ಜಗಳದಿಂದ ಉಳಿದ ಸ್ಪರ್ಧಿಗಳ ಸೌಂಡ್ – ಕಾಮಿಡಿಯಿಂದಲೇ ಜನರ ಮನ ಗೆದ್ದ ಗಿಲ್ಲಿ

ಜಗಳದಿಂದ ಉಳಿದ ಸ್ಪರ್ಧಿಗಳ ಸೌಂಡ್ – ಕಾಮಿಡಿಯಿಂದಲೇ ಜನರ ಮನ ಗೆದ್ದ ಗಿಲ್ಲಿ

ಬಿಗ್‌ಬಾಸ್ ಮನೆಯಲ್ಲಿ ಜಗಳ ಮಾಡಿದರೆ, ಗಲಾಟೆಯಿಂದ ಸೌಂಡ್ ಮಾಡಿದರೆ ಮಾತ್ರ ವೀಕ್ಷಕರಿಗೆ ಇಷ್ಟವಾಗುತ್ತೆ ಅನ್ನೋ ಸ್ಪರ್ಧಿಗಳು ಇದ್ದಾರೆ. ಇವರಲ್ಲೊಬ್ಬ ಮಾತ್ರ ಡಿಫರೆಂಟ್. ಹೌದು. ಗಿಲ್ಲಿ ಕಾಮಿಡಿಯಿಂದಲೇ ರಾಜ್ಯದ ಜನತೆಯ ಮನಗೆದ್ದಿದ್ದಾರೆ.

ಇದನ್ನೂ ಓದಿ: ನೀವೆಲ್ಲರೂ ಇಲ್ಲದೆ ಇದ್ರೆ ಬಿಗ್ ಬಾಸ್ ಇಲ್ಲ- ಫಿನಾಲೆಗೂ ಮೊದಲೇ ಧನ್ಯವಾದ ಹೇಳಿದ ಕಿಚ್ಚ ಸುದೀಪ್

ಬಿಗ್‌ಬಾಸ್ ರಿಯಾಲಿಟಿ ಶೋಗೆ ಬರುವ ಸ್ಪರ್ಧಿಗಳಲ್ಲಿ ಒಂದು ರೀತಿಯ ಮೈಂಡ್ ಸೆಟ್ ಇರುತ್ತೆ. ಜೋರಾಗಿ ಕಿರುಚಾಡಬೇಕು. ನ್ಯಾಯಕ್ಕಾಗಿ ಕೂಗಾಡಬೇಕು. ಟಾಸ್ಕ್ ಅಂತಾ ಬಂದಾಗ ದೈಹಿಕ ಸಾಮರ್ಥ್ಯ ತೋರಿಸಬೇಕು. ಇದರಿಂದ ವೀಕ್ಷಕರಿಗೆ ತುಂಬಾ ಖುಷಿಯಾಗುತ್ತದೆ ಅನ್ನೋದು. ಆದರೆ, ವೀಕ್ಷಕರು ಮನರಂಜನೆ ಬಯಸುತ್ತಾರೆ. ಟಿವಿ ಹಾಕಿದ ಆ ಒಂದೂವರೆ ಗಂಟೆ ಬರೀ ಗಲಾಟೆಯೇ ನೋಡುತ್ತಿದ್ದರೆ ಮಕ್ಕಳ ಜೊತೆ ಟಿವಿ ನೋಡಲು ಸಾಧ್ಯವಿಲ್ಲ. ಅದೇ ಮನರಂಜನೆ ಜೊತೆಗೆ ಟಾಸ್ಕ್ ಇದ್ದಾಗ ಕುಟುಂಬ ಸಮೇತ ಟಿವಿ ನೋಡಬಹುದು. ಇದೇ ವಿಚಾರದಲ್ಲಿ ಕನ್ನಡಿಗರ ಮನಗೆದ್ದಿದ್ದಾರೆ ಗಿಲ್ಲಿ. ಹೌದು. ಕಾಮಿಡಿಯಿಂದಲೇ ಸೌಂಡ್ ಮಾಡಿದ್ದಾರೆ ಗಿಲ್ಲಿನಟ.

ಗಿಲ್ಲಿಗಾಗಿ ದೊಡ್ಡ ದೊಡ್ಡ ಬ್ಯಾನರ್ ಗಳು ತಲೆಯೆತ್ತಿವೆ. ಹಳ್ಳಿ ಹಳ್ಳಿಯಲ್ಲಿಯೂ ಗಿಲ್ಲಿ ಹವಾ ಜೋರಾಗಿದೆ. ಗಿಲ್ಲಿ ಗಿಲ್ಲಿ ಗಿಲ್ಲಿ ಅಂತ ಇಡೀ ಕರುನಾಡಿನ ಮಂದಿ ಜೈಕಾರ ಹಾಕ್ತಿದ್ಧಾರೆ. ಮಾತಿನ ಪಟಾಕಿ ಮೂಲಕ ತಾನೆಂತ ಪಳಾರ್ ಅನ್ನೋದನ್ನ ಪ್ರೂವ್ ಮಾಡಿದ್ದಾನೆ ಗಿಲ್ಲಿ. ಇನ್ನು ಸೀಸನ್ 12 ರ ಬಿಗ್ ಬಾಸ್ ನಲ್ಲಿ ಡಮಾಲ್ ಡಿಮ್ಮಿ ಡಕ್ಕ ಗಿಲ್ಲಿ ಗೆಲ್ಲೋದು ಪಕ್ಕ ಅನ್ನೋ ಮಾತು ಕೇಳಿಬರುತ್ತಿದೆ. ಎಲ್ಲರೂ ಗಲಾಟೆ ಮಾಡ್ತಾ ಫೇಮಸ್ ಆಗಿದ್ದರೆ, ಗಿಲ್ಲಿ ಮಾತ್ರ ಕಾಮಿಡಿ ಮೂಲಕವೇ ಸದ್ದು ಮಾಡಿ ಗಮನ ಸೆಳೆದಿದ್ದಾರೆ. ಹೀಗಾಗಿ ಗಿಲ್ಲಿಯೇ ಗೆಲ್ಲೋದು ಪಕ್ಕಾ ಅನ್ನೋ ಮಾತು ಕೇಳಿಬರುತ್ತಿದೆ.

Sulekha