ಬೆಂಗಳೂರಿಗರ ಗಮನಕ್ಕೆ – ಇಂದು ಮತ್ತು ನಾಳೆ ಈ ಏರಿಯಾಗಳಲ್ಲಿ ಕರೆಂಟ್ ಕಟ್

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ವಿದ್ಯುತ್ ಕಂಬಗಳ ಬದಲಾವಣೆ, ಇತರ ಕೆಲಸ ಕಾರಣದಿಂದ ಈ ವಾರಾಂತ್ಯದಲ್ಲಿ ಬೆಂಗಳೂರಿನ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಮಾಡಲಿದೆ ಎಂದು ಹೇಳಿದೆ. ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಕರೆಂಟ್ ಇರುವುದಿಲ್ಲ ಎಂದು ಹೇಳಲಾಗಿದೆ. ವಿದ್ಯುತ್ ಜಾಲದ ಸುರಕ್ಷತೆ ಮತ್ತು ದಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದು ವಾರಾಂತ್ಯದಲ್ಲಿ ಈ ಕೆಲಸವನ್ನು ಮಾಡಲು ಆಯ್ಕೆ ಮಾಡಿಕೊಂಡಿದ್ದು, ಕೆಲಸಕ್ಕೆ ಹೋಗುವವರಿಗೆ ಇದರಿಂದ ಅನುಕೂಲವಾಗಲಿದೆ. ಶನಿವಾರ ಮತ್ತು ಭಾನುವಾರ (ಜನವರಿ 17 ಮತ್ತು 18) ಹಗಲಿನಲ್ಲಿ ವಿದ್ಯುತ್ ವ್ಯತ್ಯಯಕ್ಕೆ ಮಾಡಲಾಗುವುದು ಎಂದು ನಾಗರಿಕರಿಗೆ ಮೊದಲೇ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಬುದ್ಧಿಕಲಿಯದ ಪಾಕ್ – ಭಾರತದ ಗಡಿಯೊಳಗೆ ಡ್ರೋನ್ ಬಿಟ್ಟ ಶತ್ರುದೇಶ
ಈ ದಿನದಂದು ಟ್ರಾನ್ಸ್‌ಫಾರ್ಮರ್‌ಗಳನ್ನು ನವೀಕರಿಸುವುದು ಮತ್ತು ಫೀಡರ್‌ಗಳ ಸುರಕ್ಷತೆಗಳ ಬಗ್ಗೆ ಪರಿಶೀಲನೆ, ಇತರ ಕೆಲಸಗಳನ್ನು ಮಾಡಲಾಗುವುದು. ಇದರಿಂದ ಮುಂದಿನ ದಿನಗಳಲ್ಲಾಗುವ ಸಮಸ್ಯೆಗಳನ್ನು ತಡೆಯಬಹುದು ಎಂದು ಬೆಸ್ಕಾಂ ಹೇಳಿದೆ. ಬೆಂಗಳೂರಿನ ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿ ವಿದ್ಯುತ್ ಕಡಿತಗೊಳ್ಳಿದೆ.
ದಕ್ಷಿಣ ಬೆಂಗಳೂರು ಪ್ರದೇಶಗಳಾದ ಬೊಮ್ಮನಹಳ್ಳಿ, ಹೆಚ್‌ಎಸ್‌ಆರ್ ಲೇಔಟ್, ಕೂಡ್ಲು, ಜಕ್ಕಸಂದ್ರ, ಬೆಳ್ಳಂದೂರು ಮತ್ತು ಸರ್ಜಾಪುರ ರಸ್ತೆಯಲ್ಲಿ ವಿದ್ಯುತ್ ಕಡಿತವಾಗಲಿದೆ. ಪೂರ್ವ ಬೆಂಗಳೂರಿನ ಮಾರತಹಳ್ಳಿ, ವೈಟ್‌ಫೀಲ್ಡ್, ಕೆಆರ್ ಪುರಂ, ಮಹದೇವಪುರ, ಬಾಣಸವಾಡಿ, ಮತ್ತು ಹೊರಮಾವು ವಿದ್ಯುತ್ ಕಡಿತವಾಗಲಿದೆ.
ಬೆಂಗಳೂರಿನ ವಿದ್ಯುತ್ ಕಡಿತದ ಪರಿಣಾಮವನ್ನು ಕಡಿಮೆ ಮಾಡಲು, ನಿವಾಸಿಗಳು ಮತ್ತು ವ್ಯಾಪಾರಿಗಳು ಹಲವಾರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ವಿದ್ಯುತ್ ಕಡಿತಗೊಳ್ಳುವ ಮೊದಲು ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಪವರ್ ಬ್ಯಾಂಕ್‌ಗಳು ಸಂಪೂರ್ಣವಾಗಿ ಚಾರ್ಜ್ ಆಗಿವೆಯೇ ಎಂದು ನೋಡಿಕೊಳ್ಳಬೇಕು. ಮನೆಯಿಂದ ಕೆಲಸ ಮಾಡುವವರು, ಕೆಲಸದ ಸ್ಥಳದಲ್ಲಿ ವೈ-ಫೈ ಹೊಂದಿರುವ ಬಗ್ಗೆ ಮೊದಲೆ ಪರಿಶೀಲನೆ ಮಾಡಿಕೊಂಡಿರಬೇಕು. ಇನ್ವರ್ಟರ್‌ಗಳು, ಬ್ಯಾಕಪ್ ಲೈಟ್‌ಗಳು ಮತ್ತು ಇತರ ಅಗತ್ಯ ಸಾಧನಗಳು ಕಾರ್ಯನಿರ್ವಹಿಸುತ್ತಿವೆಯೇ ಎಂದು ಪರಿಶೀಲಿಸುವುದು ಅಗತ್ಯ ಎಂದು ಹೇಳಲಾಗಿದೆ.

ನೋಡಿರಿ

