ಬಿಗ್ಬಾಸ್ ಹಣದಲ್ಲಿ ವ್ಯವಸಾಯ ಮಾಡುತ್ತೀನಿ! – ಮತ್ತೊಮ್ಮೆ ಹೃದಯ ಗೆದ್ದ ಗಿಲ್ಲಿನಟ!

ಡಮಾಲ್ ಡಿಮಿಲ್ ಡಕ್ಕಾ, ಎನ್ನುತ್ತಾ ಬಿಗ್ಬಾಸ್ ಕನ್ನಡ ಸೀಸನ್ 12ರ ಕಿರೀಟ ಗಿಲ್ಲಿನಟನಿಗೆ ಲಭಿಸಿದೆ. ದಾಖಲೆ ಪ್ರಮಾಣದಲ್ಲಿ ವೋಟ್ ಪಡೆದು ಗಿಲ್ಲಿ ಗೆದ್ದಿದ್ದಾರೆ. ಈ ಮೂಲಕ ಕಪ್ ಜೊತೆಗೆ 50 ಲಕ್ಷ ಬಹುಮಾನ ಕೂಡ ಸಿಕ್ಕಿದೆ. ಇದೀಗ ಈ ಹಣವನ್ನ ಗಿಲ್ಲಿನಟ ಏನ್ ಮಾಡ್ತಾರೆ ಅನ್ನೋ ಕುತೂಹಲ ಮೂಡಿದೆ. ಇದಕ್ಕೆ ಕಾಮಿಡಿ ಕಿಂಗ್ ಉತ್ತರಿಸಿದ್ದಾರೆ.
ಇದನ್ನೂ ಓದಿ: ಬಿಗ್ಬಾಸ್ ಗೆದ್ದ ಪಳಾರ್ ಗಿಲ್ಲಿ – ವಂಶದ ಕುಡಿ ರಕ್ಷಿತಾ ಶೆಟ್ಟಿ ರನ್ನರ್
ಬಿಗ್ಬಾಸ್ ಸೀಸನ್ 12 ಗೆದ್ದ ಗಿಲ್ಲಿಗೆ 50 ಲಕ್ಷ ಹಣ ಮಾತ್ರವಲ್ಲದೇ, ಮಾರುತಿ ಸುಜುಕಿ ವಿಕ್ಟೋರಿಸ್ ಕಾರು ಕೂಡಾ ಸಿಕ್ಕಿದೆ. ಅಲ್ಲದೇ ಕಿಚ್ಚ ಸುದೀಪ್ ಅವರು ಕೂಡಾ ವಿನ್ನರ್ ಗಿಲ್ಲಿಗೆ ವೈಯಕ್ತಿಕವಾಗಿ 10 ಲಕ್ಷ ರೂಪಾಯಿ ಹಣ ಘೋಷಣೆ ಮಾಡಿದ್ದಾರೆ. ಇದೀಗ ಈ ಹಣವನ್ನು ಗಿಲ್ಲಿ ಏನ್ ಮಾಡ್ತಾರೆ ಅನ್ನೋದಕ್ಕೆ ಉತ್ತರ ಸಿಕ್ಕಿದೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಗಿಲ್ಲಿನಟ ಮಾತನಾಡಿದ್ದಾರೆ. ಬಂದಿರೋ 50 ಲಕ್ಷದಲ್ಲಿ ಯಾವುದಾದ್ರೂ ಜಮೀನು ತಗೊಂಡು ವ್ಯವಸಾಯ ಏನಾದ್ರೂ ಮಾಡ್ಬೇಕು ಎಂದು ಹೇಳಿದ್ದಾರೆ.
ಚಡ್ಡಿ, ಬನಿಯನ್ನೇ ನಂಗಿಷ್ಟ. ಬಿಗ್ ಬಾಸ್ ಮನೆಗೆ ಹೋದಾಗ ನಾನು ಶರ್ಟು-ಪ್ಯಾಂಟು ಹಾಕೊಂಡು ಕುತ್ಕೊಳ್ತಿದ್ದೆ. ಯಾಕೋ ಕಷ್ಟ ಅನ್ಸೋದು. ಆಮೇಲೆ ಆಗಲ್ಲ ಇದು ಅಂತ ಬಿಟ್ಬಿಟ್ಟೆ ಎಂದು ದೊಡ್ಮನೆಯಲ್ಲಿ ಚಡ್ಡಿ-ಬನಿಯನ್ ಹಾಕ್ತಿದ್ದ ಬಗ್ಗೆ ಗಿಲ್ಲಿ ಕ್ಲ್ಯಾರಿಟಿ ಕೊಟ್ಟರು.
ನನಗೆ ಈಗಲೂ ನಂಬೋದಕ್ಕೆ ಆಗ್ತಿಲ್ಲ. ಇದು ನಿಜನಾ, ಸುಳ್ಳಾ ಅಂತ ಗೊತ್ತಾಗ್ತಿಲ್ಲ. ಪದೇ ಪದೇ ಮೈಕ್ ಇದ್ಯಾ ಅಂತ ನೋಡಿಕೊಳ್ತಿದ್ದೀನಿ. ನಾನ್ ದೊಡ್ಡಮ್ಮ.. ದೊಡ್ಡಮ್ಮ ದ್ವಾಸೆ ಕೊಡು.. ಹಾಡನ್ನ ಸ್ಕೂಲ್ಗೆ ಹೋಗುವಾಗ ಕಲಿತಿದ್ದು, ಅದು ಹಾಗೆ ಮನೇಲಿ ಹೇಳಿದ್ದು. ಆಮೇಲೆ ಇಷ್ಟು ಫೇಮಸ್ ಆಯ್ತು ಆ ಹಾಡು. ಮಕ್ಕಳಿಗೆಲ್ಲ ಇಷ್ಟ ಆಗಿದೆ ಅನ್ನೋದು ಆಚೆ ಬಂದ್ಮೇಲೆ ಗೊತ್ತಾಯ್ತು ಎಂದು ಖುಷಿ ವ್ಯಕ್ತಪಡಿಸಿದರು.
ಕಾವ್ಯ ಜೊತೆ ಮದುವೆ ಎಲ್ಲ ಏನೂ ಇಲ್ಲ. ಎಂಟ್ರಿ ಕೊಡುವಾಗ ಜಂಟಿಯಾಗಿ ನಾನು ಮತ್ತು ಕಾವ್ಯ ಹೋಗಿದ್ವಿ. ಆವಾಗ ಸುಮ್ನೆ ಹೇಳಿದ್ದು, ಅದೇ ಸಿಂಕ್ ಆಗೋಯ್ತು. ನಾವು 6 ಜನ ಫೈನಲಿಸ್ಟ್ ಇದ್ವಲ್ಲ. ನಮಗೆ ಎಷ್ಟು ಟೆನ್ಷನ್ ಆಗ್ತಿತ್ತು. ಟಾಪ್ 6ನಲ್ಲಿ ಇರೋರಲ್ಲಿ ಯಾರಾದರು ಒಬ್ಬರು ನನ್ನ ಪಕ್ಕ ನಿಲ್ತಾರೆ ಅಂತ ಮನಸ್ಸಿಗೆ ಅನ್ನಿಸಿತ್ತು. ಆದರೆ, ಊಹೆ ಮಾಡೋಕು ಆಗ್ತಿರಲಿಲ್ಲ ಏನಾಗುತ್ತೆ ಅಂತ ಎಂದು ಹೇಳಿದ್ದಾರೆ.

ನೋಡಿರಿ

