IND Vs NZ ಕ್ಲೈಮ್ಯಾಕ್ಸ್ ಟ್ವಿಸ್ಟ್ – ODI ಸರಣಿ ಗೆದ್ರಷ್ಟೇ T-20 ವಿಶ್ವಕಪ್?
ತವರಿನ ಅಗ್ನಿಪರೀಕ್ಷೆ ಗೆಲ್ತಾರಾ ಗಿಲ್?

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿ ಸದ್ಯ ಕ್ಲೈಮ್ಯಾಕ್ಸ್ ಸ್ಟೇಜ್ನಲ್ಲಿದೆ. ಇವತ್ತಿನ ಪಂದ್ಯವೇ ಗೇಮ್ ಡಿಸೈಡರ್ ಆಗಲಿದೆ. ಮೊದಲ ಪಂದ್ಯವನ್ನ ಭಾರತ ಗೆದ್ರೆ ಎರಡನೇ ಪಂದ್ಯವನ್ನ ನ್ಯೂಜಿಲೆಂಡ್ ವಿನ್ ಆಗಿತ್ತು. ಈ ಮೂಲಕ ಸರಣಿ ಸಮಬಲದಲ್ಲಿದ್ದು ಇವತ್ತಿನ ಪಂದ್ಯ ಗೆದ್ದವ್ರು ಸರಣಿ ಕೈವಶ ಮಾಡಿಕೊಳ್ತಾರೆ. ಭಾರತ ಮಸ್ಟ್ ಌಂಡ್ ಶುಡ್ ಈ ಮ್ಯಾಚ್ ವಿನ್ ಆಗಲೇಬೇಕು. ಅದಕ್ಕೆ ಒಂದಷ್ಟು ರೀಸನ್ಸ್ ಕೂಡ ಇದೆ.
ಇದನ್ನೂ ಓದಿ : ಬೆಂಗಳೂರಿನಲ್ಲೇ ನಡೆಯಲಿವೆ RCB ಪಂದ್ಯಗಳು – ಕಂಡೀಷನ್ ಹಾಕಿ ಓಕೆ ಎಂದ RCB ಮ್ಯಾನೇಜ್ಮೆಂಟ್
ಮೂರು ಪಂದ್ಯಗಳ ಸರಣಿ ಸಮಬಲ ಆಗಿರೋದ್ರಿಂದ ಎಲ್ಲರ ಕಣ್ಣು ಈಗ ಮೂರನೇ ಪಂದ್ಯದ ಮೇಲಿದೆ. ಈ ಪಂದ್ಯವು ಇಂದೋರ್ನ ಹೋಳ್ಕರ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಬ್ಯಾಟಿಂಗ್ ಫ್ರೆಂಡ್ಲಿಯಾಗಿರೋ ಈ ಪಿಚ್ನಲ್ಲಿ ಸಣ್ಣ ಬೌಂಡರಿಗಳು ಇರೋದ್ರಿಂದ ಹೆಚ್ಚಿನ ಸ್ಕೋರ್ ನಿರೀಕ್ಷೆ ಮಾಡ್ಬೋದು. ಸದ್ಯ ಎರಡನೇ ಮ್ಯಾಚ್ ಸೋತಿರೋ ಭಾರತ ಭರ್ಜರಿ ಕಂ ಬ್ಯಾಕ್ ನಿರೀಕ್ಷೆಯಲ್ಲಿದ್ರೆ ಅತ್ತ ನ್ಯೂಜಿಲೆಂಡ್ ಕೂಡ ಎರಡನೇ ಪಂದ್ಯದ ಗೆಲುವಿನೊಂದಿಗೆ ಸರಣಿ ಕೈವಶ ಮಾಡಿಕೊಳ್ಳೋ ಟಾರ್ಗೆಟ್ನಲ್ಲಿದೆ. ಸರಣಿ ಕ್ಲೈಮ್ಯಾಕ್ಸ್ ಏನಾಗುತ್ತೆ ಅನ್ನೋದ್ರ ಜೊತೆಗೆ ಭಾರತಕ್ಕೆ ಇದು ಪ್ರತಿಷ್ಠೆಯ ಸರಣಿಯೂ ಆಗಿದೆ.
ಭಾರತಕ್ಕೆ ಗೆಲುವು ಎಷ್ಟು ಮುಖ್ಯ?
ಏಕದಿನ ಮಾದರಿಯಲ್ಲಿ ಭಾರತದಲ್ಲಿ ಸರಣಿ ಗೆಲ್ಲದ ನ್ಯೂಜಿಲೆಂಡ್
ಟಿ-20ಐ ಸರಣಿಗೂ ಮುನ್ನ ಏಕದಿನ ಸರಣಿ ಗೆಲುವು ಬೂಸ್ಟರ್
ಏಕದಿನ ಮಾದರಿಯಲ್ಲಿ ಭಾರತದ ಡಾಮಿನೇಷನ್ ಕಂಟಿನ್ಯೂ
ನಾಯಕನಾಗಿ ತವರಿನ ಮೊದಲ ಸರಣಿಯಲ್ಲೂ ಗಿಲ್ ಗೆ ಅಗ್ನಿಪರೀಕ್ಷೆ
2024ರ ಕೊನೆಯಲ್ಲಿ ಟೆಸ್ಟ್ ಕ್ಲೀನ್ ಸ್ವೀಪ್ ಸೋಲಿಗೆ ಸೇಡು
2026ರ ಮೊದಲ ಸರಣಿಯಲ್ಲೇ ಗೆಲುವಿನ ಶುಭಾರಂಭದ ಒತ್ತಡ
ಸೋ ಈ ಎಲ್ಲಾ ಕಾರಣಗಳಿಂದ ಭಾರತ ಈ ಪಂದ್ಯವನ್ನ ಗೆದ್ದು ಸರಣಿ ಕೈವಶ ಮಾಡಿಕೊಳ್ಳಲೇಬೇಕಿದೆ. ಹೀಗಾಗಿ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಎಲ್ಲದ್ರಲ್ಲೂ ದಿ ಬೆಸ್ಟ್ ಪರ್ಫಾಮೆನ್ಸ್ ಬಂದ್ರೆ ಮಾತ್ರವೇ ವಿನ್ ಆಗೋಕೆ ಸಾಧ್ಯವಾಗೋದು. ಕಿವೀಸ್ ಪಡೆ ಕೂಡ ಟಫ್ ಫೈಟ್ ಕೊಡೋದ್ರಿಂದ ಈ ಮ್ಯಾಚ್ ರಣರೋಚಕವಾಗೋದ್ರಲ್ಲಿ ಡೌಟೇ ಇಲ್ಲ.

ನೋಡಿರಿ

