ಬೆಂಗಳೂರಿನಲ್ಲೇ ನಡೆಯಲಿವೆ RCB ಪಂದ್ಯಗಳು – ಕಂಡೀಷನ್ ಹಾಕಿ ಓಕೆ ಎಂದ RCB ಮ್ಯಾನೇಜ್ಮೆಂಟ್

ಆರ್ಸಿಬಿ ಮ್ಯಾನೇಜ್ಮೆಂಟ್ ತನ್ನ ಮಾತನ್ನು ಮತ್ತೆ ಬದಲಿಸಿದೆ. ತವರಿನಲ್ಲಿ ಪಂದ್ಯವನ್ನು ಆಡಿಸಲ್ಲ, ಚಿನ್ನಸ್ವಾಮಿ ಸ್ಟೇಡಿಯಂ ಬೇಡವೇ ಬೇಡ ಎಂದು ಹೇಳಿದ್ದ ಆರ್ಸಿಬಿ ಈಗ ಮತ್ತೆ ವರಸೆ ಬದಲಿಸಿದೆ. ತಾವು ಹೇಳಿರುವ ಮಾತಿಗೆ ಒಪ್ಪಿಕೊಂಡರೆ ತವರಲ್ಲಿಯೇ ಪಂದ್ಯವನ್ನಾಡುತ್ತೇವೆ ಎಂದು ಕೆಸ್ಸಿಎಗೆ ಆರ್ಸಿಬಿ ಮ್ಯಾನೇಜ್ಮೆಂಟ್ ತಿಳಿಸಿದೆ.
ಇದನ್ನೂ ಓದಿ: ಟಗರುಪುಟ್ಟಿ ಡಿಚ್ಚಿಗೆ ಗುಜರಾತ್ ಪಲ್ಟಿ – RCB ಸಿಂಹಿಣಿಯರ Hat-Trick ಗರ್ಜನೆ
ಕಾಲ್ತುಳಿತದ ಕಹಿ ಪ್ರಕರಣದ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮ್ಯಾಚ್ ನಡೆಯುವುದು ಅನುಮಾನ ಎಂದು ಹೇಳಲಾಗುತ್ತಿತ್ತು. ಜೊತೆಗೆ ಆರ್ಸಿಬಿ ಮ್ಯಾನೇಜ್ಮೆಂಟ್ ಕೂಡಾ ನಾವು ಬೆಂಗಳೂರಲ್ಲಿ ಪಂದ್ಯವಾಡಲ್ಲ ಎಂದು ಖಡಾಖಂಡಿತವಾಗಿ ಹೇಳಿಕೊಂಡಿತ್ತು. ಇದೀಗ ಆರ್ಸಿಬಿ ಮನವೊಲಿಸಲು ಕೆಎಸ್ಸಿಎ ಸಕ್ಸಸ್ ಆಗಿದೆ. ಜೊತೆಗೆ ಆರ್ಸಿಬಿ ಕಂಡೀಷನ್ಸ್ಗೂ ಓಕೆ ಎಂದಿದೆ.
ಹಾಲಿ ಚಾಂಪಿಯನ್ ಆರ್ಸಿಬಿ ಮಾತ್ರ ಯಾವ ಕ್ರೀಡಾಂಗಣದಲ್ಲಿ ತನ್ನ ತವರು ಪಂದ್ಯಗಳನ್ನು ಆಡಲಿದೆ ಎಂಬುದು ಇನ್ನು ಖಚಿತವಾಗಿಲ್ಲ. ಇದೀಗ ಮುಂಬರುವ ಐಪಿಎಲ್ ಪಂದ್ಯಗಳು ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುವುದು ಅನುಮಾನ ಎನ್ನಲಾಗುತ್ತಿದೆ. ಇದೆಲ್ಲದರ ನಡುವೆ ಆರ್ಸಿಬಿ ಫ್ರಾಂಚೈಸಿ ತನ್ನ ತವರು ಮೈದಾನಗಳನ್ನು ನಡೆಸಲು ಎರಡು ಮೈದಾನಗಳನ್ನು ಆಯ್ಕೆ ಮಾಡಿದೆ ಎಂತಲೂ ವರದಿಯಾಗಿತ್ತು. ಜನವರಿ 16 ರಂದು ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿರುವ ಆರ್ಸಿಬಿ ಅದರಲ್ಲಿ, ‘ಕ್ರೀಡಾಂಗಣದಲ್ಲಿ 300 ರಿಂದ 350 ಎಐ ಕ್ಯಾಮೆರಾಗಳನ್ನು ಅಳವಡಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘದ ಬಳಿ ಔಪಚಾರಿಕವಾಗಿ ಪ್ರಸ್ತಾಪಿಸಲಾಗಿದೆ. ಈ ಕ್ಯಾಮೆರಾಗಳು ಕ್ರೀಡಾಂಗಣ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ಮೇಲ್ವಿಚಾರಣೆ ಮಾಡುತ್ತವೆ ಮತ್ತು ಜನಸಂದಣಿಯ ನಿರ್ವಹಣೆಗೆ ಸಹಾಯ ಮಾಡುತ್ತವೆ. ಫ್ರಾಂಚೈಸಿಯ ಪ್ರಕಾರ, ಈ ಕ್ಯಾಮೆರಾಗಳು ಕೆಎಸ್ಸಿಎ ಮತ್ತು ಭದ್ರತಾ ಸಂಸ್ಥೆಗಳು ಜನಸಂದಣಿಯನ್ನು ಮೇಲ್ವಿಚಾರಣೆ ಮಾಡಲು, ಕ್ರೀಡಾಂಗಣದ ಹೊರಗೆ ಸರತಿ ಸಾಲುಗಳನ್ನು ನಿರ್ವಹಿಸಲು ಮತ್ತು ಅಕ್ರಮವಾಗಿ ಕ್ರೀಡಾಂಗಣಕ್ಕೆ ಪ್ರವೇಶಿಸಲು ಪ್ರಯತ್ನಿಸುವವರನ್ನು ಮೇಲ್ವಿಚಾರಣೆ ಮಾಡಲು ಸಹಾಯ ಮಾಡುತ್ತದೆ. ಆರ್ಸಿಬಿ ಫ್ರಾಂಚೈಸಿ ಈ ಪ್ರಸ್ತಾವನೆಯನ್ನು ಕೆಎಸ್ಸಿಎ ಮುಂದಿಟ್ಟಿರುವುದು ಮಾತ್ರವಲ್ಲದೆ, ಎಐ ಕ್ಯಾಮೆರಾಗಳನ್ನು ಅಳವಡಿಸಲು ತಗಲುವ ವೆಚ್ಚವನ್ನು ತಾನೇ ಬರಿಸುವುದಾಗಿ ತಿಳಿಸಿದೆ. ಕ್ಯಾಮೆರಾಗಳನ್ನು ಅಳವಡಿಸಲು ಬೇಕಾಗುವ ಸರಿಸುಮಾರು 4.5 ಕೋಟಿ ವೆಚ್ಚವನ್ನು ಸಂಪೂರ್ಣವಾಗಿ ಭರಿಸುವುದಾಗಿ ಆರ್ಸಿಬಿ ತಿಳಿಸಿದೆ.

ನೋಡಿರಿ

