ಯಾವೆಲ್ಲಾ ಸಾಕು ಪ್ರಾಣಿಗಳನ್ನ ಸಾಕಬೇಕು ಗೊತ್ತಾ? – ಈ ತಪ್ಪುಗಳನ್ನ ಮಾಡಲೇ ಬೇಡಿ

ಸಾಕಷ್ಟು ಜನ ಮನೆಯಲ್ಲಿ ಪ್ರಾಣಿಗಳನ್ನ ಸಾಕುತ್ತಾರೆ. ಕೆಲವರು ಕ್ರೇಜ್ಗೆ ಸಾಕಿದರೆ ಇನ್ನೂ ಕೆಲವರು ನೆಮ್ಮದಿಗಾಗಿ ಸಾಕುತ್ತಾರೆ. ನಾವು ಪ್ರಾಣಿಗಳನ್ನು ಮನೆಯಲ್ಲಿ ಪ್ರೀತಿಯಿಂದ ಪೋಷಿಸಿದರೆ ಸಂಪತ್ತು, ಸಂತೋಷ, ಸಮೃದ್ಧಿ ಮತ್ತು ಶಾಂತಿ ದೊರಕುತ್ತದೆ. ಆದರೆ ಪ್ರಾಣಿಗಳಿಗೆ ಯಾವುದೇ ರೀತಿಯ ಹಿಂಸೆ ನೀಡಬಾರದು ಎಂಬುದೂ ಮಹತ್ವದ ಸಂದೇಶವಾಗಿದೆ. ಹಾಗಿದ್ರೆ ಯಾವೆಲ್ಲಾ ಪ್ರಾಣಿಗಳನ್ನ ಮನೆಯಲ್ಲಿ ಸಾಕಬಹುದು ಅನ್ನೋದ್ದನ್ನ ನೋಡೋಣ.
ನಾಯಿ:
ನಾಯಿಯನ್ನು ಮನೆಗೆ ತರುವುದನ್ನು ಧರ್ಮಗ್ರಂಥಗಳಲ್ಲಿ ಶುಭವೆಂದು ಹೇಳಲಾಗಿದೆ. ನಾಯಿ ಮನೆಗೆ ಭದ್ರತೆ ನೀಡುವುದರ ಜೊತೆಗೆ, ಅದೃಷ್ಟ ಮತ್ತು ಸಕಾರಾತ್ಮಕತೆಯನ್ನು ಕೂಡ ತರುತ್ತದೆ ಎನ್ನಲಾಗುತ್ತದೆ. ಮನೆಯಲ್ಲಿ ನಾಯಿಯನ್ನು ಸಾಕಲು ಸಾಧ್ಯವಾಗದವರು ಪ್ರತಿದಿನ ಬೀದಿ ನಾಯಿಗಳಿಗೆ ಆಹಾರ ನೀಡಿದರೂ ಪುಣ್ಯ ಫಲ ಲಭಿಸುತ್ತದೆ ಹಾಗೂ ಜಾತಕದ ದೋಷಗಳು ಕಡಿಮೆಯಾಗುತ್ತವೆ ಎಂಬ ನಂಬಿಕೆ ಇದೆ.
ಮೊಲ:
ಶಾಸ್ತ್ರಗಳ ಪ್ರಕಾರ, ಮೊಲವನ್ನು ಮನೆಯಲ್ಲಿ ಸಾಕುವುದು ಅತ್ಯಂತ ಶುಭಕರವಾಗಿದೆ. ಇದು ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ದೂರಮಾಡಿ, ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ದುಷ್ಟ ದೃಷ್ಟಿಯಿಂದ ರಕ್ಷಣೆ ನೀಡುವುದರ ಜೊತೆಗೆ, ಆರ್ಥಿಕ ಅಭಿವೃದ್ಧಿಗೂ ಸಹಾಯಕವಾಗುತ್ತದೆ. ಆದ್ದರಿಂದ ಮೊಲವನ್ನು ಅದೃಷ್ಟ ತರುವ ಪ್ರಾಣಿಯಾಗಿ ಪರಿಗಣಿಸಲಾಗುತ್ತದೆ.
ಆಮೆ:
ಆಮೆಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಧಾರ್ಮಿಕವಾಗಿ ಬಹಳ ಮಹತ್ವದ್ದೆಂದು ಹೇಳಲಾಗುತ್ತದೆ. ಶಾಸ್ತ್ರಗಳಲ್ಲಿ ಆಮೆಯನ್ನು ಶ್ರೀ ವಿಷ್ಣುವಿನ ಅವತಾರವಾಗಿ ಪರಿಗಣಿಸಲಾಗಿದೆ. ಆಮೆಯನ್ನು ಪೋಷಿಸುವುದರಿಂದ ಹಣಕಾಸಿನ ಸ್ಥಿರತೆ, ಸಮಾಜದಲ್ಲಿ ಗೌರವ ಮತ್ತು ಜೀವನದಲ್ಲಿ ಸ್ಥೈರ್ಯ ಲಭಿಸುತ್ತದೆ ಎಂಬ ನಂಬಿಕೆ ಇದೆ.
ಮೀನು:
ಮೀನುಗಳನ್ನು ಮನೆಯಲ್ಲಿ ಸಾಕುವುದು ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮೀನುಗಳು ಲಕ್ಷ್ಮೀ ದೇವಿಗೆ ಸಂಬಂಧಿಸಿದವುಗಳಾಗಿ ಕಾಣಲ್ಪಡುವುದರಿಂದ, ಮನೆಯಲ್ಲಿ ಮೀನುಗಳನ್ನು ಇಟ್ಟುಕೊಂಡರೆ ಧನಾಗಮನ ಹೆಚ್ಚಾಗುತ್ತದೆ ಎನ್ನಲಾಗುತ್ತದೆ. ವಿಶೇಷವಾಗಿ ಗೋಲ್ಡನ್ ಮತ್ತು ಕಪ್ಪು ಮೀನುಗಳು ಮನೆಯಲ್ಲಿನ ಋಣಾತ್ಮಕ ಶಕ್ತಿಯನ್ನು ನಿವಾರಿಸಲು ಸಹಕಾರಿಯಾಗುತ್ತವೆ.

ನೋಡಿರಿ

