕರಾವಳಿ ಭಾಗದಲ್ಲಿ ಚಳಿಯ ತೀವ್ರತೆ ಹೆಚ್ಚಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಲೆನಾಡು ತಪ್ಪಲು ಭಾಗದಲ್ಲಿ ಜನವರಿ 19ರ ಹೊತ್ತಿಗೆ ಕನಿಷ್ಠ ತಾಪಮಾನ 16 ಡಿಗ್ರಿಗೆ ಬರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಹೀಗಾಗಿ ಜನರ ಆರೋಗ್ಯದ ದೃಷ್ಟಿಯಿಂದ ಜಿಲ್ಲಾಡಳಿತ ಕೂಡ ಅಲರ್ಟ್ ಆಗಿದೆ. ಅದರಲ್ಲೂ ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸುವಂತೆ ಜಾಗೃತಿ ಮೂಡಿಸಲಾಗ್ತಿದೆ. ಇನ್ನೂ ಒಂದು ವಾರಗಳ ಕಾಲ ಭಾರೀ ಶೀತಗಾಳಿ ಇರಲಿದ್ದು, ದಟ್ಟ ಮಂಜು ಕವಿಯುವ ಸಾಧ್ಯತೆ ಇದೆ. ಪ್ರತೀ ವರ್ಷ ಮಳೆಗಾಲ, ಚಳಿಗಾಲ ಬಂದಾಗ ಜನರ ಆರೋಗ್ಯ ಹದಗೆಡುವುದು ಸಾಮಾನ್ಯ. ಆದ್ರೆ ಈ ವರ್ಷ ವಾತಾವರಣದಲ್ಲಿ ಸಾಕಷ್ಟು ಬದಲಾವಣೆಗಳು ಆಗಿರೋದ್ರಿಂದ ಹೆಚ್ಚೆಚ್ಚು ಅನಾರೋಗ್ಯಕ್ಕೀಡಾಗುತ್ತಿದ್ದಾರೆ.

ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಲ್ಲಿ ವೈರಲ್ ಫೀವರ್ ಪ್ರಮಾಣ ಹೆಚ್ಚಾಗುತ್ತಿದೆ. ಅದ್ರಲ್ಲೂ ಗ್ರಾಮಾಂತರ ಭಾಗದಲ್ಲೇ ಹೆಚ್ಚಾಗಿ ಕಾಣಿಸಿಕೊಳ್ತಿರೋದು ಆತಂಕ ಹೆಚ್ಚಿಸಿದೆ. ಬೆಳ್ತಂಗಡಿ, ಸುಳ್ಯ, ಪುತ್ತೂರು ಸೇರಿದಂತೆ ಹಲವೆಡೆ ದಟ್ಟ ಮಂಜು ಹಾಗೂ ಚಳಿಗಾಳಿ ಪ್ರಮಾಣ ವಿಪರೀತವಾಗಿದೆ. ಹೀಗಾಗಿ ಮಕ್ಕಳು ಹಾಗೂ ವೃದ್ಧರು ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ತಜ್ಞರು ಕೂಡ ಸಲಹೆ ನೀಡಿದ್ದಾರೆ.

suddiyaana