ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಯಲ್ಲಿ ರಘು ಕನಸು ಭಗ್ನ – ದೊಡ್ಮನೆಯಿಂದ ಹೊರಗೆ ಕರೆತಂದ ನಟಿ ಶ್ರುತಿ

ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಯಲ್ಲಿ ರಘು ಕನಸು ಭಗ್ನ –  ದೊಡ್ಮನೆಯಿಂದ ಹೊರಗೆ ಕರೆತಂದ ನಟಿ ಶ್ರುತಿ

ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆಯಲ್ಲಿ ರಘು ಕನಸು ಭಗ್ನವಾಗಿದೆ. ನಟಿ ಶ್ರುತಿ ಬಿಗ್‌ಬಾಸ್ ಮನೆಗೆ ಆಗಮಿಸಿ 5ನೇ ಸ್ಥಾನದಲ್ಲಿ ಯಾರು ಮನೆಯಿಂದ ಹೊರಬಂದಿದ್ದಾರೆ ಎಂದು ಹೇಳಿದರು. ರಘು ಎಲಿಮಿನೇಟ್ ಆಗಿದ್ದು, ನಟಿ ಶ್ರುತಿಯವರು ರಘು ಅವರನ್ನು ಕೈಹಿಡಿದುಕೊಂಡು ಮನೆಯಿಂದ ಹೊರಗೆ ಕರೆತಂದರು.

ಫಿನಾಲೆಯಿಂದ ಹೊರಬಿದ್ದ ರಘು ಅವರು ಕಿಚ್ಚ ಸುದೀಪ ಬಳಿ ಮಾತನಾಡುತ್ತಾ, ಈ ಅನುಭವ ತುಂಬಾ ಚೆನ್ನಾಗಿತ್ತು ಎಂದು ಹೇಳಿದರು. ಜೊತೆಗೆ ರಘು ಅವರ ಮಗನ ಕಣ್ಣಂಚಿನಲ್ಲಿ ನೀರಿತ್ತು. ಜೊತೆಗೆ ರಘು ಪತ್ನಿ ಕೂಡಾ ಗಂಡ ಹೊರಗೆ ಬರುತ್ತಿದ್ದಂತೆ ಕಣ್ಣೀರು ಹಾಕಿದರು.

ಮ್ಯೂಟೆಂಟ್ ರಘು ಅವರು ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಂದಿದ್ದರು. ಇದೀಗ ಅವರು 2ನೇ ಸ್ಪರ್ಧಿಯಾಗಿ ಮನೆಯಿಂದ ಹೊರಗೆ ಬಂದಿದ್ದಾರೆ. ರಘು ಅವರಿಗೆ ಕಿಚ್ಚ ಸುದೀಪ್ ಅವರು ವೇದಿಕೆಯಲ್ಲಿ ಮೂರುವರೆ ಲಕ್ಷ ರೂಪಾಯಿ ಬಹುಮಾನವನ್ನು ನೀಡಿದರು. ರಘು ಅವರು ಬಿಗ್​​ಬಾಸ್ ಪ್ರಾರಂಭವಾಗಿ 22 ದಿನಗಳ ಬಳಿಕ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್​​ಬಾಸ್ ಮನೆಗೆ ಬಂದರು. ಬಂದ ಆರಂಭದಲ್ಲಿಯೇ ಅಶ್ವಿನಿ ಜೊತೆಗೆ ಜಗಳ ಮಾಡುವ ಮೂಲಕ ದೇಹದಂತೆ ಗಲಾಟೆ ಜೋರಾಗಿದೆ ಎಂದು ಭಾವಿಸಲಾಗಿತ್ತು. ಆದರೆ, ಬರುತ್ತಾ ರಘು ಅವರು ಕಠಿಣ ದೇಹಿ ಆದರೆ ಮೃದು ಮನಸ್ಸಿನ ವ್ಯಕ್ತಿ ಎಂಬುದು ಉಳಿದ ಸ್ಪರ್ಧಿಗಳಿಗೂ ಗೊತ್ತಾಗಿತ್ತು.

Sulekha