RO-KO ಆಟ ನೋಡಲು 5 ತಿಂಗಳು ಕಾಯಬೇಕು – ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಕಣಕ್ಕಿಳಿಯುವುದು ಯಾವಾಗ?

ಟೀಮ್ ಇಂಡಿಯಾ ವಾರಿಯರ್ ವಿರಾಟ್ ಕೊಹ್ಲಿ ಮತ್ತು ಹಿಟ್ಮ್ಯಾನ್ ರೋಹಿತ್ ಶರ್ಮಾ ಇನ್ನು ಸದ್ಯಕ್ಕೆ ಬ್ಲೂ ಜೆರ್ಸಿ ಧರಿಸಲ್ಲ. ಜೊತೆಗೆ ರೋ ಕೋ ಫ್ಯಾನ್ಸ್ ಕೂಡಾ ಇವರ ಆಟ ನೋಡಲು 5 ತಿಂಗಳು ಕಾಯಲೇಬೇಕು.
ಇದನ್ನೂ ಓದಿ:ಕಿಂಗ್ ಕೊಹ್ಲಿ ಏಕಾಂಗಿ ಹೋರಾಟ ವ್ಯರ್ಥ! – ಭಾರತದ ನೆಲದಲ್ಲಿ ಏಕದಿನ ಸರಣಿ ಗೆದ್ದ ನ್ಯೂಜಿಲೆಂಡ್!
ನ್ಯೂಝಿಲೆಂಡ್ ವಿರುದ್ಧದ ಮೂರು ಏಕದಿನ ಸರಣಿಯ ಸೋಲು ರೋಕೋ ಅಭಿಮಾನಿಗಳಿಗೆ ಸಹಜವಾಗಿಯೇ ಬೇಸರ ತರಿಸಿದೆ. ಈ ಸರಣಿ ಮುಕ್ತಾಯದ ಬೆನ್ನಲ್ಲೇ ರೋಹಿತ್ ಶರ್ಮಾ – ವಿರಾಟ್ ಕೊಹ್ಲಿ ಮುಂದಿನ 5 ತಿಂಗಳುಗಳ ಟೀಮ್ ಇಂಡಿಯಾ ಪರ ಕಣಕ್ಕಿಳಿಯಲ್ಲ ಎಂಬ ವಿಚಾರವೇ ಅಭಿಮಾನಿಗಳಲ್ಲಿ ನಿರಾಶೆ ತಂದಿದೆ. ಏಕದಿನ ಸರಣಿ ಮುಗಿಸಿರುವ ಟೀಮ್ ಇಂಡಿಯಾ ನ್ಯೂಝಿಲೆಂಡ್ ವಿರುದ್ಧ ಟಿ20 ಸರಣಿ ಆಡಲಿದೆ. ಈ ಸರಣಿಯಲ್ಲಿ ಹಿಟ್ಮ್ಯಾನ್ ಮತ್ತು ಕಿಂಗ್ ಕೊಹ್ಲಿ ಕಾಣಿಸಿಕೊಳ್ಳುವುದಿಲ್ಲ. ಇದಾದ ಬಳಿಕ ಭಾರತ ತಂಡವು ಟಿ20 ವಿಶ್ವಕಪ್ನಲ್ಲಿ ಕಣಕ್ಕಿಳಿಯಲಿದೆ. ಅತ್ತ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ನಿವೃತ್ತರಾಗಿದ್ದಾರೆ. ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯನ್ನು ಟೀಮ್ ಇಂಡಿಯಾ ಜೆರ್ಸಿಯಲ್ಲಿ ನೋಡಲು ಮುಂದಿನ ಜೂನ್ವರೆಗೆ ಅಭಿಮಾನಿಗಳು ಕಾಯಲೇಬೇಕು.
ಜೂನ್ ತಿಂಗಳಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ್ ನಡುವಣ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಈ ಸರಣಿಯ ಮೂಲಕ ಕಿಂಗ್ ಕೊಹ್ಲಿ ಮತ್ತು ಹಿಟ್ಮ್ಯಾನ್ ಮತ್ತೆ ಟೀಮ್ ಇಂಡಿಯಾ ಪರ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಐಪಿಎಲ್ನಲ್ಲಿ ಈ ದಿಗ್ಗಜ ಕ್ರಿಕೆಟರ್ಸ್ ಕಣಕ್ಕಿಳಿದರೂ ಕೂಡಾ, ಟೀಮ್ ಇಂಡಿಯಾ ಜೆರ್ಸಿಯಲ್ಲಿ ಈ ಕ್ರಿಕೆಟ್ ಹೀರೋಗಳನ್ನು ನೋಡೋದೇ ಅಭಿಮಾನಿಗಳಿಗೆ ಸಂಭ್ರಮ.

ನೋಡಿರಿ

