ಅಬ್ಬಬ್ಬಾ 1.35 ಲಕ್ಷಕ್ಕೆ ಮಾರಾಟ ಆಯ್ತು 11 ತಿಂಗಳ ಬಂಡೂರು ಕುರಿ! – ಇದರ ವಿಶೇಷತೆ ಏನು ಗೊತ್ತಾ?

ಅಬ್ಬಬ್ಬಾ 1.35 ಲಕ್ಷಕ್ಕೆ ಮಾರಾಟ ಆಯ್ತು 11 ತಿಂಗಳ ಬಂಡೂರು ಕುರಿ! – ಇದರ ವಿಶೇಷತೆ ಏನು ಗೊತ್ತಾ?

ಸಾಮಾನ್ಯವಾಗಿ ಕುರಿಗಳನ್ನು ಸಾವಿರಾರು ರೂಪಾಯಿಗೆ ಮಾರಾಟ ಮಾಡಲಾಗುತ್ತದೆ. ಆದ್ರೆ ಇಲ್ಲೊಂದು ಕಡೆ ಲಕ್ಷಾಂತರ ರೂಪಾಯಿಗೆ ಕುರಿ ಮರಿಯನ್ನು ಸೇಲ್‌ ಮಾಡಲಾಗಿದೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ ಶಬರಿಮಲೆ ಯಾತ್ರಿಗಳ ಮೇಲೆ ಹಲ್ಲೆ ಕೇಸ್!‌ – ಕನ್ನಡಿಗರ ರಕ್ಷಣೆ ನಮ್ಮ ಕರ್ತವ್ಯ ಎಂದ ಗೃಹಸಚಿವ!

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿ 11 ತಿಂಗಳ ಬಂಡೂರು ಕುರಿಯನ್ನು 1 ಲಕ್ಷದ 35 ಸಾವಿರ ರೂಪಾಯಿ ದಾಖಲೆ ಮೊತ್ತಕ್ಕೆ ಮಾರಾಟ ಮಾಡಲಾಗಿದೆ. ಕಿರುಗಾವಲು ಗ್ರಾಮದ ಯುವ ರೈತ ಉಲ್ಲಾಸ್‌ಗೌಡಗೆ ಸೇರಿದ ಬಂಡೂರು ಟಗರನ್ನು ಬೆಂಗಳೂರು ಮೂಲದ ಇಂಜಿನಿಯರ್ ಹರೀಶ್ ಎಂಬವರು ದಾಖಲೆ ಮೊತ್ತಕ್ಕೆ ಖರೀದಿ ಮಾಡಿದ್ದಾರೆ.

ಹರೀಶ್ ಕುರಿ ಸಾಕಾಣಿಕೆ ಮಾಡುತ್ತಾ ಬಂದಿದ್ದಾರೆ. ಇದೀಗ ಬಂಡೂರು ತಳಿಯನ್ನು ಅಭಿವೃದ್ಧಿಪಡಿಸಲು ಬಂಡೂರು ಟಗರನ್ನು ಖರೀದಿ ಮಾಡಿದ್ದಾರೆಇನ್ನೊಂದೆಡೆ, ದಾಖಲೆ ಬೆಲೆಗೆ ಟಗರು ಮಾರಾಟ ಮಾಡಿದ ಹಿನ್ನೆಲೆಯಲ್ಲಿ ರೈತ ಉಲ್ಲಾಸ್ ಗೌಡರಿಗೆ ಸ್ಥಳೀಯರಿಂದ ಸನ್ಮಾನ ಕೂಡ ನಡೆಸಲಾಗಿದೆ.

ತಳಿ ಯಾಕೆ ವಿಶೇಷತೆ ಏನು?

ಇದು ಮಂಡ್ಯ ಜಿಲ್ಲೆಯ ಬಂಡೂರು ಗ್ರಾಮದಿಂದ ಬಂದ ಪ್ರಸಿದ್ಧ ಕುರಿ ತಳಿಯಾಗಿದ್ದು, ಇದು ಮಾಂಸ ಮತ್ತು ತುಪ್ಪಕ್ಕೆ ಹೆಸರುವಾಸಿಯಾಗಿದೆ, ಮಾಂಸದಲ್ಲಿ ಕೊಬ್ಬಿನ ತೆಳುವಾದ ಎಳೆಗಳು ಇರುತ್ತವೆ. ಈ ತಳಿಯನ್ನು ಸಂರಕ್ಷಿಸಲು ಮತ್ತು ಸಂತಾನೋತ್ಪತ್ತಿ ಮಾಡಲು ಕೃತಕ ಗರ್ಭಧಾರಣೆ ತಂತ್ರಗಳನ್ನು ಅಳವಡಿಸಲಾಗುತ್ತಿದೆ.

Shwetha M