ಬಿಗ್‌ಬಾಸ್ ಗೆದ್ದ ಪಳಾರ್ ಗಿಲ್ಲಿ – ರಕ್ಷಿತಾ ಶೆಟ್ಟಿ ಬಿಗ್‌ಬಾಸ್ ರನ್ನರ್ ಅಪ್
ಕಿಚ್ಚನ ಮನಗೆದ್ದ ಗಿಲ್ಲಿ –10 ಲಕ್ಷ ರೂಪಾಯಿ ಬಹುಮಾನ ಕೊಟ್ಟ ಕಿಚ್ಚ ಸುದೀಪ್

ಬಿಗ್‌ಬಾಸ್ ಗೆದ್ದ ಪಳಾರ್ ಗಿಲ್ಲಿ – ರಕ್ಷಿತಾ ಶೆಟ್ಟಿ ಬಿಗ್‌ಬಾಸ್  ರನ್ನರ್ ಅಪ್ಕಿಚ್ಚನ ಮನಗೆದ್ದ ಗಿಲ್ಲಿ –10 ಲಕ್ಷ ರೂಪಾಯಿ ಬಹುಮಾನ ಕೊಟ್ಟ ಕಿಚ್ಚ ಸುದೀಪ್

ಕಾಮಿಡಿ ಕಲಾವಿದ ಗಿಲ್ಲಿ ನಟ ಬಿಗ್‌ಬಾಸ್ ಗೆದ್ದು 50 ಲಕ್ಷ ರೂಪಾಯಿ ಬಹುಮಾನ ಗೆದ್ದಿದ್ದಾರೆ. ರಕ್ಷಿತಾ ಶೆಟ್ಟಿ ರನ್ನರ್ ಅಪ್ ಆಗುವ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ.

ಇದನ್ನೂ ಓದಿ:ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡ ಅಶ್ವಿನಿ ಗೌಡ – ಅತಿ ವಿಶ್ವಾಸವೇ ಕ್ಲೈಮ್ಯಾಕ್ಸ್‌ನಲ್ಲಿ ಮುಳ್ಳಾಯ್ತಾ?

ಅಪ್ಪಟ ಹಳ್ಳಿ ಪ್ರತಿಭೆ, ಕಾಮಿಡಿ ಕಿಂಗ್ ಗಿಲ್ಲಿ ನಟ ಬಿಗ್‌ಬಾಸ್ ವಿನ್ನರ್ ಆಗಿದ್ದಾರೆ. ಸಕಲಕಲಾವಲ್ಲಭ ಗಿಲ್ಲಿ ಬಿಗ್‌ಬಾಸ್ ಟ್ರೋಫಿ ಎತ್ತಿಹಿಡಿದಿದ್ದಾರೆ. ಜೊತೆಗೆ 50 ಲಕ್ಷ ರೂಪಾಯಿ ನಗದು ಬಹುಮಾನ ಗೆದ್ದಿದ್ದಾರೆ.

ಗಿಲ್ಲಿಯೇ ಈ ಸೀಸನ್ ಗೆಲ್ಲೋದು ಅಂತ ಕಳೆದೆರೆಡು ದಿನಗಳಿಂದ ಅಭಿಮಾನಿಗಳಿಂದ ನಿರೀಕ್ಷೆಯಿತ್ತು. ಗಿಲ್ಲಿಯ ಅಭಿಮಾನಿಗಳ ಕ್ರೇಜ್ ಬೇರೆ ಲೆವೆಲ್ ಇತ್ತು. ಅಪಾರ ಅಭಿಮಾನಿಗಳ ಪ್ರೀತಿ ಗಳಿಸಿದ ಗಿಲ್ಲಿ ಬಿಗ್‌ಬಾಸ್ ಟ್ರೋಫಿ ಗೆದ್ದಿದ್ದಾರೆ. ಮೊದಲ ದಿನದಿಂದಲೂ ತಾನು ತಾನಾಗಿಯೇ ಇದ್ದಂತಹ ಗಿಲ್ಲಿ ತನ್ನ ಹಾಸ್ಯದ ಮೂಲಕ ಬಹಳಷ್ಟು ಜನರನ್ನು ಮೆಚ್ಚಿಸಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಹಳ್ಳಿ ಹೈದನಂತೆ, ಮಂಡ್ಯ ಭಾಷೆಯಲ್ಲಿ ಪಂಚಿಂಗ್ ಡೈಲಾಗ್ ಹೊಡೆಯುತ್ತಾ ವೀಕ್ಷಕರ ಮನಗೆದ್ದ ಗಿಲ್ಲಿ ನಟ ಬಿಗ್‌ಬಾಸ್‌ನ ಈ ಸೀಸನ್‌ನ ಬಾಸ್ ಆಗಿ ಗೆದ್ದು ಬಂದಿದ್ದಾರೆ.

ಗಿಲ್ಲಿ ನಟನಿಗೆ 50 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ. ಜೊತೆಗೆ ಕಾರು ಕೂಡಾ ಬಹುಮಾನವಾಗಿ ಸಿಕ್ಕಿದೆ. ಗಿಲ್ಲಿನಟನ ಅಪ್ಪ ಅಮ್ಮ ವೇದಿಕೆಗೆ ಬಂದು ಮಗನ ಗೆಲುವನ್ನು ಸಂಭ್ರಮಿಸಿದು. ಇದಾದ ನಂತರ ಕಿಚ್ಚ ಸುದೀಪ್ ಗಿಲ್ಲಿ ನನ್ನ ಮನಸು ಕೂಡಾ ಗೆದ್ದಿದ್ದಾರೆ. ಹೀಗಾಗಿ ನನ್ನ ಕಡೆಯಿಂದ 10 ಲಕ್ಷ ರೂಪಾಯಿ ಬಹುಮಾನ ಎಂದು ಘೋಷಿಸಿದರು.

ಇನ್ನು ರಕ್ಷಿತಾ ಶೆಟ್ಟಿ ರನ್ನರ್ ಅಪ್ ಆಗುವ ಮೂಲಕ ಕನ್ನಡಿಗರ ಮನೆಮಗಳಾಗಿದ್ದಾಳೆ. ರನ್ನರ್ ಅಪ್ ಆಗಿ ಹೊರಹೊಮ್ಮಿರುವ ರಕ್ಷಿತಾ ಶೆಟ್ಟಿಗೆ ಸಾಯಿ ಗೋಲ್ಡ್ ಪ್ಯಾಲೇಸ್ ಕಡೆಯಿಂದ 20 ಲಕ್ಷ ರೂಪಾಯಿ ಬಹುಮಾನ ಸೇರಿದಂತೆ ಒಟ್ಟು 25 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ.

Sulekha