ಗಿಲ್ಲಿ ಗೆದ್ದ.. ಗಿಲ್ ಸೋತ – ಗೆಲ್ಲೋಕೆ ಕೊಹ್ಲಿ ಆಡಿದ್ರೆ ಸಾಕಾ?
ಸರಣಿ ಸೋಲು.. ಹೊಣೆ ಯಾರು?  

ಗಿಲ್ಲಿ ಗೆದ್ದ.. ಗಿಲ್ ಸೋತ – ಗೆಲ್ಲೋಕೆ ಕೊಹ್ಲಿ ಆಡಿದ್ರೆ ಸಾಕಾ?ಸರಣಿ ಸೋಲು.. ಹೊಣೆ ಯಾರು?  

ಒಂದ್ಕಡೆ ಬಿಗ್ ಬಾಸ್ ಸೀಸನ್ 12 ಗ್ರ್ಯಾಂಡ್ ಫಿನಾಲೆ.. ಇನ್ನೊಂದ್ಕಡೆ ಭಾರತ-ನ್ಯೂಜಿಲೆಂಡ್ ಏಕದಿನ ಸರಣಿಯ ಕ್ಲೈಮ್ಯಾಕ್ಸ್ ಮ್ಯಾಚ್. ಬಿಬಿಕೆಯಲ್ಲಿ ಟಾಪ್-6 ಕಂಟೆಸ್ಟೆಂಟ್ಸ್ ಒಬ್ಬೊಬ್ರೇ ಎವಿಕ್ಟ್ ಆಗ್ತಿದ್ರೆ ಇತ್ತ ಟೀಂ ಇಂಡಿಯಾ ಬ್ಯಾಟಿಂಗ್​ನಲ್ಲಿ ಒಂದೊಂದೇ ವಿಕೆಟ್ ಬೀಳ್ತಿತ್ತು. ಸಿಂಗಲ್ ವಾರಿಯರ್ ಆಗಿ ವಿರಾಟ್ ಕೊಹ್ಲಿ ಕ್ರೀಸ್ ಕಚ್ಚಿ ನಿಂತಿದ್ರು. ಅವ್ರು ಇರೋವರ್ಗೂ ನಮ್ದೇ ಮ್ಯಾಚ್ ಅಂತಾನೇ ಕೋಟ್ಯಂತರ ಭಾರತೀಯರಿಗೆ ಹೋಪ್ಸ್ ಇತ್ತು. ಬಿಗ್​ಬಾಸ್​ನಲ್ಲಿ ಕನ್ನಡಿಗರ ಆಸೆಯಂತೆ ಗಿಲ್ಲಿ ಗೆದ್ರು. ಆದ್ರೆ ಕ್ಯಾಪ್ಟನ್ ಶುಭ್​ಮನ್ ಗಿಲ್ ಗೆಲ್ಲಲಿಲ್ಲ.

ಇದನ್ನೂ ಓದಿ : ಕಿಂಗ್‌ ಕೊಹ್ಲಿ ಏಕಾಂಗಿ ಹೋರಾಟ ವ್ಯರ್ಥ! – ಭಾರತದ ನೆಲದಲ್ಲಿ ಏಕದಿನ ಸರಣಿ ಗೆದ್ದ ನ್ಯೂಜಿಲೆಂಡ್!

ಭಾರತ-ನ್ಯೂಜಿಲೆಂಡ್ ಏಕದಿನ ಸರಣಿ 3ನೇ ಪಂದ್ಯದಲ್ಲಿ ಗೆದ್ದು ಬ್ಲ್ಯಾಕ್ ಕ್ಯಾಪ್ಸ್ ಭಾರತದಲ್ಲಿ ಏಕದಿನ ಸರಣಿ ಗೆದ್ದು ಬೀಗಿದ್ದಾರೆ. 2024ರ ಕೊನೆಯಲ್ಲಿ ಟೆಸ್ಟ್ ಫಾರ್ಮೆಟ್​ನಲ್ಲಿ ಕ್ಲೀನ್ ಸ್ವೀಪ್ ಮಾಡಿದ್ದವ್ರು ಈಗ 2026ರ ಮೊದಲ ಸರಣಿಯಲ್ಲೇ ಭಾರತಕ್ಕೆ ಸೋಲಿನ ರುಚಿ ತೋರಿಸಿದ್ದಾರೆ. ರೆಡ್ ಌಂಡ್ ವೈಟ್ ಬಾಲ್ ಸಿರೀಸ್​ನಲ್ಲಿ ಟೀಂ ಇಂಡಿಯಾಗೆ ಸಿಂಹಸ್ವಪ್ನವಾಗಿ ಕಾಡ್ತಿದ್ದಾರೆ. ಇಂದೋರ್‌ನ ಹೋಲ್ಕರ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಗೇಮ್ ಡಿಸೈಡರ್ ಮ್ಯಾಚಲ್ಲಿ ಕಿವೀಸ್ ಪಡೆ ಭಾರತವನ್ನ ಸೋಲಿಗೆ ಚೊಚ್ಚಲ ಬಾರಿಗೆ ಭಾರತದಲ್ಲಿ ಏಕದಿನ ಸರಣಿಯನ್ನ ಗೆದ್ದು ಬೀಗಿದೆ.

ನ್ಯೂಜಿಲೆಂಡ್ ಪರ ಮಿಚೆಲ್ ಮತ್ತು ಫಿಲಿಪ್ಸ್ ಶತಕದ ಅಬ್ಬರ!

ಪಂದ್ಯಕ್ಕೂ ಮುನ್ನ ಟಾಸ್ ಗೆದ್ದ ಭಾರತ ಬೌಲಿಂಗ್​ ಚೂಸ್ ಮಾಡಿಕೊಳ್ತು. ಅದ್ರಂತೆ ಬ್ಯಾಟಿಂಗ್​ಗೆ ಬಂದ ಕಿವೀಸ್​​ಗೆ ಆರಂಭದಲ್ಲೇ ಭಾರತದ ಬೌಲರ್ಸ್ ಶಾಕ್ ಕೊಟ್ಟಿದ್ರು. ಫಸ್ಟ್ ಓವರ್​ನಲ್ಲೇ ಹೆನ್ರಿ ನಿಕೋಲ್ಡ್ ಗೋಲ್ಡನ್ ಡಕ್. 2ನೇ ಓವರ್​ನಲ್ಲಿ ಡೆವೊನ್ ಕಾನ್ವೆ ವಿಕೆಟ್.. ನೆಕ್ಸ್​ಟ್ 58 ರನ್​ಗಳಿಗೆ 3 ವಿಕೆಟ್.. ಪವರ್​ ಪ್ಲೇನಲ್ಲಿ ಭಾರತ ಬೌಲಿಂಗ್​ನಲ್ಲಿ ಪವರ್ ಶೋ ತೋರಿಸಿತ್ತು. ಆದ್ರೆ ಯಾವಾಗ ಡೇರಿಲ್ ಮಿಚೆಲ್ ಮತ್ತು ಗ್ಲೆನ್ ಫಿಲಿಪ್ಸ್ ಜೊತೆಯಾದ್ರೆ ಇಬ್ಬರ ಪಾರ್ಟ್ನರ್​ಶಿಪ್ ಬ್ರೇಕ್ ಮಾಡೋಕೇ ಆಗ್ಲಿಲ್ಲ. 200 ಪ್ಲಸ್​ ರನ್​ಗಳ ಜೊತೆಯಾಟ ಬಂತು. ಮಿಚೆಲ್ 137 ರನ್ಸ್ ಕಲೆ ಹಾಕಿದ್ರೆ ಫಿಲಿಪ್ಸ್ 106 ರನ್​ ಹೊಡೆದ್ರು. ನಾಯಕ ಬ್ರೇಸ್​ವೆಸ್ 28 ರನ್ ಸಿಡಿಸಿದ್ರು. ಅಂತಿಮವಾಗಿ 50 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 337 ರನ್​ಗಳನ್ನ ಕಲೆ ಹಾಕಿದ್ರು. ಭಾರತದ ಪರ ರಾಣಾ ಮತ್ತು ಅರ್ಶದೀಪ್ ತಲಾ ಮೂರು ವಿಕೆಟ್ ಪಡೆದ್ರೆ ಸಿರಾಜ್ ಮತ್ತು ಕುಲ್ದೀಪ್ ಒಂದೊಂದು ವಿಕೆಟ್ ಪಡೆದ್ರು.

ಭಾರತದ ಪರ ಕೊಹ್ಲಿ ಏಕಾಂಗಿ ಹೋರಾಟ.. ರೆಡ್ಡಿ, ರಾಣಾ ಅರ್ಧಶತಕ ವ್ಯರ್ಥ!

338 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಭಾರತಕ್ಕೆ ಒಳ್ಳೆ ಆರಂಭ ಸಿಗ್ಲಿಲ್ಲ. ಹಿಟ್​ಮ್ಯಾನ್ ರೋಹಿತ್ ಶರ್ಮಾ ಕೊನೇ ಮ್ಯಾಚಲ್ಲಿ ಬಿಗ್ ಇನ್ನಿಂಗ್ಸ್ ಬರ್ಲಿಲ್ಲ. 11 ರನ್​ಗಳಿಗೆ ವಿಕೆಟ್ ಒಪ್ಪಿಸಿದ್ರು. ಇನ್ನು ನಾಯಕ ಗಿಲ್ 23 ರನ್​ಗಳಿಗೆ ಸೀಮಿತವಾದ್ರು.  42 ರನ್​ಗಳಿಗೆ 2 ವಿಕೆಟ್ ಬಿದ್ದಾಗಿತ್ತು. ನಂಬರ್ 4ನಲ್ಲಿ ಶ್ರೇಯಸ್ 4 ರನ್, ನಂಬರ್ 5ನಲ್ಲಿ ಕೆಎಲ್ ರಾಹುಲ್ 1 ರನ್​ಗೆ ಪೆವಿಲಿಯನ್ ಸೇರ್ಕೊಂಡ್ರು. 71 ರನ್ಸ್ ಆಗುವಷ್ಟ್ರಲ್ಲಿ ಭಾರತ ಟಾಪ್ ಆರ್ಡರ್​ನ 4 ವಿಕೆಟ್ ಢಮಾರ್. ಚೇಸಿಂಗ್ ಕಿಂಗ್ ವಿರಾಟ್ ಕೊಹ್ಲಿ ಮಾತ್ರ ಜಬಾವ್ದಾರಿಯಿಂದ ಆಡ್ತಿದ್ರು. ಕೊಹ್ಲಿಗೆ ನಿತೀಶ್ ರೆಡ್ಡಿ ಮತ್ತು ಹರ್ಷಿತ್ ರಾಣಾ ಅರ್ಧಶತಕ ಸಿಡಿಸಿ ಸಪೋರ್ಟ್ ಕೊಟ್ರು. ಆದ್ರೆ 124 ರನ್​ ಗಳಿಸಿದ್ದ ವಿರಾಟ್ ಬಿಗ್ ಹಿಟ್​ ಬಾರಿಸೋ ವೇಳೆ ಕ್ಯಾಚ್ ಕೊಟ್ರು. ಅಂತಿಮವಾಗಿ 46 ಓವರ್​ಗಳಲ್ಲೇ 296 ರನ್​ಗಳಿಗೆ ಭಾರತ ಆಲೌಟ್ ಆಯ್ತು. ನ್ಯೂಜಿಲೆಂಡ್ ತಂಡ 41 ರನ್​ಗಳಿಂದ ಪಂದ್ಯವನ್ನ ಗೆದ್ದುಕೊಳ್ತು. ಈ ಮೂಲಕ ಕಿವೀಸ್ ಪಡೆ ಭಾರತದಲ್ಲಿ ಚರಿತ್ರೆ ಬರೆದಿದೆ. 1988-89ರಲ್ಲಿ ಏಕದಿನ ಸರಣಿಗಾಗಿ ಮೊದಲ ಬಾರಿಗೆ ಭಾರತಕ್ಕೆ ನ್ಯೂಜಿಲೆಂಡ್ ಭೇಟಿ ನೀಡಿತ್ತು. ಅದಾದ ಮೇಲೆಯೂ ಏಕದಿನ ಸರಣಿಗಾಗಿ ಏಳು ಬಾರಿ ಭಾರತ ಪ್ರವಾಸ ಮಾಡಿದೆ. ಒಮ್ಮೆಯೂ ವಿನ್ ಆಗಿರಲಿಲ್ಲ. ಇದೀಗ 37 ವರ್ಷಗಳ ಬಳಿಕ ಭಾರತ ನೆಲದಲ್ಲಿ ಚೊಚ್ಚಲಬಾರಿಗೆ ಸರಣಿ ಗೆದ್ದಿದ್ದಾರೆ.

ಭಾರತದ ಸೋಲಿಗೆ ಕಾರಣಗಳು!

ಬೌಲಿಂಗ್ ನಲ್ಲಿ 300+ ರನ್ಸ್ ಕಲೆ ಹಾಕಲು ಬಿಡಬಾರದಿತ್ತು

ಮಿಚೆಲ್ ಮತ್ತು ಫಿಲಿಪ್​ ಇಬ್ಬರೂ ಶತಕ ಗಳಿಸಿ ರನ್ಸ್ ಕಲೆ

ಬ್ಯಾಟಿಂಗ್​ ಗೆ ಇಳಿದ ಭಾರತದ ಪರ ಟಾಪ್ ಆರ್ಡರ್ ಫೇಲ್ಯೂರ್

ವಿರಾಟ್ ಕೊಹ್ಲಿಗೆ ಟಾಪ್ ಆರ್ಡರ್ ಬ್ಯಾಟರ್ಸ್ ಸಾಥ್ ಸಿಗ್ಲಿಲ್ಲ

ಬ್ಯಾಟಿಂಗ್ & ಬೌಲಿಂಗ್ ಎರಡ್ರಲ್ಲೂ ನ್ಯೂಜಿಲೆಂಡ್ ಪಕ್ಕಾ ಪ್ಲ್ಯಾನ್

ಹೀಗೆ ಭಾರತಕ್ಕೆ ಕಾಲಿಡೋ ಮೊದ್ಲೇ ನ್ಯೂಜಿಲೆಂಡ್ ಗ್ರೌಂಡ್ ವರ್ಕ್ ಮಾಡಿಕೊಂಡೇ ಬಂದಿದ್ರು. ಅಂತಿಮವಾಗಿ ಭಾರತದಲ್ಲಿ ಗೆದ್ದು ತಮ್ಮ ಸೋಲಿನ ಸರಣಿಗೆ ಬ್ರೇಕ್ ಹಾಕಿದ್ದಾರೆ.

Shantha Kumari