ಟೀಮ್ ಇಂಡಿಯಾಕ್ಕೆ ಬಲ ಈ ಸ್ವಿಂಗ್ ಸ್ಟಾರ್ – U19 ವಿಶ್ವಕಪ್‌ನಲ್ಲಿ ಭಾರತದ ಬ್ರಹ್ಮಾಸ್ತ್ರ ಹೆನಿನ್ ಪಟೇಲ್

ಟೀಮ್ ಇಂಡಿಯಾಕ್ಕೆ ಬಲ ಈ ಸ್ವಿಂಗ್ ಸ್ಟಾರ್ – U19 ವಿಶ್ವಕಪ್‌ನಲ್ಲಿ ಭಾರತದ ಬ್ರಹ್ಮಾಸ್ತ್ರ ಹೆನಿನ್ ಪಟೇಲ್

U19 ವಿಶ್ವಕಪ್​​ನಲ್ಲಿ ಟೀಮ್ ಇಂಡಿಯಾದ ಯಂಗ್ ಕ್ರಿಕೆಟರ್ಸ್ ಗೆಲುವಿನ ಶುಭಾರಂಭ ಮಾಡಿದ್ದಾರೆ. U19 ಏಕದಿನ ವಿಶ್ವಕಪ್‌ನಲ್ಲಿ ಭಾರತ ಯುವ ತಂಡ ಅಮೆರಿಕವನ್ನು 6 ವಿಕೆಟ್‌ಗಳಿಂದ ಸೋಲಿಸಿ ಗೆಲುವು ಸಾಧಿಸಿದ್ದಾರೆ. ಈ ಪಂದ್ಯದಲ್ಲಿ ಮಿಂಚಿದ್ದು ಭಾರತದ ಸ್ವಿಂಗ್ ಸ್ಟಾರ್ ಹೆನಿಲ್ ಪಟೇಲ್.

ಇದನ್ನೂ ಓದಿ: ಚಿನ್ನಸ್ವಾಮಿ ಸಹವಾಸ ಬೇಡಪ್ಪಾ ಬೇಡ – RCB ಮ್ಯಾನೇಜ್ಮೆಂಟ್ ನಡೆಗೆ KSCA ಶಾಕ್

ಐಸಿಸಿ ಅಂಡರ್-19 ವಿಶ್ವಕಪ್ ಟೂರ್ನಿ ಆರಂಭವಾಗಿದ್ದು, ಐದು ಬಾರಿಯ ಚಾಂಪಿಯನ್ ಭಾರತ ತಂಡ ಮೊದಲ ಪಂದ್ಯದಲ್ಲಿ ಜಯಭೇರಿ ಸಾಧಿಸಿದೆ. USA ತಂಡವನ್ನು ಟೀಮ್ ಇಂಡಿಯಾ 6 ವಿಕೆಟ್‌ಗಳಿಂದ ಸೋಲಿಸಿದೆ. ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಆಯುಷ್ ಮ್ಹಾತ್ರೆ  ಬೌಲಿಂಗ್ ಆಯ್ಕೆ ಮಾಡಿಕೊಂಡರು. ವೇಗದ ಬೌಲರ್ ಹೆನಿಲ್ ಪಟೇಲ್ ಬೌಲಿಂಗ್ ಅದ್ಭುತವಾಗಿತ್ತು. ಸ್ವಿಂಗ್ ಸ್ಟಾರ್ ಹೆನಿಲ್ ಬೌಲಿಂಗ್ ದಾಳಿಗೆ ಯುಎಸ್ಎ ಬ್ಯಾಟರ್ಸ್ ತತ್ತರಿಸಿ ಹೋಗಿದ್ದರು. ಯುಎಸ್ಎ ತಂಡವು ಕೇವಲ 35.2 ಓವರ್‌ಗಳಲ್ಲಿ 107 ರನ್‌ಗಳಿಗೆ ಆಲೌಟಾಯಿತು. ಒಂದರ ಹಿಂದೆ ಒಂದರಂತೆ ವಿಕೆಟ್ ಪಡೆಯುವ ಮೂಲಕ ಮೊದಲ ಪಂದ್ಯದಲ್ಲಿಯೇ ಐದು ವಿಕೆಟ್ ಗೊಂಚಲು ಪಡೆದು ಮಿಂಚಿದ್ದಾರೆ ಹೆನಿಲ್. ಹೆನಿಲ್ ಏಳು ಓವರ್ ಬೌಲಿಂಗ್ ಮಾಡಿದರು. ಈ ವೇಳೆ ಅವರು 2.30 ಎಕಾನಮಿ ದರದಲ್ಲಿ 16 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಕಬಳಿಸಿದರು. ಟೀಂ ಇಂಡಿಯಾ ಸ್ಟಾರ್ ಬೌಲರ್ ಭುವನೇಶ್ವರ್ ಕುಮಾರ್ ಅವರಂತೆ ಸ್ವಿಂಗ್ ಮಾಡಬಲ್ಲ ಹೆನಿಲ್ ಪಟೇಲ್ ಅವರ ಬೌಲಿಂಗ್ ಶೈಲಿಯನ್ನು ಟೀಮ್ ಇಂಡಿಯಾ ಕ್ರಿಕೆಟ್ ದಿಗ್ಗಜರು ಹೊಗಳಿದ್ದಾರೆ.

ಭಾರತದ ಇನ್ನಿಂಗ್ಸ್ ಆರಂಭವಾದ ಬಳಿಕ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದರಿಂದ ಭಾರತ ತಂಡಕ್ಕೆ 96 ರನ್‌ಗಳ ಗುರಿಯನ್ನು ನೀಡಲಾಯಿತು. ಭಾರತದ ಪರ ಅಭಿಗ್ಯಾನ್ ಕುಂಡು ಅಜೇಯ 42 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅಭಿಗ್ಯಾನ್ ಕುಂಡು ಕ್ರೀಸ್‌ಗೆ ಬಂದಾಗ, ಟೀಂ ಇಂಡಿಯಾ 25 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ವೈಭವ್ ಸೂರ್ಯವಂಶಿ, ವೇದಾಂತ್ ತ್ರಿವೇದಿ ಮತ್ತು ಆಯುಷ್ ಮ್ಹಾತ್ರೆ ಪೆವಿಲಿಯನ್‌ ಸೇರಿಕೊಂಡಿದ್ದರು. ನಂತರ ಕುಂಡು, ವಿಹಾನ್ ಮಲ್ಹೋತ್ರಾ ಮತ್ತು ಕನಿಷ್ಕ್ ಚೌಹಾಣ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ, ತಂಡವನ್ನು ಗೆಲುವಿನ ದಡ ತಲುಪಿಸಿದರು.

Sulekha