ನೀವೆಲ್ಲರೂ ಇಲ್ಲದೆ ಇದ್ರೆ ಬಿಗ್ ಬಾಸ್ ಇಲ್ಲ- ಫಿನಾಲೆಗೂ ಮೊದಲೇ ಧನ್ಯವಾದ ಹೇಳಿದ ಕಿಚ್ಚ ಸುದೀಪ್

ಬಿಗ್‌ಬಾಸ್ ವಿನ್ನರ್ ಯಾರು ಅನ್ನೋದು ಇವತ್ತು (ಭಾನುವಾರ) ಗೊತ್ತಾಗಲಿದೆ. ಆ ಕುತೂಹಲದ ಕ್ಷಣಕ್ಕೆ ಕೆಲವೇ ಗಂಟೆಗಳು ಬಾಕಿಯಷ್ಟೇ. ಇದರ ಮಧ್ಯೆ ಬಿಗ್ ಬಾಸ್ ಹೋಸ್ಟ್ ಸುದೀಪ್ ಒಂದು ಪೋಸ್ಟ್ ಹಾಕಿದ್ದಾರೆ. ಇಡೀ ಬಿಗ್ ಬಾಸ್ ತಂಡಕ್ಕೆ ಧನ್ಯವಾದ ಹೇಳಿದ್ದಾರೆ.
ಇದನ್ನೂ ಓದಿ:ಗಿಲ್ಲಿಯೇ ಗೆಲ್ಲುವುದು ಶ್ರೀ ಮಾಯಗಾತಿ ದೇವಿ ಅಭಯ – ಬಲಗಡೆ ಬಿತ್ತು ಹೂವಿನ ಪ್ರಸಾದ
ಬಿಗ್ ಬಾಸ್ ಗ್ರಾಂಡ್ ಫಿನಾಲೆ ದಿನವೇ ಕಿಚ್ಚ ಸುದೀಪ್ ಸೋಷಿಯಲ್ ಮೀಡಿಯಾದ ತಮ್ಮ ಪೇಜ್ ಮೂಲಕ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ಬಿಗ್ ಬಾಸ್ ಬಗ್ಗೆ ತಮ್ಮ ಅನಿಸಿಕೆಯನ್ನು ಬರಹದ ಮೂಲಕ ಪೋಸ್ಟ್ ಮಾಡಿದ್ದಾರೆ ಕಿಚ್ಚ ಸುದೀಪ್. ಇಂದು (ಭಾನುವಾರ) ಬಿಗ್ ಬಾಸ್ ಸೀಸನ್ -12 ಗ್ರ್ಯಾಂಡ್ ಫಿನಾಲೆ ಇದೆ. ಇದು ನಿಜಕ್ಕೂ ಅದ್ಭುತ ಸೀಸನ್,ವೀಕ್ಷಕರಿಗೆ ,ಇಡೀ ತಂಡಕ್ಕೆ ಧನ್ಯವಾದ ಹೇಳಿದ್ದಾರೆ. ಸೂರ್ಯಾಸ್ತದ ಹೊತ್ತಿಗೆ ಬಿಗ್ ಬಾಸ್ ಸೀಸನ್ -12 ಮುಕ್ತಾಯವಾಗಲಿದೆ. ಈ ಒಂದು ಶೋಕ್ಕೆ ಬೆಂಬಲ ನೀಡಿದ ಪ್ರತಿಯೊಬ್ಬ ವೀಕ್ಷಕರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಅಂತ ಸುದೀಪ್ ಹೇಳಿದ್ದಾರೆ. ಬಿಗ್ ಬಾಸ್ ಗೆದ್ದ ವಿಜೇತರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು. ಈ ಅದ್ಭುತ ಯಶಸ್ಸಿಗೆ ಕಾರಣರಾದ ಇಡೀ ತಾಂತ್ರಿಕ ತಂಡಕ್ಕೆ ಅಭಿನಂದನೆಗಳು. ನೀವೆಲ್ಲರೂ ಇಲ್ಲದೆ ಇದ್ರೆ ಬಿಗ್ ಬಾಸ್ ಇಲ್ಲ ಅಂತಲೂ ಸುದೀಪ್ ಸೋಷಿಯಲ್ ಮೀಡಿಯಾ ಪೋಸ್ಟ್ ಅಲ್ಲಿ ಹೇಳಿದ್ದಾರೆ.
ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಭಾನುವಾರ ಸಂಜೆ 6 ಗಂಟೆಗೆ ಶುರು ಆಗುತ್ತದೆ. ಈ ಒಂದು ಫಿನಾಲೆ ಬಗ್ಗೆ ಸಾಕಷ್ಟು ಕುತೂಹಲವೂ ಇದೆ. ಕಾರಣ, ಈಗಾಗಲೇ ಕಿಚ್ಚ ಸುದೀಪ್ ವಿನ್ನರ್ ಮತ್ತು ರನ್ನರ್ ಗಳಿಗೆ ಅದೆಷ್ಟು ವೋಟ್ ಬಂದಿವೆ ಅಂತಲೂ ಹೇಳಿದ್ದಾರೆ. ಇದರಿಂದ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿದೆ. ಬಿಗ್ ಬಾಸ್ ಸೀಸನ್ 12 ಈ ಸಲ ಹೊಸ ದಾಖಲೆಯನ್ನೆ ಮಾಡಿದೆ. ಇಲ್ಲಿವರಗೂ ವಿನ್ನರ್‌ಗೆ ಇಷ್ಟೊಂದು ವೋಟ್ ಬಂದಿರಲಿಲ್ಲ. ಕಳೆದ ಸೀಸನ್-11 ರ ವಿನ್ನರ್ ಸಿಂಗರ್ ಹನುಮಂತ 5 ಕೋಟಿ ವೋಟ್ ಪಡೆದಿದ್ದರು. ಆದರೆ, ಈ ಸಲದ ವಿನ್ನರ್ 37 ಕೋಟಿ ವೋಟ್ ಪಡೆದಿದ್ದಾರೆ. ಆ ಲಕ್ಕಿ ವಿನ್ನರ್ ಯಾರು ಅನ್ನೋ ಕುತೂಹಲಕ್ಕೆ ಇವತ್ತು ರಾತ್ರಿ ತೆರೆ ಬೀಳಲಿದೆ.

ನೋಡಿರಿ

