ಮಗು ಹಠ ಮಾಡದಿದ್ದರೆ 100 ರೂ ಟಿಪ್ಸ್! – ಏನಿದು ತಂದೆ, ಮಗನ ಒಪ್ಪಂದ?
ಶಾಲಾ ಕಾಲೇಜುಗಳಲ್ಲಿ ತರಗತಿಗಳ ವೇಳಾಪಟ್ಟಿ, ಕಚೇರಿಗಳಲ್ಲಿ ಕೆಲಸದ ವೇಳಾಪಟ್ಟಿಗಳನ್ನು ನೋಡಿರುತ್ತೇವೆ. ಶಾಲೆಗೆ ಹೋಗುವ ಮಕ್ಕಳು ಕೂಡಾ ಓದಲು ವೇಳಾಪಟ್ಟಿ ಮಾಡಿಕೊಂಡಿರುತ್ತಾರೆ. ತಂದೆ ತಾಯಿಯರೂ ಕೂಡ ತುಂಟ ಮಕ್ಕಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಏನೇನೋ ತಂತ್ರಗಳನ್ನು ಮಾಡುತ್ತಾರೆ. ಮಕ್ಕಳು ಕೂಡ ಪೋಷಕರ ಮಾತು ಕೇಳಬೇಂದರೆ ಏನೇನೋ ಒಪ್ಪಂದಗಳನ್ನು ಮಾಡಿಕೊಳ್ಳುತ್ತಾರೆ. ಇಲ್ಲೊಬ್ಬ ಬಾಲಕ ತನ್ನ ತಂದೆಯೊಂದಿಗೆ ಮಾಡಿಕೊಂಡಿರುವ ಒಪ್ಪಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಎಣ್ಣೆ ಮತ್ತಲ್ಲಿ ಸಿಂಹಿಣಿಗೆ ಚಮಕ್ ಕೊಟ್ಟ ಭೂಪ – ಅಯ್ಯೋ ಮುಂದೆ ಆಗಿದ್ದೇ ಬೇರೆ!
ಟ್ವಿಟ್ಟರ್ ಬಳಕೆದಾರ ಬಾಟ್ಲಾ ಜಿ ಎನ್ನುವವರು 2022 ರ ಫೆಬ್ರವರಿಯಲ್ಲಿ ಪೋಸ್ಟ್ ಒಂದು ಹಾಕಿದ್ದು, ಭಾರಿ ವೈರಲ್ ಆಗುತ್ತಿದೆ. ಈ ಪೋಸ್ಟ್ ನಲ್ಲಿ ತಮ್ಮ 6 ವರ್ಷದ ಮಗ ಅಬೀರ್ನೊಂದಿಗೆ ಸಹಿ ಮಾಡಿದ ಕೈಬರಹದ ಒಪ್ಪಂದದ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಒಪ್ಪಂದವು ಪುಟ್ಟ ಹುಡುಗನ ದೈನಂದಿನ ವೇಳಾಪಟ್ಟಿಯನ್ನು ವಿವರಿಸುತ್ತದೆ. ಇದರಲ್ಲಿ ಅವನು ಆಟದ ಸಮಯದಿಂದ ಹಿಡಿದು ಅವನು ಹಾಲನ್ನು ಕುಡಿಯುವವರೆಗೆ ಎಲ್ಲವನ್ನೂ ಇದರಲ್ಲಿ ಸೇರಿಸಿದ್ದಾನೆ.
ದೈನಂದಿನ ವೇಳಾಪಟ್ಟಿಯನ್ನು ಹಾಕಿಕೊಂಡಿರುವುದು ಒಳ್ಳೆಯದೇ. ಆದರೆ ಈ ಬಾಲಕ ಇದನ್ನು ಪಾಲಿಸಬೇಕೆಂದರೆ ತಂದೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾನೆ. ಪ್ರತಿದಿನ ಬೆಳಗ್ಗೆ ಅಲಾರಂ ಸದ್ದು ಮಾಡಿದ ನಂತರ ಹುಡುಗ ಬೆಡ್ ನಿಂದ ಏಳಲು 10 ನಿಮಿಷಗಳ ಕಾಲ ಸಮಯ ಕೇಳಿದ್ದಾನೆ. ಊಟ ಮತ್ತು ಆಟದಿಂದ ಹಿಡಿದು ಹಾಲು ಕುಡಿಯುವುದು ಮತ್ತು ತನ್ನ ಶಾಲೆಯಲ್ಲಿ ನೀಡಿದ ಹೋಂ ವರ್ಕ್ ಮಾಡುವವರೆಗೆ ಎಲ್ಲದಕ್ಕೂ ಒಂದೊಂದು ಸ್ಲಾಟ್ ಗಳನ್ನು ನೀಡಿದ್ದಾನೆ. ಹುಡುಗನು ಈ ವೇಳಾಪಟ್ಟಿಯಲ್ಲಿ ಹಾಕಿಕೊಂಡಿರುವ ದೈನಂದಿನ ಕಾರ್ಯಗಳನ್ನು ಪೂರ್ಣಗೊಳಿಸಿದರೆ, ಅವನಿಗೆ ಬಹುಮಾನ ನೀಡಬೇಕು ಎಂದು ಒಪ್ಪಂದದಲ್ಲಿದೆ.
Me and my 6 year old signed and agreement today for his daily schedule and performance linked bonus 😂 pic.twitter.com/b4VBKTl8gh
— Batla_G (@Batla_G) February 1, 2022
ಈ ಒಪ್ಪಂದದಲ್ಲಿ ಹುಡುಗ ಇಡೀ ದಿನ ಅಳುವುದಿಲ್ಲ, ಕೋಪ ಮಾಡಿಕೊಳ್ಳುವುದಿಲ್ಲ ಎಂದು ಬರೆದಿದ್ದಾನೆ. ಇದಕ್ಕೆ ಪ್ರತಿದಿನ 10 ರೂಪಾಯಿಗಳನ್ನು ಚಾರ್ಜ್ ಮಾಡಬೇಕು ಎಂದು ಹೇಳಿದ್ದಾನೆ. ಒಂದು ವಾರ ಪೂರ್ತಿ ಬಾಲಕ ಅಳದೆ, ಕೂಗಾಡದೆ, ಜಗಳವಾಡದೆ ಇದ್ದರೆ ತಂದೆಯು ಆತನಿಗೆ 100 ರೂಪಾಯಿ ಕೊಡುವುದಾಗಿ ಒಪ್ಪಂದದಲ್ಲಿ ತಿಳಿಸಲಾಗಿದೆ.