ಹ್ಯಾಟ್ರಿಕ್ ವಿಕ್ಟರಿಯತ್ತ RCB – ಬೆಲ್ & ಗ್ರೇಸ್ ಮ್ಯಾಚ್ ಗೆಲ್ಲಿಸ್ತಾರಾ?
ಹೆಡ್ ಟು ಹೆಡ್ ರೆಕಾರ್ಡ್ಸ್ ಹೇಗಿದೆ?

ಪ್ರಸ್ತುತ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಆರ್ಸಿಬಿಯ ಜರ್ನಿ ಬೊಂಬಾಟ್ ಆಗಿದೆ. ಫಸ್ಟ್ ಮ್ಯಾಚಲ್ಲಿ ಮುಂಬೈ ಇಂಡಿಯನ್ಸ್ಗೆ ಮಣ್ಣು ಮುಕ್ಕಿಸಿ ಸೆಕೆಂಡ್ ಮ್ಯಾಚಲ್ಲಿ ಯುಪಿ ವಾರಿಯರ್ಸ್ ಬೇಟೆಯಾಡಿ ಈಗ ಗುಜರಾತ್ ವಿರುದ್ಧ ಹ್ಯಾಟ್ರಿಕ್ ವಿಕ್ಟರಿಗೆ ರೆಡಿಯಾಗಿದ್ದಾರೆ.
ಇದನ್ನೂ ಓದಿ : ಟೀಮ್ ಇಂಡಿಯಾಕ್ಕೆ ಬಲ ಈ ಸ್ವಿಂಗ್ ಸ್ಟಾರ್ – U19 ವಿಶ್ವಕಪ್‌ನಲ್ಲಿ ಭಾರತದ ಬ್ರಹ್ಮಾಸ್ತ್ರ ಹೆನಿನ್ ಪಟೇಲ್
ಡಬ್ಲ್ಯೂಪಿಎಲ್ನ 9ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿವೆ. ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಎರಡೂ ತಂಡಗಳಿಗೆ ಈ ವಿಕ್ಟರಿ ತುಂಬಾನೇ ಸ್ಪೆಷಲ್ ಆಗಲಿದೆ. ಬೆಂಗಳೂರು ತಂಡ ಈಗಾಗ್ಲೇ ಎರಡು ಪಂದ್ಯಗಳನ್ನ ಗೆದ್ದಿದ್ದು ಮೂರನೇ ಮ್ಯಾಚ್ನೂ ಗೆದ್ದು ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ. ಹಾಗೇ ಈ ಪಂದ್ಯದಲ್ಲಿ ಗೆಲ್ಲುವಂಥ ಮೋಸ್ಟ್ ಫೇವರೆಟ್ ಟೀಂ ಎನಿಸಿಕೊಳ್ತಿದೆ.
ಆರ್ ಸಿಬಿಯಲ್ಲಿದ್ದಾರೆ ಬೆಂಕಿ ಬ್ಯಾಟರ್ಸ್!
ಕಳೆದ ಆವೃತ್ತಿಗಳಲ್ಲಿ ಬೆಂಗಳೂರು ತಂಡದ ಬ್ಯಾಟಿಂಗ್ ಜೀವಾಳ ಎನಿಸಿಕೊಂಡಿದ್ದ ಎಲ್ಲಿಸ್ ಪೆರ್ರಿ ಈ ಸೀಸನ್ನಲ್ಲಿ ಇಲ್ಲ ಎಂದಾಗ್ಲೇ ಸಾಕಷ್ಟು ಗೊಂದಲ ಸೃಷ್ಟಿಯಾಗಿತ್ತು. ಅವ್ರ ಜಾಗದಲ್ಲಿ ನಿಂತು ಯಾರು ತಂಡವನ್ನ ಲೀಡ್ ಮಾಡೋದು ಅನ್ನೋ ಪ್ರಶ್ನೆ ಎದುರಾಗಿತ್ತು. ಆದ್ರೆ ಕಳೆದ ಎರಡು ಪಂದ್ಯಗಳಲ್ಲೂ ಆ ಗೊಂದಲ ನಿವಾರಣೆಯಾಗಿದೆ. ಮೊದಲ ಪಂದ್ಯದಲ್ಲಿ ಆಲ್ ರೌಂಡ್ ಪ್ರದರ್ಶನ ನೀಡಿದ್ದ ನಡಿನ್ ಡಿ ಕ್ಲರ್ಕ್ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡಿದ್ರು. ಬ್ಯಾಟ್ ಮತ್ತು ಬಾಲ್ ಎರಡ್ರಲ್ಲೂ ಇಂಪ್ಯಾಕ್ಟ್ ಮಾಡಿದ್ರು. ಎರಡನೇ ಪಂದ್ಯದಲ್ಲಿ ಗ್ರೇಸ್ ಹ್ಯಾರಿಸ್ ಮತ್ತು ಸ್ಮೃತಿ ಮಂದಾನ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ರು. ಹಾಗೇ ಬೌಲಿಂಗ್ನಲ್ಲೂ ಈ ಸಲ ಆರ್ಸಿಬಿ ಸೂಪರ್ ಸ್ಟ್ರಾಂಗ್ ಆಗಿದೆ. ಅದ್ರಲ್ಲೂ ಲಾರೆನ್ ಬೆಲ್ ಅಂತೂ ರನ್ಸ್ನೇ ಕೊಡಲ್ಲ. ಡಾಟ್ ಬಾಲ್ಗಳಲ್ಲೇ ಎದುರಾಳಿ ಬ್ಯಾಟರ್ಗಳನ್ನ ಕಟ್ಟಿ ಹಾಕ್ತಿದ್ದಾರೆ. ಮೊದಲ ಪಂದ್ಯದಲ್ಲಿ 4 ಓವರ್‌ಗಳಲ್ಲಿ 19 ಡಾಟ್ ಬಾಲ್ಸ್ ಹಾಕಿದ್ರು. ಎರಡನೇ ಪಂದ್ಯದಲ್ಲಿ 15 ಡಾಟ್ ಬಾಲ್ಸ್.. ಹಾಗೇ ಶ್ರೇಯಾಂಕಾ ಪಾಟೀಲ್ ಕಡೆಯಿಂದಲೂ ಬೆಸ್ಟ್ ಸಪೋರ್ಟ್ ಸಿಗ್ತಿದೆ. ಹೀಗೆ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡ್ರಲ್ಲೂ ಆರ್ಸಿಬಿ ಸ್ಟ್ರಾಂಗ್ ಆಗಿ ಕಾಣ್ತಿದೆ.
ಗುಜರಾತ್ ನಲ್ಲೂ ಇದ್ದಾರೆ ಪವರ್ ಫುಲ್ ಪ್ಲೇಯರ್ಸ್!
ಇನ್ನು ಗುಜರಾತ್ ಜೈಂಟ್ಸ್ ತಂಡದಲ್ಲೂ ಪವರ್ ಫುಲ್ ಪ್ಲೇಯರ್ ಗಳೇ ಇದ್ದಾರೆ. ಆಶ್ಲೀ ಗಾರ್ಡ್ನರ್ ಮತ್ತು ಬೆತ್ ಮೂನಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ, ಜಾರ್ಜಿಯಾ ವೇರ್‌ಹ್ಯಾಮ್ ಅವರ ಬೌಲಿಂಗ್ ಬ್ಯಾಲೆನ್ಸಿಂಗ್ ಆಗಿದೆ. ಡೆತ್ ಓವರ್‌ಗಳಲ್ಲಿ ಇಂಪ್ಯಾಕ್ಟ್ ಮಾಡ್ತಾರೆ. ಇನ್ನು ಉಭಯ ತಂಡಗಳು ಡಬ್ಲ್ಯೂಪಿಎಲ್ ಇತಿಹಾಸದಲ್ಲಿ 6 ಸಲ ಮುಖಾಮುಖಿಯಾಗಿದ್ದಾರೆ. ತಲಾ ಮೂರು ಮೂರು ಬಾರಿ ಪಂದ್ಯಗಳನ್ನ ಗೆದ್ದಿದ್ದಾರೆ. ಅಂದ್ರೆ ಎರಡೂ ತಂಡಗಳು ಫೈಟ್ ಕೊಟ್ಟುಕೊಂಡೇ ಬಂದಿವೆ. ಎರಡೂ ತಂಡಗಳು ಈ ಆವೃತ್ತಿಯಲ್ಲು ಚೆನ್ನಾಗಿ ಪರ್ಫಾಮ್ ಮಾಡ್ತಿದ್ದಾರೆ. ಹೆಡ್-ಟು-ಹೆಡ್ ದಾಖಲೆ ಕೂಡ ಈಕ್ವಲ್ ಇರೋದ್ರಿಂದ ಇವತ್ತಿನ ಪಂದ್ಯವೂ ಹೈವೋಲ್ಟೇಜ್ ಆಗಿರೋದ್ರಲ್ಲಿ ಡೌಟೇ ಇಲ್ಲ.
ಇನ್ನು ಪಾಯಿಂಟ್ಸ್ ಟೇಬಲ್ ಲೆಕ್ಕಾಚಾರ ನೋಡೋದಾದ್ರೆ ಸ್ಮೃತಿ ನಾಯಕತ್ವದ ಬೆಂಗಳೂರು ಟೀಂ ನೆಟ್ ರನ್ ರೇಟ್ ಚೆನ್ನಾಗಿದೆ. ಯುಪಿ ವಾರಿಯರ್ಸ್ ಅನ್ನು ಒಂಬತ್ತು ವಿಕೆಟ್‌ಗಳಿಂದ ಸೋಲಿಸಿತ್ತು. 143 ರನ್ಗಳ ಗುರಿಯನ್ನ 12.1 ಓವರ್‌ಗಳಲ್ಲೇ ತಲುಪಿತ್ತು. ಹೀಗಾಗಿ ನೆಟ್ರನ್ ರೇಟ್ ಜಾಸ್ತಿನೇ ಇದೆ. ಆಡಿರುವಂತ ಎರಡಕ್ಕೆ ಎರಡೂ ಪಂದ್ಯಗಳನ್ನ ಗೆದ್ದಿದೆ. ಮತ್ತೊಂದೆಡೆ ಗುಜರಾತ್ ತಂಡ ಮೊದಲ ಎರಡು ಪಂದ್ಯಗಳನ್ನ ಗೆದ್ರೂ ಕೂಡ ಮೂರನೇ ಮ್ಯಾಚಲ್ಲಿ ಸೋಲು ಕಂಡಿದೆ.

ನೋಡಿರಿ

