ಕದ್ದ ವಾಚ್ ಧರಿಸಿ ವಾಟ್ಸಾಪ್ ಸ್ಟೇಟಸ್ – ಮಾಲೀಕನ ಕೈಗೆ ಸಿಕ್ಕಿಬಿದ್ದ ಕಿಲಾಡಿ ಕಳ್ಳಿ

ಕದ್ದ ವಾಚ್ ಧರಿಸಿ ವಾಟ್ಸಾಪ್ ಸ್ಟೇಟಸ್ – ಮಾಲೀಕನ ಕೈಗೆ ಸಿಕ್ಕಿಬಿದ್ದ ಕಿಲಾಡಿ ಕಳ್ಳಿ

ಬೆಂಗಳೂರಿನಲ್ಲಿ ಮನೆ ಕೆಲಸದಾಕೆ ಕರಾಮತ್ತು ತೋರಿಸಲು ಹೋಗಿ ತಾನೇ ತೋಡಿದ ಹಳ್ಳಕ್ಕೆ ಬಿದ್ದಿದ್ದಾಳೆ. ಮನೆ ಮಾಲೀಕರ ಕ್ವಾಸ್ಟ್ಲಿ ವಾಚ್ ಕದ್ದ ಕಳ್ಳಿ, ತಾನೇ ಮಾಡಿದ ಎಡವಟ್ಟಿಗೆ ಸಿಕ್ಕಿಬಿದ್ದ ಘಟನೆಯ ವರದಿ ಇಲ್ಲಿದೆ.

ಇದನ್ನೂ ಓದಿ:ಸರ್ಕಾರಿ ಶಾಲಾ ಮಕ್ಕಳಿಗೆ ಸಿಹಿ ಸುದ್ದಿ – ವಿದ್ಯಾರ್ಥಿಗಳನ್ನು ಸೆಳೆಯಲು ಶಿಕ್ಷಣ ಇಲಾಖೆ ಕಸರತ್ತು

ಬೆಂಗಳೂರಿನ ಸರ್ಜಾಪುರದಲ್ಲಿ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರ ಮನೆಯಲ್ಲಿ ಸೌಮ್ಯ ಎಂಬಾಕೆ ಕೆಲಸಕ್ಕೆ ಬರುತ್ತಿದ್ದರು. ಕೆಲಸಕ್ಕೆ ಬಂದು ತಾನಾಯ್ತು ತನ್ನ ಕೆಲಸವಾಯ್ತು ಅನ್ನೋ ಹಾಗೆ ಇದ್ದಿದ್ದರೆ ಒಳ್ಳೆಯದಿತ್ತು. ಆದರೆ, ಸೌಮ್ಯ ಮನೆ ಕೆಲಸಕ್ಕೆ ಬಂದಾಗ ಮಾಲೀಕರ ಮನೆಯ ಚಿನ್ನಾಭರಣದ ಮೇಲೆ ಕಣ್ಣು ಹಾಕಿದ್ದಾಳೆ. ಮಾಲೀಕರ ಬ್ರಾಂಡ್ ವಾಚ್ ಮತ್ತು ಚಿನ್ನಾಭರಣವನ್ನು ಸಮಯ ನೋಡಿ ಕದ್ದಿದ್ದಾಳೆ. ಈ ಬಗ್ಗೆ ರೋಹಿತ್ ಅವರು ಜನವರಿ 5 ರಂದು ಪೊಲೀಸ್ ದೂರು ನೀಡಿದ್ದಾರೆ. ಡಿಸೆಂಬರ್ 8, 2025 ರಂದು ಅವರ ಮನೆಯಿಂದ 42 ಗ್ರಾಂ ಚಿನ್ನದ ಮಂಗಳಸೂತ್ರ, ಒಂದು ಜೊತೆ ಕಿವಿಯೋಲೆಗಳು ಮತ್ತು ಮೈಕೆಲ್ ಕೋರ್ಸ್ ಬ್ರಾಂಡ್ ಗಡಿಯಾರ ಕಾಣೆಯಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ರೋಹಿತ್ ಅವರು ಸೌಮ್ಯ ಅನ್ನು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಆಕೆ ಇಲ್ಲ ನಾನು ಕದ್ದಿಲ್ಲ. ಈ ಬಗ್ಗೆ ನನಗೆ ಏನು ಗೊತ್ತಿಲ್ಲ, ನಾನು ಯಾವುದನ್ನು ಕದ್ದಿಲ್ಲ ಎಂದು ಹೇಳಿದ್ದಾಳೆ. ನಂತರ ಕೆಲಸಕ್ಕೆ ಬರುವುದನ್ನು ನಿಲ್ಲಿಸಿದಳು. ಡಿಸೆಂಬರ್ 28 ರಂದು, ರೋಹಿತ್ ಆಕಸ್ಮಿಕವಾಗಿ ವಾಟ್ಸಾಪ್ ಪರಿಶೀಲಿಸುತ್ತಿದ್ದಾಗ, ಸೌಮ್ಯಾ ತನ್ನ ವಾಟ್ಸಾಪ್ ಸ್ಟೇಟಸ್​​​ನಲ್ಲಿ ಬ್ರಾಂಡ್ ವಾಚ್ ಧರಿಸಿದ ಫೋಟೋ ಹಾಕಿಕೊಂಡಿದ್ದಾಳೆ.

ಕಿಲಾಡಿ ಕಳ್ಳಿ ಸೌಮ್ಯ ಕದ್ದ ವಾಚ್ ಕೈಗೆ ಕಟ್ಟಿಕೊಂಡು ವಾಟ್ಸಾಪ್ ಸ್ಟೇಟಸ್‌ನಲ್ಲಿ ಫೋಟೋ ಹಾಕಿಕೊಂಡಿದ್ದಳು. ಇದನ್ನೇ ಆಧಾರವಾಗಿಟ್ಟುಕೊಂಡು ಮಾಲೀಕರು ಪೊಲೀಸರಿಗೆ ದೂರು ನೀಡಿದಾಗ ಆಕೆ ಸಿಕ್ಕಿಬಿದ್ದಿದ್ದಾಳೆ. ಪೊಲೀಸರು ಸೌಮ್ಯಾಳನ್ನು ಬಂಧಿಸಿದ್ದಾರೆ. ವಿಚಾರಣೆಯ ನಿಜ ಒಪ್ಪಿಕೊಂಡಿದ್ದಾಳೆ. ಕದ್ದ 4.5 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು ಮತ್ತು 20,000 ರೂ. ಮೌಲ್ಯದ ವಾಚ್‌ನ್ನು ವಶಪಡಿಸಿಕೊಳ್ಳಲಾಗಿದೆ.

Sulekha