ಬಿಗ್‌ಬಾಸ್‌ ಗೆಲ್ಲೋದು ಗಿಲ್ಲಿ ಫಿಕ್ಸ್ – ಟೇಬಲ್ ತಟ್ಟಿ ಹೇಳಿದ ಶಿವಣ್ಣ

ಬಿಗ್‌ಬಾಸ್‌ ಗೆಲ್ಲೋದು ಗಿಲ್ಲಿ ಫಿಕ್ಸ್ –  ಟೇಬಲ್ ತಟ್ಟಿ  ಹೇಳಿದ  ಶಿವಣ್ಣ

 ಬಿಗ್‌ಬಾಸ್ ಮನೆಯೊಳಗೆ ಹಾಗೂ ಹೊರಗೆ ಎರಡು ಕಡೆ ಗಿಲ್ಲಿ ಕ್ರೇಜ್ ಹೆಚ್ಚಾಗಿದೆ. ಗಿಲ್ಲಿನ ಗೆಲ್ಲಿಸೋಕೆ ಇಡೀ ಕರುನಾಡೇ ಒಂದಾಗಿದೆ. ಇದರ ಬೆನ್ನಲ್ಲೇ ಇದೀಗ ಗಿಲ್ಲಿಯೇ ಬಿಗ್ ಬಾಸ್ ಗೆಲ್ಲೋದು ಎಂದು ಶಿವರಾಜ್​​ಕುಮಾರ್  ಭವಿಷ್ಯ ನುಡಿದಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ.  ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋನಲ್ಲಿ ಗಿಲ್ಲಿಯ ಪರಿಚಯ ಶಿವರಾಜ್​​ಕುಮಾರ್ ಅವರಿಗೆ ಆಗಿತ್ತು. ಕಾರ್ಯಕ್ರಮದಲ್ಲಿ ಗಿಲ್ಲಿ ಸಾಕಷ್ಟು ಮನರಂಜನೆ ನೀಡಿದ್ದರು. ಅಷ್ಟೇ ಅಲ್ಲ ಗಿಲ್ಲಿಯ ಒಂದು ಸಿಗ್‌ನೇಚರ್‌ ಸ್ಟೆಪ್ಸ್‌ ಶಿವಣ್ಣ ಮಾಡ್ತಾ ಇದ್ದರು.

ಇದನ್ನೂ ಓದಿ: ಸರ್ಕಾರಿ ಶಾಲಾ ಮಕ್ಕಳಿಗೆ ಸಿಹಿ ಸುದ್ದಿ – ವಿದ್ಯಾರ್ಥಿಗಳನ್ನು ಸೆಳೆಯಲು ಶಿಕ್ಷಣ ಇಲಾಖೆ ಕಸರತ್ತು

ಕಾರ್ಯಕ್ರಮ ಒಂದರಲ್ಲಿ ಮಾತನಾಡುವಾಗ, ಗಿಲ್ಲಿಯೇ ಗೆಲ್ಲೋದು ಎಂದು ಟೇಬಲ್ ತಟ್ಟಿ ಹೇಳಿದ್ದಾರೆ ಶಿವಣ್ಣ. ಇಷ್ಟೇ ಅಲ್ಲ, ಶಿವರಾಜ್​​ಕುಮಾರ್ ಅವರು ಗಿಲ್ಲಿಗೆ ಆಲ್​ ದಿ ಬೆಸ್ಟ್ ಕೂಡ ಹೇಳಿದ್ದಾರೆ.

ಈ ವಿಡಿಯೋ ವೈರಲ್ ಆಗುತ್ತಿದೆ. ಈ ಬಾರಿ ಬಿಗ್ ಬಾಸ್ ಮನೆಗೆ ಬಂದಿದ್ದ ಜೋಗಿ ಪ್ರೇಮ್ ಅವರು ಗಿಲ್ಲಿಗೆ ವಿಶೇಷ ಪ್ರೀತಿ ತೋರಿಸಿದ್ದರು. ಹೊರಗೆ ಬಂದ್ಮೇಲೆ ಸಿಗು’ ಎಂದಿದ್ದರು.

ಗಿಲ್ಲಿ ಕ್ರೇಜ್‌ ಹೇಗಿದೆ?

ಬಿಗ್ ಬಾಸ್‌ 12ರ ಮನೆಯೊಳಗೆ ಈಚೆಗೆ ಅಭಿಮಾನಿಗಳೆಲ್ಲಾ ಹೋಗಿದ್ದರು. ತಮ್ಮ ನೆಚ್ಚಿನ ಸ್ಪರ್ಧಿಗಳು ಬಂದಾಗ, ಅವರ ಎದುರು ಫ್ಯಾನ್ಸ್‌ ಜೋರಾಗಿ ಕೂಗಿದ್ದು, ನಂತರ ಸ್ಪರ್ಧಿಗಳು ಮನೆಗೆ ಬಂದ ಅಭಿಮಾನಿಗಳ ಎದುರು ಪಂಚಿಂಗ್‌ ಡೈಲಾಗ್‌ ಹೇಳಿದ್ದು ಎಲ್ಲವನ್ನು ವೀಕ್ಷಕರು ನೋಡಿದ್ದಾರೆ.

ಬಿಗ್‌ ಬಾಸ್‌ ಮನೆಯೊಳಗೆ ಹೋಗಿದ್ದ ಅಭಿಮಾನಿಯೊಬ್ಬರು ಈ ವಿಚಾರವನ್ನು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. “ಮೊದಲು ಮೂರ್ನಾಲ್ಕು ಸ್ಪರ್ಧಿಗಳು ಬಂದಾಗ, ಇಬ್ಬರು ಬಾಡಿಗಾರ್ಡ್ಸ್‌ನ ನಿಲ್ಲಿಸಿದ್ದರು. ಗಿಲ್ಲಿ ನಟ ಬಂದಾಗ ಆರು ಜನ ಬಾಡಿಗಾರ್ಡ್ಸ್‌ನ ನಿಲ್ಲಿಸಿದ್ದರು. ಅಲ್ಲದೇ, ಗಿಲ್ಲಿ ಬರುವುದಕ್ಕೂ ಮುನ್ನ 45 ನಿಮಿಷ ನಮಗೆ ಹೇಗಿರಬೇಕು, ಹೇಗೆ ನಡೆದುಕೊಳ್ಳಬೇಕು ಎಂಬುದನ್ನೆಲ್ಲಾ ಹೇಳಿಕೊಟ್ಟಿದ್ದರು. ಗಿಲ್ಲಿ ಕ್ರೇಜ್‌ ಹೇಗಿದೆ ಎಂಬುದು ಬಿಗ್‌ ಬಾಸ್‌ಗೂ ಗೊತ್ತಿದೆ” ಎಂದು ಹೇಳಿದ್ದಾರೆ.

Kishor KV