ಟಗರುಪುಟ್ಟಿ ಡಿಚ್ಚಿಗೆ ಗುಜರಾತ್ ಪಲ್ಟಿ – RCB ಸಿಂಹಿಣಿಯರ Hat-Trick ಗರ್ಜನೆ
ಡೆಲ್ಲಿಗೂ ಮಣ್ಣು ಮುಕ್ಕಿಸಿದ್ರೆ ಪ್ಲೇ ಆಫ್?

ಟಗರುಪುಟ್ಟಿ ಡಿಚ್ಚಿಗೆ ಗುಜರಾತ್ ಪಲ್ಟಿ – RCB ಸಿಂಹಿಣಿಯರ Hat-Trick ಗರ್ಜನೆಡೆಲ್ಲಿಗೂ ಮಣ್ಣು ಮುಕ್ಕಿಸಿದ್ರೆ ಪ್ಲೇ ಆಫ್?

ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಆರ್ ಸಿಬಿ ಚರಿತ್ರೆ ಸೃಷ್ಟಿಸಿದೆ. ಹ್ಯಾಟ್ರಿಕ್ ವಿಕ್ಟರಿಯೊಂದಿಗೆ ಕಂಪ್ಲೀಟ್ ಡಾಮಿನೇಷನ್ ಮಾಡ್ತಿದೆ. ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಗುಜರಾತ್ ವಿರುದ್ಧವೂ ಗೆದ್ದು ಟಾಪ್ ಆಫ್ ದಿ ಟೇಬಲ್​ನಲ್ಲಿ ಮೆರೀತಿದೆ. ಌಂಡ್ ಈ ಪಂದ್ಯದಲ್ಲಿ ನಮ್ಮ ಟಗರುಪುಟ್ಟಿ ದಾಖಲೆ ಬರೆದಿದ್ದಾರೆ.

ಇದನ್ನೂ ಓದಿ : KLಗೆ ಮತ್ತೆ ಸ್ಲಾಟ್ ಬದಲಾಗುತ್ತಾ? – 3ನೇ ಪಂದ್ಯಕ್ಕಿಲ್ಲ ಜಡ್ಡು & ಪ್ರಸಿದ್ಧ್?

ಉದ್ಘಾಟನಾ ಪಂದ್ಯದಲ್ಲೇ ಮುಂಬೈ ವಿರುದ್ಧ ನೆಕ್ ಟು ನೆಕ್ ಫೈಟ್ ಕೊಟ್ಟು ಲಾಸ್ಟ್ ಬಾಲಲ್ಲಿ ಗೆದ್ದಿದ್ದ ಆರ್​ಸಿಬಿ ನೆಕ್ಸ್​ಟ್ ಯುಪಿ ವಾರಿಯರ್ಸ್ ವಿರುದ್ಧ ಈಸಿಯಾಗಿ ವಿನ್ ಆಗಿತ್ತು. ಈಗ ಗುಜರಾತ್ ವಿರುದ್ಧದ ಮೂರನೇ ಪಂದ್ಯದಲ್ಲೂ ಭರ್ಜರಿ ಪರ್ಫಾಮೆನ್ಸ್ ನೀಡಿ ಹ್ಯಾಟ್ರಿಕ್ ವಿಕ್ಟರಿ ಗಳಿಸಿದೆ. ಟಾಸ್ ಸೋತ್ರೂ ಮ್ಯಾಚ್ ಗೆದ್ದು ವೀ ಆರ್ ಸ್ಟ್ರಾಂಗ್ ಅನ್ನೋದನ್ನ ಮತ್ತೆ ಪ್ರೂವ್ ಮಾಡಿದ್ದಾರೆ. ಮೊದಲ 2 ಪಂದ್ಯಗಳಲ್ಲಿ ಚೇಸ್ ಮಾಡಿ ಗೆದ್ದವ್ರು ಮೂರನೇ ಮ್ಯಾಚಲ್ಲಿ ಡಿಫೆನ್ಸ್ ಮಾಡಿಕೊಂಡು ಗೆದ್ದು ಬೀಗಿದ್ರು.

ಟಾಸ್ ಸೋತ ಆರ್ ಸಿಬಿಗೆ ರಾಧಾ ಯಾದವ್ ಬಲ!

ಪಂದ್ಯಕ್ಕೂ ಮುನ್ನ ಟಾಸ್ ಗೆದ್ದ ಗುಜರಾತ್ ಫಸ್ಟ್ ಬೌಲಿಂಗ್​ ಚೂಸ್ ಮಾಡಿಕೊಳ್ತು. ಹೀಗಾಗಿ ಬೆಂಗಳೂರು ಪರ ಗ್ರೇಸ್ ಹ್ಯಾರಿಸ್ ಮತ್ತು ಸ್ಮೃತಿ ಇನ್ನಿಂಗ್ಸ್ ಆರಂಭ ಮಾಡಿದ್ರು. ಯುಪಿ ವಿರುದ್ಧ 130 ಪ್ಲಸ್ ಜೊತೆಯಾಟ ಆಡಿದ್ದವ್ರು ಈ ಮ್ಯಾಚಲ್ಲಿ 26 ರನ್​ಗಳ ಪಾರ್ಟ್ನರ್​ಶಿಪ್​ನಲ್ಲೇ ಫಸ್ಟ್ ವಿಕೆಟ್ ಕಳ್ಕೊಂಡ್ರು. 17 ರನ್​ಗಳಿಗೆ ಗ್ರೇಸ್ ಔಟಾದ್ರೆ ಸ್ಮೃತಿ 5 ರನ್​ಗೆ ಸೀಮಿತವಾದ್ರು. ಹೇಮಲತಾ 4, ಗೌತಮಿ 9 ರನ್​ಗೆ ವಿಕೆಟ್ ಒಪ್ಪಿಸಿದ್ರು. ಸೋ ಅಲ್ಲಿಗೆ ಪವರ್​ ಪ್ಲೇನಲ್ಲೇ 43 ರನ್​ಗಳಿಗೆ 4 ವಿಕೆಟ್ ಢಮಾರ್.. ಸೋ ಅಲ್ಲಿಗೆ 120 ರಿಂದ 140 ರನ್ಸ್ ಬಂದ್ರೇ ಹೆಚ್ಚು ಅನ್ನುಸ್ತಿತ್ತು. ಬಟ್ ಇಂಥ ಟೈಮಲ್ಲಿ 5ನೇ ಕ್ರಮಾಂಕದಲ್ಲಿ ಬಂದ ರಾಧಾ ಯಾದವ್ ಕ್ರೂಶಿಯಲ್ ಇನ್ನಿಂಗ್ಸ್ ಆಡಿದ್ರು. ರಿಷಾ ಘೋಷ್ ಜೊತೆಗೂಡಿ 100ಪ್ಲಸ್ ರನ್ಸ್ ಜೊತೆಯಾಟ ಬಂತು. ರಾಧಾ 66 ರನ್ಸ್ ಹಾಘೇ ರಿಷಾ 44 ರನ್ ಬಾರಿಸಿದ್ರು. ನಡಿನ್ ಡಿ ಕ್ಲರ್ಕ್ 12 ಬಾಲಲ್ಲೇ 26 ರನ್ಸ್ ಸಿಡಿಸಿದ್ರು. ಅಂತಿಮವಾಗಿ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಆರ್​ಸಿಬಿ 182 ರನ್​ಗಳ ಬಿಗ್ ಟಾರ್ಗೆಟ್​ನೇ ಸೆಟ್ ಮಾಡ್ತು. ಌಂಡ್ ನೆಕ್ಸ್​ಟ್ ಬೌಲಿಂಗ್​ನಲ್ಲಂತೂ ಬಿರುಗಾಳಿ ಎಬ್ಬಿಸಿದ್ರು.

ಬೆಲ್ & ಶ್ರೇಯಾಂಕಾ ದಾಳಿಗೆ ಗುಜರಾತ್ ಧೂಳೀಪಟ!

183 ರನ್​ಗಳ ಗುರಿ ಬೆನ್ನಟ್ಟಿದ ಗುಜರಾತ್ ಆರಂಭದಿಂದಲೇ ವಿಕೆಟ್ ಕಳ್ಕೊಳ್ತಾ ಬಂತು. ತಂಡದ ಪರ ಭಾರ್ತಿ ಫುಲ್ಮಾಲಿ 39 ರನ್‌ಗಳೊಂದಿಗೆ ಗರಿಷ್ಠ ಸ್ಕೋರರ್ ಎನಿಸಿಕೊಂಡ್ರು. ಬೆತ್ ಮೂನಿ 27 ರನ್‌ ಹಾಗೇ ತನುಜಾ ಕನ್ವರ್ 21 ರನ್‌ ಗಳಿಸಿದ್ದು ಬಿಟ್ರೆ ಉಳಿದ ಬ್ಯಾಟರ್​ಗಳಿಂದ ಸಪೋರ್ಟ್ ಸಿಗ್ಲಿಲ್ಲ. ಅಂದ್ರೆ ಸಿಗೋಕೆ ನಮ್ಮ ಸಿಂಹಿಣಿಯರು ಬಿಡ್ಲಿಲ್ಲ. ನಮ್ಮ ಡಾಟ್ ಬಾಲ್ ಕ್ವೀನ್ ಲಾರೆನ್ ಬೆಲ್ 29 ರನ್ ನೀಡಿ 3 ವಿಕೆಟ್ ತೆಗೆದ್ರೆ ನಮ್ಮ ಶ್ರೇಯಾಂಕಾ ಪಾಟೀಲ್ ಅಂತೂ ಫೈಫರ್ ವಿಕೆಟ್ ತೆಗೆದು ದಾಖಲೆ ಬರೆದ್ರು. 3.5 ಓವರ್‌ಗಳನ್ನ ಬೌಲ್ ಮಾಡಿದ ಟಗರುಪುಟ್ಟಿ ಐದು ವಿಕೆಟ್‌ಗಳನ್ನು ಕಬಳಿಸಿ ತಂಡದ ಗೆಲುವಿನ ರೂವಾರಿಯಾದ್ರು. ಅರುಂಧತಿ ರೆಡ್ಡಿ ಮತ್ತು ನಾಡಿನ್ ಡಿ ಕ್ಲರ್ಕ್ ತಲಾ ಒಂದು ವಿಕೆಟ್ ತೆಗೆದ್ರು.

ಡಬ್ಲ್ಯೂಪಿಎಲ್ ನಲ್ಲಿ 5 ವಿಕೆಟ್ ಪಡೆದ ಅತ್ಯಂತ ಕಿರಿಯ ಆಟಗಾರ್ತಿ!

ಬೆಂಗಳೂರು ಪರ ಬೌಲಿಂಗ್​ನಲ್ಲಿ ಮಿಂಚಿದ ಶ್ರೇಯಾಂಕ ಪಾಟೀಲ್ ಡಬ್ಲ್ಯೂಪಿಎಲ್ ಇತಿಹಾಸದಲ್ಲಿ ಐದು ವಿಕೆಟ್‌ಗಳನ್ನು ಪಡೆದ ಅತ್ಯಂತ ಕಿರಿಯ ಆಟಗಾರ್ತಿ ಎನಿಸಿಕೊಂಡ್ರು. ಶ್ರೇಯಾಂಕಾ ಸ್ಪಿನ್‌‌ ಮ್ಯಾಜಿಕ್‌ ಮುಂದೆ ಗುಜರಾತ್ ಬೌಲರ್ಸ್ ಥಂಡಾ ಹೊಡೆದ್ರು. ಆದ್ರೆ ಕಳೆದೊಂದು ವರ್ಷದಿಂದ ಶ್ರೇಯಾಂಕಾ ಕೆರಿಯರ್ ಅಷ್ಟು ಈಸಿ ಇರ್ಲಿಲ್ಲ. ಇಂಜುರಿ ಕಾರಣದಿಂದ 2025ರ ಟೂರ್ನಿಯಲ್ಲಿ ಕಂಪ್ಲೀಟ್ ಆಗಿ ರೂಲ್ಡ್ ಔಟ್ ಆಗಿದ್ರು. ರಾಷ್ಟ್ರೀಯ ಪಂದ್ಯಗಳನ್ನೂ ಮಿಸ್ ಮಾಡಿಕೊಂಡ್ರು. ಆದ್ರೆ 2026ನೇ ಸೀಸನ್​ನಲ್ಲಿ ಸೂಪರ್ ಸ್ಟ್ರಾಂಗ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಇನ್ನು ಟೋಟಲ್ಲಾಗಿ 8 ಆಟಗಾರ್ತಿಯರು ಡಬ್ಲ್ಯೂಪಿಎಲ್ ಇತಿಹಾಸದಲ್ಲಿ ಫೈ ಫರ್ ವಿಕೆಟ್ ಪಡೆದಿದ್ದಾರೆ. ಅದ್ರಲ್ಲೂ ನಮ್ಮ ಎಲ್ಲಿಸ್ ಪೆರ್ರಿ 2024ರಲ್ಲಿ ಮುಂಬೈ ವಿರುದ್ಧ 15 ರನ್ಸ್ ನೀಡಿ 6 ವಿಕೆಟ್ ಪಡೆದಿದ್ರು. ಇದು ದಿ ಬೆಸ್ಟ್ ಪರ್ಫಾಮೆನ್ಸ್ ಆಗಿದೆ.

ಇನ್ನು ಗುಜರಾತ್ ವಿರುದ್ಧ ಗೆಲ್ಲೋ ಮೂಲಕ ಆರ್​ಸಿಬಿ ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಆವೃತ್ತಿಯ ಮೊದಲ ಮೂರು ಪಂದ್ಯಗಳನ್ನು ಗೆದ್ದ ದಾಖಲೆ ಬರೆದಿದೆ. ಅಂದ್ರೆ ಟೂರ್ನಿಯ ಇತಿಹಾಸದಲ್ಲೇ ಮೊದಲ 3 ಪಂದ್ಯಗಳನ್ನು ನಿರಂತರವಾಗಿ ಗೆದ್ದ ಮತ್ತೊಂದು ತಂಡವಿಲ್ಲ. ಒಟ್ನಲ್ಲಿ ಈ ಸೀಸನ್​ನಲ್ಲಿ ಆರ್​ಸಿಬಿ ಅದ್ಭುತವಾಗಿ ಜರ್ನಿ ಸ್ಟಾರ್ಟ್ ಮಾಡಿದೆ. ಇವತ್ತು 7.30ಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 4ನೇ ಪಂದ್ಯ ನಡೆಯಲಿದ್ದು ಈ ಮ್ಯಾಚ್​ನೂ ಗೆದ್ರೆ ಪ್ಲೇ ಆಫ್ ಗೆ ಹತ್ತಿರವಾಗುತ್ತೆ.

Shantha Kumari