ಬಿಗ್‌ಬಾಸ್ ಫಿನಾಲೆಗೂ ಬರಲಿಲ್ಲ ಹಾಸ್ಯನಟ ಚಂದ್ರಪ್ರಭ -ಕಾಮಿಡಿ ಕಲಾವಿದ ಹೋಗಿದ್ದು ಎಲ್ಲಿಗೆ?

ಬಿಗ್‌ಬಾಸ್ ಫಿನಾಲೆಗೂ ಬರಲಿಲ್ಲ ಹಾಸ್ಯನಟ ಚಂದ್ರಪ್ರಭ -ಕಾಮಿಡಿ ಕಲಾವಿದ ಹೋಗಿದ್ದು ಎಲ್ಲಿಗೆ?

ಬಿಗ್‌ಬಾಸ್ ಮನೆಯಿಂದ ತಾನಾಗಿಯೇ ಹೊರಹೋದ ಚಂದ್ರಪ್ರಭ ನಂತರ ಯಾರ ಕಣ್ಣಿಗೂ ಕಾಣಿಸಿಕೊಂಡಿರಲಿಲ್ಲ. ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆಗಾದರೂ ಬರುತ್ತಾರೆ ಅಂದರೆ, ಅಲ್ಲಿಗೂ ಬರಲಿಲ್ಲ. ಇದೀಗ ಚಂದ್ರಪ್ರಭ ಏನು ಮಾಡುತ್ತಿದ್ದಾರೆ ಎಂಬ ವಿಚಾರ ಗೊತ್ತಾಗಿದೆ.

ಇದನ್ನೂ ಓದಿ:ಬಿಗ್‌ಬಾಸ್ ಗೆದ್ದ ಪಳಾರ್ ಗಿಲ್ಲಿ – ವಂಶದ ಕುಡಿ ರಕ್ಷಿತಾ ಶೆಟ್ಟಿ ರನ್ನರ್

ಗಿಚ್ಚಿ ಗಿಲಿಗಿಲಿ ಖ್ಯಾತಿಯ ನಟ, ಹಾಗೂ ಬಿಗ್‌ಬಾಸ್ ಸ್ಪರ್ಧಿ ಚಂದ್ರಪ್ರಭ ಈಗ ಅಪ್ಪಟ ರೈತನಾಗಿದ್ದಾರೆ. ನಟನೆಗೂ ಸೈ, ಕೃಷಿ ಮಾಡೋಕು ಸೈ ಅಂತಾ ತೋರಿಸಿ ಕೊಟ್ಟಿದ್ದಾರೆ ಚಂದ್ರಪ್ರಭ. ಕೃಷಿ ಕೆಲಸದ ಜೊತೆಗೆ ನಾಟಿಕೋಳಿ ಸಾಕಾಣಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಶ್ರೀರಂಗಪಟ್ಟಣ ತಾಲ್ಲೂಕಿನ ದೊಡ್ಡೇಗೌಡನಕೊಪ್ಪಲು ಗ್ರಾಮದವರಾದ ಚಂದ್ರಪ್ರಭ, ತಮ್ಮ ತಂದೆಯವರ ಆಸ್ತಿಯಾದ ಕೆ.ಆರ್.ಪೇಟೆ ತಾಲ್ಲೂಕು ಬೂಕನಕೆರೆ ಗ್ರಾಮದ ಬಳಿಯ ಚಿಕ್ಕಗಾಡಿಗನಹಳ್ಳಿ ಗ್ರಾಮದ ಬಳಿ ಎರಡು ಎಕರೆ ಜಾಗದಲ್ಲಿ ಕೃಷಿ ಆರಂಭಿಸಿದ್ದಾರೆ. ನಾಟಿಕೋಳಿ ಸಾಕಾಣಿಕೆ, ತೆಂಗು, ಮಾವು, ಸಪೋಟ, ಸೀಬೆ ಸೇರಿದಂತೆ ಹಲವು ರೀತಿಯ ತೋಟಗಾರಿಕೆ ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ.

ಚಂದ್ರಪ್ರಭ ಅವರ ಕೃಷಿ ಕೆಲಸಕ್ಕೆ ಅವರ ಪತ್ನಿ ಕೂಡ ಸಾಥ್ ನೀಡಿದ್ದಾರೆ. ಚಂದ್ರಪ್ರಭ ಅವರು ಕೋಳಿ ಮತ್ತು ಕೋಳಿ ಫಾರಂ ನಿರ್ಮಾಣಕ್ಕಾಗಿ ಸುಮಾರು 5 ರಿಂದ 6 ಲಕ್ಷ ಖರ್ಚು ಮಾಡಿದ್ದಾರೆ. ಆದರೆ, ಚಂದ್ರಪ್ರಭ ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆಗೆ ಬಂದಿಲ್ಲ. ಸ್ನೇಹಿತ ಗಿಲ್ಲಿಗೋಸ್ಕರವಾದರೂ ಬರಬೇಕಿತ್ತು ಅಂತಾ ಫ್ಯಾನ್ಸ್ ಹೇಳುತ್ತಿದ್ದಾರೆ.

Sulekha