ಚಿನ್ನಸ್ವಾಮಿಯಲ್ಲೇ ನಡೆಯುತ್ತೆ 2026ರ ಐಪಿಎಲ್ ಪಂದ್ಯಗಳು – ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಫ್ರಾಂಚೈಸಿ

ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಅಭಿಮಾನಿ ಬಳಗವನ್ನ ಹೊಂದಿರುವ ಆರ್ ಸಿಬಿಯಲ್ಲಿ ಪ್ರಮುಖ ಬೆಳವಣಿಗೆ ಆಗಿದೆ. ಚಿನ್ನಸ್ವಾಮಿ ಮೈದಾನದಲ್ಲಿ 2026ರ ಪಂದ್ಯಗಳು ಆಯೋಜನೆಯಾಗುವ ಸಾಧ್ಯತೆಗಳಿವೆ. ಈ ಬಗ್ಗೆ ಫ್ರಾಂಚೈಸಿಯ ಅಧಿಕೃತ ಪೇಜ್ ನಲ್ಲಿ ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ : ಕರ್ನಾಟಕವನ್ನೇ ಸೋಲಿಸಿದ ಕನ್ನಡಿಗ – ಪಡಿಕ್ಕಲ್ ಫೇಲ್.. ಎಡವಿದ್ದೆಲ್ಲಿ ಮಯಾಂಕ್?
2025ರ ಆವೃತ್ತಿಯಲ್ಲಿ ಬೆಂಗಳೂರು ತಂಡ ಕಪ್ ಗೆದ್ದಿತ್ತು. ಆದ್ರೆ ವಿಪರ್ಯಾಸ ಅಂದ್ರೆ ವಿಜಯೋತ್ಸವದ ವೇಳೆ ಕಾಲ್ತುಳಿತ ಸಂಭವಿಸಿ 11 ಜನ ಪ್ರಾಣ ಬಿಟ್ಟಿದ್ರು. ಇದಾದ್ಮೇಲೆ ಆ ಮೈದಾನದಲ್ಲಿ ಪಂದ್ಯಗಳೇ ನಡೀತಿಲ್ಲ. 2026ರ ಐಪಿಎಲ್ ಪಂದ್ಯಗಳು ನಡೆಯಲ್ಲ. ಬೇರೆ ಹೋಂ ಗ್ರೌಂಡ್ ನೋಡಿಕೊಳ್ಳಬೇಕು ಅನ್ನೋ ಸುದ್ದಿಗಳು ಹರಿದಾಡ್ತಿತ್ತು. ಆದ್ರೆ ಈಗ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಗೋ ಟೈಂ ಬಂದಿದೆ. ಅಂದ್ರೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಗಳು ನಡೆಯುವುದು ಖಚಿತವಾಗಿದೆ. ಕೆಎಸ್‌ಸಿಎ ಗೆ ಪಂದ್ಯ ನಡೆಸಲು ಷರತ್ತುಗಳನ್ನು ವಿಧಿಸಿ ರಾಜ್ಯ ಪೊಲೀಸ್ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಹಾಗೂ ರಾಜ್ಯ ಸರ್ಕಾರ ಒಪ್ಪಿಗೆ ನೀಡುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಇಂದು ಕೆಎಸ್‌ಸಿಎ ನಲ್ಲಿ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಸೀಮಂತ್ ಕುಮಾರ್ ಸಿಂಗ್ ಉನ್ನತ ಮಟ್ಟದ ಸಭೆಯನ್ನು ನಡೆಸಿದ್ದಾರೆ. ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್, ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್, KSCA ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಸೇರಿ ಹಲವರು ಸಭೆಯಲ್ಲಿ ಭಾಗಿಯಾಗಿದ್ದರು.
ಇತ್ತೀಚೆಗೆ ಆರ್ಸಿಬಿ ಫ್ರಾಂಚೈಸಿ ತನ್ನ ತವರು ಮೈದಾನಗಳನ್ನು ನಡೆಸಲು ಎರಡು ಮೈದಾನಗಳನ್ನು ಆಯ್ಕೆ ಮಾಡಿದೆ ಎಂತಲೂ ವರದಿಯಾಗಿತ್ತು. ಇದೀಗ ಇದೆಲ್ಲದರ ನಡುವೆ ಆರ್ಸಿಬಿ ಫ್ರಾಂಚೈಸಿ ಚಿನ್ನಸ್ವಾಮಿ ಮೈದಾನದಲ್ಲಿ ತವರು ಪಂದ್ಯಗಳನ್ನು ನಡೆಸಲು ಉತ್ಸುಕತೆ ತೋರಿದೆ. ಆದರೆ ಪಂದ್ಯಗಳು ನಡೆಯಬೇಕೆಂದರೆ ಕೆಲವು ಷರತ್ತುಗಳನ್ನು ಪೂರ್ಣಗೊಳಿಸುವಂತೆ ಕೆಎಸ್‌ಸಿಎ ಬಳಿ ಕೇಳಿದೆ. ಜನವರಿ 16 ರಂದು ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ಆರ್ಸಿಬಿ ಅದರಲ್ಲಿ, ‘ಕ್ರೀಡಾಂಗಣದಲ್ಲಿ 300 ರಿಂದ 350 ಎಐ ಕ್ಯಾಮೆರಾಗಳನ್ನು ಅಳವಡಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘದ ಬಳಿ ಔಪಚಾರಿಕವಾಗಿ ಪ್ರಸ್ತಾಪಿಸಲಾಗಿದೆ. ಈ ಕ್ಯಾಮೆರಾಗಳು ಕ್ರೀಡಾಂಗಣ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ಮೇಲ್ವಿಚಾರಣೆ ಮಾಡುತ್ತವೆ ಮತ್ತು ಜನಸಂದಣಿಯ ನಿರ್ವಹಣೆಗೆ ಸಹಾಯ ಮಾಡುತ್ತವೆ. ಫ್ರಾಂಚೈಸಿಯ ಪ್ರಕಾರ, ಈ ಕ್ಯಾಮೆರಾಗಳು ಕೆಎಸ್‌ಸಿಎ ಮತ್ತು ಭದ್ರತಾ ಸಂಸ್ಥೆಗಳು ಜನಸಂದಣಿಯನ್ನು ಮೇಲ್ವಿಚಾರಣೆ ಮಾಡಲು, ಕ್ರೀಡಾಂಗಣದ ಹೊರಗೆ ಸರತಿ ಸಾಲುಗಳನ್ನು ನಿರ್ವಹಿಸಲು ಮತ್ತು ಅಕ್ರಮವಾಗಿ ಕ್ರೀಡಾಂಗಣಕ್ಕೆ ಪ್ರವೇಶಿಸಲು ಪ್ರಯತ್ನಿಸುವವರನ್ನು ಮೇಲ್ವಿಚಾರಣೆ ಮಾಡಲು ಸಹಾಯ ಮಾಡುತ್ತದೆ. ಆರ್ಸಿಬಿ ಫ್ರಾಂಚೈಸಿ ಈ ಪ್ರಸ್ತಾವನೆಯನ್ನು ಕೆಎಸ್‌ಸಿಎ ಮುಂದಿಟ್ಟಿರುವುದು ಮಾತ್ರವಲ್ಲದೆ, ಎಐ ಕ್ಯಾಮೆರಾಗಳನ್ನು ಅಳವಡಿಸಲು ತಗಲುವ ವೆಚ್ಚವನ್ನು ತಾನೇ ಬರಿಸುವುದಾಗಿ ತಿಳಿಸಿದೆ. ಕ್ಯಾಮೆರಾಗಳನ್ನು ಅಳವಡಿಸಲು ಬೇಕಾಗುವ ಸರಿಸುಮಾರು 4.5 ಕೋಟಿ ವೆಚ್ಚವನ್ನು ಸಂಪೂರ್ಣವಾಗಿ ಭರಿಸುವುದಾಗಿ ಆರ್ಸಿಬಿ ತಿಳಿಸಿದೆ.

ನೋಡಿರಿ

